ನವದೆಹಲಿ: ಭಾರತ 1983ರಲ್ಲಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ಗೆದ್ದುಕೊಂಡಾಗ ತಂಡದ ಪ್ರಮುಖ ಆಟಗಾರರಾಗಿದ್ದ ಯಶಪಾಲ್ ಶರ್ಮಾ (66) ಅವರು ಮಂಗಳವಾರ ತೀವ್ರ ಹೃದಯಘಾತದಿಂದನಿಧನರಾಗಿದ್ದಾರೆ.
ಅವರಿಗೆ ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ‘ಯಶಪಾಲ್ ಶರ್ಮಾ ನಮ್ಮೊಂದಿಗೆ ಇಲ್ಲ. ಈಗಷ್ಟೇ ಮಾಹಿತಿ ಬಂದಿದೆ’ ಎಂದು ತಂಡದಲ್ಲಿ ಅವರ ಜೊತೆ ಆಡಿದ್ದ ಮಾಜಿ ಆಟಗಾರರೊಬ್ಬರು ಖಚಿತಪಡಿಸಿದ್ದಾರೆ.
37 ಟೆಸ್ಟ್ ಪಂದ್ಯಗಳನ್ನು ಆಡಿರುವ ಶರ್ಮಾ 1,606 ರನ್‌ಗಳನ್ನು ಗಳಿಸಿದ್ದಾರೆ. 42 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 883 ರನ್ ಕಲೆಹಾಕಿದ್ದಾರೆ.
ಕೆಚ್ಚೆದೆಯ ಆಟಕ್ಕೆ ಹೆಸರಾಗಿದ್ದ ಶರ್ಮಾ, 1983ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಓಲ್ಡ್ ಟ್ರಾಫರ್ಡ್‌ನಲ್ಲಿ ಅರ್ಧ ಶತಕ ಬಾರಿಸಿದ್ದರು. ಇದು ಕ್ರಿಕೆಟ್ ಪ್ರಿಯರ ನೆನಪಿನಲ್ಲುಳಿಯುವ ಇನಿಂಗ್ಸ್. 120 ಎಸೆತಗಳಲ್ಲಿ 89 ರನ್ ಗಳಿಸಿದ್ದರಲ್ಲದೇ, ಎರಡು ಉಪಯುಕ್ತ ಜೊತೆಯಾಟಗಳಲ್ಲಿ ಭಾಗಿಯಾಗಿದ್ದರು.
ಅವರು ಸುಮಾರು 20 ವರ್ಷಗಳ ಹಿಂದೆ ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.