ADVERTISEMENT

IND vs ENG 5th Test: ಇಂಗ್ಲೆಂಡ್ 218ಕ್ಕೆ ಆಲೌಟ್; ಭಾರತ 135/1

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಮಾರ್ಚ್ 2024, 9:24 IST
Last Updated 7 ಮಾರ್ಚ್ 2024, 9:24 IST
<div class="paragraphs"><p>ಟೀಮ್ ಇಂಡಿಯಾ ಆಟಗಾರರ ಸಂಭ್ರಮ</p></div>

ಟೀಮ್ ಇಂಡಿಯಾ ಆಟಗಾರರ ಸಂಭ್ರಮ

   

(ರಾಯಿಟರ್ಸ್ ಚಿತ್ರ)

ಧರ್ಮಶಾಲಾ: ಕುಲದೀಪ್ ಯಾದವ್ (72ಕ್ಕೆ 5) ಹಾಗೂ ರವಿಚಂದ್ರನ್ ಅಶ್ವಿನ್ (51ಕ್ಕೆ 4) ದಾಳಿಗೆ ಸಿಲುಕಿರುವ ಪ್ರವಾಸಿ ಇಂಗ್ಲೆಂಡ್ ತಂಡವು ಇಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 57.4 ಓವರ್‌ಗಳಲ್ಲಿ 218 ರನ್‌ಗಳಿಗೆ ಆಲೌಟ್ ಆಗಿದೆ.

ADVERTISEMENT

ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತ ಮೊದಲ ದಿನದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದೆ. ಇನಿಂಗ್ಸ್ ಮುನ್ನಡೆಗೆ ಇನ್ನು 83 ರನ್ ಗಳಿಸಬೇಕಿದೆ. ನಾಯಕ ರೋಹಿತ್ ಶರ್ಮಾ (52*) ಹಾಗೂ ಶುಭಮನ್ ಗಿಲ್ (26) ಕ್ರೀಸಿನಲ್ಲಿದ್ದಾರೆ.

ಯಶಸ್ವಿ ಜೈಸ್ವಾಲ್ 57 ರನ್ ಗಳಿಸಿ ಔಟ್ ಆದರು. ರೋಹಿತ್ ಹಾಗೂ ಜೈಸ್ವಾಲ್ ಮೊದಲ ವಿಕೆಟ್‌ಗೆ ಶಕದ ಜೊತೆಯಾಟದಲ್ಲಿ ಭಾಗಿಯಾದರು.

ಈ ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸೋಕ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಜಾಕ್ ಕ್ರಾಲಿ ಹೊರತುಪಡಿಸಿ ಇತರೆಲ್ಲ ಬ್ಯಾಟರ್‌ಗಳು ವೈಫಲ್ಯವನ್ನು ಅನುಭವಿಸಿದರು.

ಕ್ರಾಲಿ 79 ರನ್ ಗಳಿಸಿ ಕುಲದೀಪ್ ಬಲೆಗೆ ಬಿದ್ದರು. ಬೆನ್ ಡಕೆಟ್ (27), ಓಲಿ ಪೋಪ್ (11), ಜೋ ರೂಟ್ (26), ಜಾನಿ ಬೆಸ್ಟೊ (29) ರನ್ ಗಳಿಸಿ ಔಟ್ ಆದರು. ನಾಯಕ ಬೆನ್ ಸ್ಟೋಕ್ಸ್‌ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

ಇನ್ನುಳಿದಂತೆ ಬೆನ್ ಫೋಕ್ಸ್ 24, ಟಾಮ್ ಹಾರ್ಟ್ಲಿ 6, ಹಾಗೂ ಶೋಯಬ್ ಬಷೀರ್ ಅಜೇಯ 11 ರನ್ ಗಳಿಸಿದರು. ಮಾರ್ಕ್ ವುಡ್ ಹಾಗೂ ಜೇಮ್ಸ್ ಆ್ಯಂಡರ್ಸನ್ ಸಹ ಶೂನ್ಯಕ್ಕೆ ಔಟ್ ಆದರು.

ಕುಲದೀಪ್ ಯಾದವ್ 72 ರನ್ ನೀಡಿ ಐದು ವಿಕೆಟ್ ಗಳಿಸಿ ಮಿಂಚಿದರು. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಪೂರ್ಣಗೊಳಿಸಿದರು.

ಮತ್ತೊಂದೆಡೆ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಅಶ್ವಿನ್ ನಾಲ್ಕು ವಿಕೆಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.