ADVERTISEMENT

ಮನೀಷ್‌ ಪಾಂಡೆ ಅಜೇಯ ಶತಕ

ನ್ಯೂಜಿಲೆಂಡ್‌ ‘ಎ’ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ‘ಎ’ ತಂಡಕ್ಕೆ ಜಯ

ಪಿಟಿಐ
Published 9 ಡಿಸೆಂಬರ್ 2018, 20:15 IST
Last Updated 9 ಡಿಸೆಂಬರ್ 2018, 20:15 IST
ಮನೀಷ್‌ ಪಾಂಡೆ
ಮನೀಷ್‌ ಪಾಂಡೆ   

ಮೌಂಟ್‌ ಮೌಂಗಾನುಯಿ: ನಾಯಕ ಮನೀಷ್‌ ಪಾಂಡೆ (ಔಟಾಗದೆ 111; 109ಎ, 5ಬೌಂ, 3ಸಿ) ಅವರ ಆಕರ್ಷಕ ಶತಕದ ಬಲದಿಂದ ಭಾರತ ‘ಎ’ ತಂಡ ನ್ಯೂಜಿಲೆಂಡ್‌ ‘ಎ’ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಗೆದ್ದಿದೆ. ಇದರೊಂದಿಗೆ ಇನ್ನೊಂದು ಪಂದ್ಯದ ಆಟ ಬಾಕಿ ಇರುವಂತೆ ಸರಣಿ ಕೈವಶ ಮಾಡಿಕೊಂಡಿದೆ.

ಬೇ ಓವಲ್‌ ಮೈದಾನದಲ್ಲಿ ಭಾನುವಾರ ಮೊದಲು ಬ್ಯಾಟ್‌ ಮಾಡಿದ ಕೋರಿ ಆ್ಯಂಡರ್ಸನ್‌ ಸಾರಥ್ಯದ ನ್ಯೂಜಿಲೆಂಡ್‌ ‘ಎ’ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 299 ರನ್‌ ದಾಖಲಿಸಿತು.

300 ರನ್‌ಗಳ ಕಠಿಣ ಗುರಿಯನ್ನು ಮನೀಷ್‌ ಮುಂದಾಳತ್ವದ ಭಾರತ ‘ಎ’ 49 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ADVERTISEMENT

ಬ್ಯಾಟಿಂಗ್‌ ಆರಂಭಿಸಿದ ಕಿವೀಸ್‌ ನಾಡಿನ ತಂಡಕ್ಕೆ ಖಲೀಲ್‌ ಅಹ್ಮದ್‌ ಮೊದಲ ಓವರ್‌ನಲ್ಲೇ ಆಘಾತ ನೀಡಿದರು. ಐದನೇ ಎಸೆತದಲ್ಲಿ ಹ್ಯಾಮಿಷ್‌ ರುದರ್‌ಫೋರ್ಡ್‌ (8) ವಿಕೆಟ್‌ ನೀಡಿದರು. ನಂತರ ಜಾರ್ಜ್‌ ವರ್ಕರ್‌ (99;106ಎ, 8ಬೌಂ, 1ಸಿ) ಮತ್ತು ವಿಲ್‌ ಯಂಗ್‌ (102; 106ಎ, 6ಬೌಂ, 3ಸಿ) ಭಾರತದ ಬೌಲರ್‌ಗಳನ್ನು ಕಾಡಿದರು. ಈ ಜೋಡಿ ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 190ರನ್‌ ಗಳಿಸಿ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿತು. ಇವರು ಔಟಾದ ನಂತರ ಆತಿಥೇಯರು ಕುಸಿತದ ಹಾದಿ ಹಿಡಿದರು.

ಗುರಿ ಬೆನ್ನಟ್ಟಿದ ಭಾರತ 58ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತ್ತು. ಶ್ರೇಯಸ್‌ ಅಯ್ಯರ್‌ (59; 63ಎ, 6ಬೌಂ, 1ಸಿ), ಮನೀಷ್‌ ಮತ್ತು ವಿಜಯ್‌ ಶಂಕರ್‌ (59; 56ಎ, 4ಬೌಂ, 1ಸಿ) ಆಕರ್ಷಕ ಆಟ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌ ‘ಎ’: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 299 (ಜಾರ್ಜ್‌ ವರ್ಕರ್‌ 99, ವಿಲ್‌ ಯಂಗ್‌ 102, ಡೆರಿಲ್‌ ಮಿಷೆಲ್‌ 45, ಕೋಲ್‌ ಮೆಕ್‌ಕೊಂಚೀ 21; ಕೆ.ಖಲೀಲ್‌ ಅಹ್ಮದ್‌ 65ಕ್ಕೆ2, ಸಿದ್ದಾರ್ಥ್‌ ಕೌಲ್‌ 36ಕ್ಕೆ1, ನವದೀಪ್ ಸೈನಿ 68ಕ್ಕೆ2, ಅಕ್ಷರ್‌ ಪಟೇಲ್‌ 57ಕ್ಕೆ1, ಕೆ.ಗೌತಮ್‌ 40ಕ್ಕೆ1).

ಭಾರತ ‘ಎ’: 49 ಓವರ್‌ಗಳಲ್ಲಿ 5 ವಿಕೆಟ್‌ಗೆ 300 (ಶುಭಮನ್‌ ಗಿಲ್‌ 25, ಮಯಂಕ್‌ ಅಗರವಾಲ್‌ 25, ಶ್ರೇಯಸ್‌ ಅಯ್ಯರ್‌ 59, ಮನೀಷ್‌ ಪಾಂಡೆ ಔಟಾಗದೆ 111, ವಿಜಯ್‌ ಶಂಕರ್‌ 59, ಅಕ್ಷರ್‌ ಪಟೇಲ್‌ ಔಟಾಗದೆ 12; ಹ್ಯಾಮಿಷ್‌ ಬೆನೆಟ್‌ 45ಕ್ಕೆ2, ಸೇಥ್‌ ರ‍್ಯಾನ್ಸ್‌ 73ಕ್ಕೆ1, ಕೋಲ್‌ ಮೆಕ್‌ಕೊಂಚೀ 39ಕ್ಕೆ2).

ಫಲಿತಾಂಶ: ಭಾರತ ‘ಎ’ ತಂಡಕ್ಕೆ 5 ವಿಕೆಟ್‌ ಜಯ. 3 ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.