ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಶನಿವಾರದ ಹರಾಜಿನ ವೇಳೆ ಈವರೆಗೆ (ರಾತ್ರಿ 9 ಗಂಟೆ ವೇಳೆಗೆ) ಐವರು ಆಟಗಾರರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಖರೀದಿಸಿದೆ.
ಶ್ರೀಲಂಕಾದ ವಾಣಿಂದು ಹಸರಂಗ ಅವರನ್ನು ಆರ್‌ಸಿಬಿ ₹10.75 ಕೋಟಿಗೆ ಖರೀದಿಸಿದೆ. ದಕ್ಷಿಣ ಆಫ್ರಿಕಾದ ಫಫ್ ಡುಪ್ಲೆಸಿಸ್ ಅವರನ್ನು ₹7 ಕೋಟಿಗೆ ಖರೀದಿಸಲಾಗಿದೆ.
ವೇಗಿ ಹರ್ಷಲ್ ಪಟೇಲ್ ಅವರನ್ನು ಆರ್‌ಸಿಬಿ ಈ ಬಾರಿ ಉಳಿಸಿಕೊಂಡಿದೆ. ಹರಾಜಿನಲ್ಲಿ ಹರ್ಷಲ್ ಪಟೇಲ್‌ಗಾಗಿ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಪೈಪೋಟಿ ಏರ್ಪಟಿತ್ತು. ಅಂತಿಮವಾಗಿ ಹರ್ಷಲ್‌ರನ್ನು ಖರೀದಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡಿದ್ದ ಹರ್ಷಲ್, 32 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ಆಗ ಅವರಿಗೆ ಆರ್‌ಸಿಬಿ ನೀಡಿದ್ದ ಮೊತ್ತ ಕೇವಲ ₹20 ಲಕ್ಷ. ಆದರೆ, ಈ ಬಾರಿ ₹10.75 ಕೋಟಿ ನೀಡಿ ಖರೀದಿಸಿದೆ.
ಕಳೆದ ಬಾರಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿದ್ದ ದಿನೇಶ್ ಕಾರ್ತಿಕ್ ಅವರನ್ನು ₹5.50 ಕೋಟಿಗೆ ಆರ್‌ಸಿಬಿ ಖರೀದಿಸಿದೆ. ಶಾಬಾಜ್ ಅಹಮದ್ ಅವರನ್ನು ₹2.4 ಕೋಟಿಗೆ ಖರೀದಿಸಿದೆ.
ಅಕಾಶ್ ದೀಪ್ ಅವರನ್ನು ₹20 ಲಕ್ಷಕ್ಕೆ ಖರೀದಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.