ಲಂಡನ್:ಲಾರ್ಡ್ ಅಂಗಳದಲ್ಲಿ ಶನಿವಾರ ನಡೆಯುತ್ತಿರುವಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್, ಭಾರತಕ್ಕೆ 323 ರನ್ ಗೆಲುವಿನ ಗುರಿ ನೀಡಿದೆ.
ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಇಯಾನ್ ಮಾರ್ಗನ್ ಬಳಗ ಈ ಪಂದ್ಯದಲ್ಲಿ ವಿರಾಟ್ ಬಳಗಕ್ಕೆ ದಿಟ್ಟ ಉತ್ತರ ನೀಡಿದೆ. ಜೋರೂಟ್ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 322 ರನ್‌ಗಳಿಸುವ ಮೂಲಕ ಸ್ಪರ್ಧಾತ್ಮಕ ಸವಾಲೊಡ್ಡಿದೆ.
(ಶತಕ ಸಿಡಿಸಿದ ರೂಟ್ ಆಟದ ವೈಖರಿ)
ಉತ್ತಮ ಆರಂಭ ಒದಗಿಸಿದಜಾನಿ ಬೈಸ್ಟ್ರೋವ್(38) ಹಾಗೂಜೇಸನ್ ರಾಯ್(40) ಜತೆಯಾಟಕ್ಕೆ ಸ್ಪಿನ್ನರ್‌ಕುಲದೀಪ್ ಯಾದವ್ ತಡೆಯಾದರು. ತಂಡ 69 ರನ್‌ಗಳಿಸಿದ್ದಾಗ ಕುಲದೀಪ್ ಎಸತಕ್ಕೆ ಬೈಸ್ಟ್ರೋವ್ ವಿಕೆಟ್ ಒಪ್ಪಿಸಿದರು.ಕುಲದೀಪ್ 3 ವಿಕೆಟ್ ಪಡೆದು ಆತಿಥೇಯರನ್ನು ಸಂಕಷ್ಟಕ್ಕೆ ಸಿಲುಕಿಸುವ ಪ್ರಯತ್ನ ನಡೆಸಿದರಾದರೂ ರೂಟ್(8 ಬೌಂಡರಿ, 1 ಸಿಕ್ಸ್) ಭರ್ಜರಿ ಆಟದ ನೆರವಿನಿಂದ ತಂಡವನ್ನು 300ರ ಗಡಿ ದಾಟಿಸಿದರು. ಕೇವಲ 30 ಎಸೆತಗಳಲ್ಲಿ 50 ರನ್‌ಗಳಿಸುವ ಮೂಲಕ ಡೇವಿಡ್ ವಿಲ್ಲೆ ರೂಟ್ ಆಟಕ್ಕೆಸಾಥ್ ನೀಡಿದರು.
ದೋನಿ 300!
ಉಮೇಶ್ ಯಾದವ್ ಬೌಲಿಂಗ್ ಎದುರಿಸಿದ ಜಾಸ್ ಬಟ್ಲರ್ ಹೊಡೆತ ತಪ್ಪಿ ಚೆಂಡು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ದೋನಿ ಕೈ ಸೇರಿತು. ಈ ಮೂಲಕ ದೋನಿ ಏಕದಿನ ಪಂದ್ಯಗಳಲ್ಲಿ 300ನೇ ಕ್ಯಾಚ್ ಹಿಡಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಈ ಸಾಧನೆ ಮಾಡಿದ ಭಾರತದ ಮೊದಲ ವಿಕೆಟ್ ಕೀಪರ್ ಆಗಿದ್ದು, ಅಂತರರಾಷ್ಟ್ರೀಯ ವಿಕೆಟ್ ಕೀಪರ್‌ಗಳ ಕ್ಯಾಚ್ ದಾಖಲೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಆ್ಯಡಮ್ ಗಿಲ್‌ಕ್ರಿಸ್ಟ್(417), ದಕ್ಷಿಣ ಆಫ್ರಿಕಾದ ಮಾರ್ಕ್ ಬೌಚರ್(402), ಶ್ರೀಲಂಕಾದ ಕುಮಾರ್ ಸಂಗಾಕ್ಕಾರ(383) ಮೊದಲ ಮೂರು ಸ್ಥಾನ ಹೊಂದಿದ್ದಾರೆ.
ಸ್ಕೋರ್
ಇಂಗ್ಲೆಂಡ್: 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟ, 322 ರನ್
ಜೆಇ ರೂಟ್– 113, ಮಾರ್ಗನ್ –53, ಡಿಜೆ ವಿಲ್ಲೆ–50,ಜಾನಿ ಬೈಸ್ಟ್ರೋವ್–38 ಹಾಗೂ ಜೇಸನ್ ರಾಯ್–40
ಭಾರತ: ಕುಲದೀಪ್ ಯಾದವ್–3/68 ; ಉಮೇಶ್ ಯಾದವ್–1/63; ಚಾಹಲ್–1/43 ; ಹಾರ್ದಿಕ್ ಪಾಂಡ್ಯ– 1/70
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.