ಅನಂತಪುರ: ಮುಂಬರುವ ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಯಲ್ಲಿ ಆಡಲಿರುವ ಭಾರತ ತಂಡದ ಆಟಗಾರರಿಗೆ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಎರಡನೇ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. ಇದರಿಂದಾಗಿ ಶುಭಮನ್ ಗಿಲ್ ಅವರ ಬದಲಿಗೆ ಭಾರತ ಎ ತಂಡವನ್ನು ಕರ್ನಾಟಕದ ಮಯಂಕ್ ಅಗರವಾಲ್ ಮುನ್ನಡೆಸಲಿದ್ದಾರೆ.
ಕೆ.ಎಲ್. ರಾಹುಲ್, ವಿಕೆಟ್‌ಕೀಪರ್ ರಿಷಭ್ ಪಂತ್, ಆಕಾಶದೀಪ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್ ಮತ್ತು ಧ್ರುವ ಜುರೇಲ್ ಅವರು ಗುರುವಾರ ಆರಂಭವಾಗುವ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ.
ಆದರೆ ಟೆಸ್ಟ್ ತಂಡದಲ್ಲಿರುವ ಎಡಗೈ ವೇಗಿ ಯಶ್ ದಯಾಳ್ ಮತ್ತು ಬ್ಯಾಟರ್ ಸರ್ಫರಾಜ್ ಖಾನ್ ಅವರನ್ನು ದುಲೀಪ್ ಟ್ರೋಫಿ ಬಳಗದಲ್ಲಿ ಉಳಿಸಿಕೊಳ್ಳಲಾಗಿದೆ. ಇದರಿಂದಾಗಿ ಅವರು ಚೆನ್ನೈನಲ್ಲಿ ನಡೆಯಲಿರುವ ಭಾರತ–ಬಾಂಗ್ಲಾ ನಡುವಣ ಮೊದಲ ಟೆಸ್ಟ್‌ನಲ್ಲಿ ಆಡುವುದಿಲ್ಲವೆಂಬುದು ಬಹುತೇಕ ಖಚಿತವಾಗಿದೆ.
‘ಗಿಲ್ ಬದಲಿಗೆ ಪ್ರಥಮ್ ಸಿಂಗ್ (ರೈಲ್ವೆಸ್), ಕೆ.ಎಲ್. ರಾಹುಲ್ ಬದಲಿಗೆ ಅಕ್ಷಯ್ ವಾಡ್ಕರ್ (ವಿದರ್ಭ) ಮತ್ತು ಜುರೇಲ್ ಅವರ ಸ್ಥಾನಕ್ಕೆ ಎಸ್.ಕೆ. ರಶೀದ್ (ಆಂಧ್ರ) ಕುಲದೀಪ್ ಬದಲಿಗೆ ಶಮ್ಸ್ ಮತ್ತು ಆಕಾಶ್ ದೀಪ್ ಅವರ ಬದಲಿಗೆ ಅಕೀಬ್ ಖಾನ್ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಋತುರಾಜ್ ಗಾಯಕವಾಡ ನಾಯಕರಾಗಿರುವ ಭಾರತ ಸಿ ತಂಡದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಮೊದಲ ಪಂದ್ಯದಲ್ಲಿ ಆಡಿದ್ದ ತಂಡವೇ ಕಣಕ್ಕಿಳಿಯಲಿದೆ.
ತಂಡಗಳು
ಭಾರತ ಎ: ಮಯಂಕ್ ಅಗರವಾಲ್ (ನಾಯಕ), ರಿಯಾನ್ ಪರಾಗ್, ತಿಲಕ್ ವರ್ಮಾ, ಶಿವಂ ದುಬೆ, ತನುಷ್ ಕೋಟ್ಯಾನ್, ಪ್ರಸಿದ್ಧ ಕೃಷ್ಣ, ಖಲೀಲ್ ಅಹಮದ್, ಆವೇಶ್ ಖಾನ್, ಕುಮಾರ್ ಕುಶಾಗ್ರ, ಶಾಶ್ವತ್ ರಾವತ್, ಪ್ರಥಮ್ ಸಿಂಗ್, ಅಕ್ಷಯ್ ವಾಡೇಕರ್, ಎಸ್.ಕೆ. ರಶೀದ್, ಶಮ್ಸ್ ಮುಲಾನಿ, ಅಕೀಬ್ ಖಾನ್.
ಭಾರತ ಬಿ: ಅಭಿಮನ್ಯು ಈಶ್ವರನ್ (ನಾಯಕ), ಸರ್ಫರಾಜ್ ಖಾನ್, ಮುಷೀರ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಮುಕೇಶ್ ಕುಮಾರ್, ರಾಹುಲ್ ಚಾಹರ್, ಆರ್. ಸಾಯಿಕಿಶೋರ್, ಮೋಹಿತ್ ಅವಸ್ತಿ, ಹಿಮಾಂಶು ಮಂತ್ರಿ (ವಿಕೆಟ್‌ಕೀಪರ್), ಎನ್. ಜಗದೀಶನ್ ( ವಿಕೆಟ್‌ಕೀಪರ್), ಸುಯಶ್ ಪ್ರಭುದೇಸಾಯಿ, ರಿಂಕು ಸಿಂಗ್.
ಭಾರತ ಡಿ: ಶ್ರೇಯಸ್ ಅಯ್ಯರ್ (ನಾಯಕ), ಅಥರ್ವ ತೈಡೆ, ಯಶ್ ದುಬೆ, ದೇವದತ್ತ ಪಡಿಕ್ಕಲ್, ರಿಕಿ ಭುಯ್, ಸಾರಾಂಶ್ ಜೈನ್, ಅರ್ಷದೀಪ್ ಸಿಂಗ್, ಆದಿತ್ಯ ಠಾಕರೆ, ಹರ್ಷಿತ್ ರಾಣಾ, ಆಕಾಶ್ ಸೇನ್‌ಗುಪ್ತಾ, ಕೆ.ಎಸ್. ಭರತ್ (ವಿಕೆಟ್‌ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ನಿಶಾಂತ್ ಸಿಂಧು, ವಿದ್ವತ್ ಕಾವೇರಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.