ADVERTISEMENT

ಮಹಿಳಾ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಮಾನಸಿ ಜೋಷಿಗೆ ಕೋವಿಡ್‌–19

ಪಿಟಿಐ
Published 17 ಅಕ್ಟೋಬರ್ 2020, 11:36 IST
Last Updated 17 ಅಕ್ಟೋಬರ್ 2020, 11:36 IST
ಮಾನಸಿ ಜೋಷಿ (ಟ್ವಿಟರ್‌ ಚಿತ್ರ)
ಮಾನಸಿ ಜೋಷಿ (ಟ್ವಿಟರ್‌ ಚಿತ್ರ)   

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಮಾನಸಿ ಜೋಷಿ ಅವರಿಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ. ಇದರಿಂದಾಗಿ ಅವರು ಮುಂದಿನ ತಿಂಗಳು ನಡೆಯುವ ಟಿ–20 ಚಾಲೆಂಜರ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ವರದಿಯಾಗಿದೆ.

‘ಕೊರೊನಾ ಸೋಂಕಿಗೆ ತುತ್ತಾಗಿರುವ ಮಾನಸಿ ಅವರು ಸದ್ಯ ಡೆಹ್ರಾಡೂನ್‌ನಲ್ಲಿ ಪ್ರತ್ಯೇಕವಾಸದಲ್ಲಿದ್ದಾರೆ. ಮಹಿಳಾ ಟಿ20 ಚಾಲೆಂಜ್‌ನಲ್ಲಿ ಪಾಲ್ಗೊಳ್ಳಲು ಯುಎಇಗೆ ತೆರಳಲಿರುವ ಎಲ್ಲ ಆಟಗಾರ್ತಿಯರು ಸದ್ಯ ಮುಂಬೈನಲ್ಲಿದ್ದು, ಮಾನಸಿ ತೆರಳುತ್ತಿಲ್ಲ‘ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೊ ವರದಿ ಮಾಡಿದೆ.

ಮಿಥಾಲಿ ರಾಜ್‌ ನಾಯಕತ್ವದ ವೆಲೋಸಿಟಿ ತಂಡದಲ್ಲಿ ಮಾನಸಿ ಆಡಬೇಕಿತ್ತು. ಈಗ ಅವರ ಬದಲಾಗಿ ಮೇಘನಾ ಸಿಂಗ್‌ ಕಣಕ್ಕಿಳಿಯಲಿದ್ದಾರೆ ಎಂದು ವರದಿ ಹೇಳಿದೆ.

ADVERTISEMENT

ಮಹಿಳೆಯರ ಐಪಿಎಲ್‌ ಎಂದು ಹೇಳಲಾಗುವ ಚಾಲೆಂಜರ್‌ ಟೂರ್ನಿಯು ಯುಎಇಯಲ್ಲಿ ನವೆಂಬರ್‌ 4ರಿಂದ 9ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.