ಮ್ಯಾಂಚೆಸ್ಟರ್:ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಯಲ್ಲಿ ವೇಗವಾಗಿ 11 ಸಾವಿರ ರನ್ ಗಳಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ಮಾಡಿದರು.
230 ಪಂದ್ಯ(222 ಇನಿಂಗ್ಸ್)ಗಳಲ್ಲಿ ಈ ಮೈಲುಗಲ್ಲು ಮುಟ್ಟಿದ ಅವರು ಸಚಿನ್ ತೆಂಡೂಲ್ಕರ್ (284 ಪಂದ್ಯ) ದಾಖಲೆಯನ್ನು ಮುರಿದರು. 2002ರ ಜನವರಿ 28ರಂದು ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸಚಿನ್ 11 ಸಾವಿರ ರನ್ ತಲುಪಿದ್ದರು.
ಭಾರತ–ಪಾಕಿಸ್ತಾನ ನಡುವೆ ಭಾನುವಾರದಪಂದ್ಯದಲ್ಲಿ ಅವರು 57 ರನ್ ಗಳಿಸಿದಾಗ ಈ ದಾಖಲೆ ತಲುಪಿದರು. ಇಲ್ಲಿ ಅವರು ಒಟ್ಟು 77 ರನ್ ಗಳಿಸಿದರು. ಕಳೆದಪಂದ್ಯದಲ್ಲಿ ಕೊಹ್ಲಿ82 ರನ್ ದಾಖಲಿಸಿದ್ದರು.
ಕೊಹ್ಲಿ, ಹನ್ನೊಂದು ಸಾವಿರ ರನ್‌ಗಳ ಗಡಿ ದಾಟಿದ ವಿಶ್ವದ ಒಂಬತ್ತನೇ ಆಟಗಾರ ಹಾಗೂಭಾರತದ ಪರ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ನಂತರದ ಕ್ರಿಕೆಟಿಗನಾಗಿದ್ದಾರೆ.
ವೇಗವಾಗಿ 11 ಸಾವಿರ ರನ್ ಪೂರೈಸಿದ ಆಟಗಾರರ ವಿವರ
ಆಟಗಾರ | ದೇಶ | ಪಂದ್ಯ | ಇನಿಂಗ್ಸ್ |
ವಿರಾಟ್ ಕೊಹ್ಲಿ | ಭಾರತ | 230 | 222 |
ಸಚಿನ್ ತೆಂಡೂಲ್ಕರ್ | ಭಾರತ | 284 | 276 |
ರಿಕಿ ಪಾಂಟಿಂಗ್ | ಆಸ್ಟ್ರೇಲಿಯಾ | 295 | 286 |
ಸೌರವ್ ಗಂಗೂಲಿ | ಭಾರತ | 298 | 288 |
ಜಾಕ್‌ಕಾಲಿಸ್ | ದಕ್ಷಿಣ ಆಫ್ರಿಕಾ | 307 | 293 |
ಕುಮಾರಸಂಗಾಕ್ಕಾರ | ಶ್ರೀಲಂಕಾ | 340 | 318 |
ಇಂಜಮಾಮ್ ಉಲ್ ಹಕ್ | ಪಾಕಿಸ್ತಾನ | 349 | 324 |
ಸನತ್ ಜಯಸೂರ್ಯ | ಶ್ರೀಲಂಕಾ | 363 | 354 |
ಮಹೇಲಾ ಜಯವರ್ದನೆ | ಶ್ರೀಲಂಕಾ | 394 | 368 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.