ADVERTISEMENT

T20 WC: ಜಿಂಬಾಬ್ವೆ ಎದುರು ಗೆದ್ದ ಭಾರತ: ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಸವಾಲು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 11:52 IST
Last Updated 6 ನವೆಂಬರ್ 2022, 11:52 IST
   

ಮೆಲ್ಬರ್ನ್‌: ಐಸಿಸಿ ಟಿ20 ವಿಶ್ವಕಪ್‌ ಸರಣಿಯ ಸೂಪರ್ 12ರ ಎರಡನೇ ಗುಂಪಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ.

ಮೆಲ್ಬರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದಿದ್ದ ಭಾರತ ಮೊದಲು ಬ್ಯಾಟ್‌ ಮಾಡಿ, 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 186 ರನ್‌ ಗಳಿಸಿತ್ತು. ಈ ಮೂಲಕ ಜಿಂಬಾಬ್ವೆಗೆ ಸವಾಲಿನ ಮೊತ್ತದ ಗುರಿ ನೀಡಿತ್ತು.

ಇದನ್ನು ಬೆನ್ನು ಹತ್ತಿದ ಜಿಂಬಾಬ್ವೆ 17.2 ಓವರ್‌ಗಳಲ್ಲಿ ಸರ್ವಪತನ ಕಂಡು ಕೇವಲ 115 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಭಾರತ 71 ರನ್‌ಗಳ ಜಯ ದಾಖಲಿಸಿದೆ.

ADVERTISEMENT

ಜಿಂಬಾಬ್ವೆ ಪರ ಸಿಖಂದರ್‌ ರಾಜಾ 34 (24), ಬರ್ಲ್‌ 35(22) ಹೊರತುಪಡಿಸಿದರೆ ಬೇರೆ ಯಾವ ಆಟಗಾರರಿಂದಲೂ ಉತ್ತಮ ಆಟ ಮೂಡಿ ಬರಲೇ ಇಲ್ಲ.

ಭಾರತದ ಪರ ರವಿಚಂದ್ರನ್‌ ಅಶ್ವಿನ್‌ 3 ವಿಕೆಟ್‌ ಪಡೆದರೆ, ಮೊಹಮದ್‌ ಶಮಿ ಮತ್ತು ಹರ್ದಿಕ್‌ ಪಂಡ್ಯಾ ತಲಾ ಎರಡು ವಿಕೆಟ್‌ ಪಡೆದರು.

ಸೂಪರ್ 12ರ ಎರಡನೇ ಗುಂಪಿನಲ್ಲಿ ಭಾರತ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಸೆಮಿಫೈನಲ್‌ನಲ್ಲಿ ಭಾರತವು ಇಂಗ್ಲೆಂಡ್‌ ಅನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.