ನವದೆಹಲಿ: ಶ್ರವಣದೋಷವುಳ್ಳ ಆಟಗಾರರ ಭಾರತ ಕ್ರಿಕೆಟ್ ತಂಡ, ಇದೇ ಮೊದಲ ಬಾರಿ ಇಂಗ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್ ಪಂದ್ಯಗಳ ದ್ವಿಪಕ್ಷೀಯ ಸರ್ಣಿ ಆಡಲಿದೆ. ಜೂನ್ 18ರಂದು ಈ ಏಳು ಪಂದ್ಯಗಳ ಸರಣಿ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿದೆ.
ಡರ್ಬಿಯ ಕೌಂಟಿ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ. ನಂತರ ನಾರ್ತಾಂಪ್ಟನ್‌ಶೈರ್, ವಾರ್ವಿಕ್‌ಶೈರ್ ಮತ್ತು ಲೀಸ್ಟರ್‌ಶೈರ್‌ನಲ್ಲಿ ಪಂದ್ಯಗಳು ನಡೆಯಲಿವೆ. ಕೊನೆಯ ಪಂದ್ಯ ಜೂನ್ 27ರಂದು ನಡೆಯಲಿದೆ.
ಇಂಗ್ಲೆಂಡ್ ವಿರುದ್ಧ ದ್ವಿಪಕ್ಷೀಯ ಸರಣಿಯಲ್ಲಿ ಆಡಲಿರುವ ಶ್ರವಣದೋಷವುಳ್ಳ ಆಟಗಾರರ ಭಾರತ ತಂಡಕ್ಕೆ ಬೆಂಬಲ ನೀಡುವ ವಿಷಯ ಸಂತಸ ಮೂಡಿಸಿದೆ ಎಂದು ದೈಹಿಕ ನ್ಯೂನತೆಯಿರುವ ವ್ಯಕ್ತಿಗಳ ಸಬಲೀಕರಣ ಇಲಾಖೆಯ ಕಾರ್ಯದರ್ಶಿ ರಾಜೇಶ್ ಅಗರವಾಲ್ ತಿಳಿಸಿದ್ದಾರೆ.
ತಂಡವು ಇಲ್ಲಿ ಜೂನ್ 14ರವರೆಗೆ ತರಬೇತಿಯಲ್ಲಿರಲಿದೆ. 15ರಂದು ಇಂಗ್ಲೆಂಡ್‌ಗೆ ತೆರಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.