ADVERTISEMENT

ಚೆಂಡು, ಟಾಸ್‌ ಬಗ್ಗೆ ರೋಹಿತ್‌ ಟ್ವೀಟ್‌; ಖಾತೆ ಹ್ಯಾಕ್‌ ಎಂದ ಅಭಿಮಾನಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮಾರ್ಚ್ 2022, 13:11 IST
Last Updated 1 ಮಾರ್ಚ್ 2022, 13:11 IST
ರೋಹಿತ್‌ ಶರ್ಮಾ
ರೋಹಿತ್‌ ಶರ್ಮಾ   

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರ ಟ್ವಿಟರ್‌ ಖಾತೆಯಿಂದ ಮಂಗಳವಾರ ಮಾಡಲಾಗಿರುವ ಟ್ವೀಟ್‌ಗಳು ವೈರಲ್‌ ಆಗಿದ್ದು, ಅಭಿಮಾನಿಗಳು ರೋಹಿತ್‌ ಟ್ವಿಟರ್ ಖಾತೆ ಹ್ಯಾಕ್‌ ಆಗಿರುವ ಅನುಮಾನ ವ್ಯಕ್ತಪಡಿಸಿದ್ದಾರೆ.

ಮಾರ್ಚ್‌ 4ರಂದು ಮೊಹಾಲಿಯಲ್ಲಿ ಶ್ರೀಲಂಕಾ ಎದುರು ಭಾರತದ ಮೊದಲ ಟೆಸ್ಟ್‌ ಪಂದ್ಯ ಆರಂಭವಾಗುತ್ತಿದೆ. ಈ ನಡುವೆ ರೋಹಿತ್‌ ಕ್ರಿಕೆಟ್‌ ಚೆಂಡಿನ ಕುರಿತು ಮಾಡಿರುವ ಟ್ವೀಟ್‌ ಭಾರೀ ಚರ್ಚೆಗೆ ಗ್ರಾಸವಾಗಿದೆ.

'ಕ್ರಿಕೆಟ್‌ ಚೆಂಡುಗಳು ತಿನ್ನುವಂಥದ್ದು...ಅಲ್ಲವೇ', 'ನನಗೆ ಕಾಯಿನ್‌ ಟಾಸ್‌ ಮಾಡುವುದೆಂದರೆ ಇಷ್ಟ....ಅದರಲ್ಲೂ ಅದು ನನ್ನ ಹೊಟ್ಟೆಯ ಮೇಲೆ ಬೀಳುವುದೆಂದರೆ!',... ಎಂದೆಲ್ಲ ಟ್ವೀಟಿಸಲಾಗಿದೆ. ಈ ಎಲ್ಲ ಟ್ವೀಟ್‌ಗಳೂ ಸ್ವತಃ ರೋಹಿತ್‌ ಪ್ರಕಟಿಸಿದ್ದಾರೆಯೋ ಅಥವಾ ಹ್ಯಾಕರ್‌ಗಳ ಕೆಲಸವೋ ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ.

ADVERTISEMENT

ಈ ಟ್ವೀಟ್‌ಗಳು ರೋಹಿತ್‌ ಅಭಿಮಾನಿಗಳು, ನೆಟ್ಟಿಗರಲ್ಲಿ ಗೊಂದಲ ಮೂಡಿಸಿವೆ. ಇದು ನಿಜಕ್ಕೂ ರೋಹಿತ್‌ ಮಾಡುತ್ತಿರುವ ಟ್ವೀಟ್‌ಗಳೇ ಅಥವಾ ಟ್ವಿಟರ್‌ ಖಾತೆ ಹ್ಯಾಕ್‌ ಆಗಿದೆಯೇ ಎಂದು ಪ್ರಶ್ನಿಸಿದ್ದಾರೆ. ರೋಹಿತ್‌ ಖಾತೆಯಲ್ಲಿ ಬೆಳಿಗ್ಗೆ 11ರಿಂದ ಈವರೆಗೂ ಮೂರು ಟ್ವೀಟ್‌ಗಳು ಪ್ರಕಟಗೊಂಡಿವೆ.

ಟ್ವೀಟ್‌ ಒಂದಕ್ಕೆ ಕ್ರಿಕೆಟಿಗ ಯಜುವೇಂದ್ರ ಚಾಹಲ್‌ ಪ್ರತಿಕ್ರಿಯಿಸಿದ್ದು, 'ಅಣ್ಣಾ ಏನಾಗಿದೆ? ಎಲ್ಲವೂ ಸರಿಯಾಗಿದೆ ತಾನೇ?' ಎಂದು ಕೇಳಿದ್ದಾರೆ.

ರೋಹಿತ್‌ ನೇತೃತ್ವದಲ್ಲಿ ಭಾರತ ತಂಡವು ನ್ಯೂಜಿಲೆಂಡ್‌, ವೆಸ್ಟ್ ಇಂಡೀಸ್‌ ಹಾಗೂ ಶ್ರೀಲಂಕಾ ತಂಡಗಳ ಎದುರು ಟಿ20 ಸರಣಿಯಲ್ಲಿ ಜಯ ಸಾಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.