ನವದೆಹಲಿ: ಕಾರು ಅಪಘಾತದಲ್ಲಿ ಗಾಯಗೊಂಡಿರುವ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಅವರಿಗೆ ವೈದ್ಯರು ಯಶಸ್ವಿ ಪ್ಲಾಸ್ಟಿಕ್ ಸರ್ಜರಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಸುದ್ದಿಸಂಸ್ಥೆ 'ಎನ್‌ಡಿಟಿವಿ' ವರದಿ ಮಾಡಿದೆ.
ರಿಷಭ್ ಪಂತ್ ಹಣೆಗೆ ಪ್ಲಾಸ್ಟಿಕ್ ಸರ್ಜರಿ ನಡೆಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ತಿಳಿಸಿದ್ದಾರೆ.
ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಮಂಗ್ಲೋರ್ ಬಳಿ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ರಿಷಭ್ ಪಂತ್ ಗಾಯಗೊಂಡಿದ್ದರು.
ಪಂತ್ ಅವರ ತಲೆ, ಕಾಲು, ಬಲಗೈ ಹಾಗೂ ಬೆನ್ನಿಗೆ ಗಾಯಗಳಾಗಿವೆ. ಗಾಯದ ಗಂಭೀರತೆ ಕುರಿತು ಎಂಆರ್‌ಐ ಸ್ಕ್ಯಾನಿಂಗ್ ಬಳಿಕವಷ್ಟೇ ತಿಳಿದು ಬರಲಿದೆ.
ಇವನ್ನೂ ಓದಿ:
ಅಗತ್ಯವಿದ್ದರೆ ಪಂತ್ ಅವರನ್ನು ದೆಹಲಿಗೆ ಏರ್ಲಿಫ್ಟ್ ಮಾಡಲಾಗುವುದು: ಡಿಡಿಸಿಎ
ಅಮ್ಮನಿಗೆ ಅಚ್ಚರಿ ನೀಡಲು ಹೊರಟಿದ್ದ ರಿಷಭ್ ಪಂತ್; ಅಪಘಾತಕ್ಕೆ ಕಾರಣ ಏನು?
ಕಾರು ನಿಧಾನವಾಗಿ ಚಲಾಯಿಸಿ - 2019ರಲ್ಲೇ ರಿಷಭ್ಗೆ ಸಲಹೆ ನೀಡಿದ್ದ ಧವನ್
ಮಾತೃ ವಿಯೋಗದ ನೋವಿನ ನಡುವೆಯೂ ರಿಷಭ್ ಪಂತ್ ಯೋಗಕ್ಷೇಮ ಕೋರಿದ ಮೋದಿ
Video| ರಿಷಭ್ ಪಂತ್ ಕಾರು ಅಪಘಾತದ ಸಿಸಿ ಕ್ಯಾಮೆರಾ ದೃಶ್ಯಾವಳಿ ಬಿಡುಗಡೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.