ನವಿ ಮುಂಬೈ: ಆಫ್‌ಬ್ರೇಕ್ ಬೌಲರ್ ದೀಪ್ತಿ ಶರ್ಮಾ ಅವರ ಮೋಡಿಯ ಮುಂದೆ ಇಂಗ್ಲೆಂಡ್ ಬ್ಯಾಟರ್‌ಗಳು ಕುಸಿದರು.
ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಟೆಸ್ಟ್ ಕ್ರಿಕೆಟ್ ಪಂದ್ಯದ ಎರಡನೇ ದಿನವಾದ ಶುಕ್ರವಾರ ದೀಪ್ತಿ (5.3–4–7–5) ಸ್ಪಿನ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡವು 136 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ನಲ್ಲಿ ದೀಪ್ತಿ (67; 113ಎ, 4X10, 6X1) ಅರ್ಧಶತಕ ಗಳಿಸಿದ್ದರು.
ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 428 ರನ್ ಮೊತ್ತಕ್ಕೆ ಪ್ರತ್ಯುತ್ತರ ನೀಡುವಲ್ಲಿ ಹೀಥರ್ ನೈಟ್ ಬಳಗವು ಎಡವಿತು. 292 ರನ್‌ಗಳ ಹಿನ್ನಡೆ ಅನುಭವಿಸಿತು. ನಥಾಲಿ ಶಿವರ್ ಬ್ರಂಟ್ (59; 70ಎ) ಅವರೊಬ್ಬರು ಮಾತ್ರ ಅರ್ಧಶತಕ ಗಳಿಸಿದರು. ಉಳಿದವರು ವೈಫಲ್ಯ ಅನುಭವಿಸಿದರು.
ಅದಕ್ಕೆ ಕಾರಣರಾಗಿದ್ದು ದೀಪ್ತಿ ಬೌಲಿಂಗ್. ಮಧ್ಯಮ ಮತ್ತು ಕೆಳಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲದಂತೆ ನೋಡಿಕೊಂಡರು. ರೇಣುಕಾ ಸಿಂಗ್ ಮತ್ತು ಪೂಜಾ ಅವರು ಮೇಲಿನ ಕ್ರಮಾಂಕದ ಬ್ಯಾಟರ್‌ಗಳಿಗೆ ಪೆವಿಲಿಯನ್ ದಾರಿ ತೋರಿಸಿದರು.
ಫಾಲೋಆನ್ ಹೇರುವ ಅವಕಾಶ ಆತಿಥೇಯ ತಂಡಕ್ಕೆ ಇತ್ತು. ಆದರೂ ಎರಡನೇ ಇನಿಂಗ್ಸ್ ಆಡಲು ನಿರ್ಧರಿಸಿದ ಹರ್ಮನ್‌ಪ್ರೀತ್ ಕೌರ್ ಬಳಗವು ದಿನದಾಟದ ಮುಕ್ತಾಯಕ್ಕೆ 42 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 186 ರನ್ ಗಳಿಸಿದೆ. ನಾಯಕಿ ಹರ್ಮನ್‌ಪ್ರೀತ್ (ಬ್ಯಾಟಿಂಗ್ 44; 67ಎ) ಮತ್ತು ಪೂಜಾ (ಬ್ಯಾಟಿಂಗ್ 17) ಕ್ರೀಸ್‌ನಲ್ಲಿದ್ದಾರೆ. ಒಟ್ಟು 478 ರನ್‌ಗಳ ಭಾರಿ ಮುನ್ನಡೆ ಸಾಧಿಸಿದೆ. ಶಾರ್ಲೊಟ್ ಡೀನ್ ನಾಲ್ಕು ವಿಕೆಟ್ ಗಳಿಸಿದರು.
ಆದರೆ, ಮೊದಲ ಇನಿಂಗ್ಸ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅರ್ಧಶತಕ ಗಳಿಸಿದ್ದ ಮೈಸೂರು ಹುಡುಗಿ ಶುಭಾ ಸತೀಶ್ ಅವರು ಎರಡನೇ ಇನಿಂಗ್ಸ್‌ನಲ್ಲಿ ಇನ್ನೂ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದಿಲ್ಲ.
ಸಂಕ್ಷಿಪ್ತ ಸ್ಕೋರು:
ಮೊದಲ ಇನಿಂಗ್ಸ್: ಭಾರತ: 104.3 ಓವರ್‌ಗಳಲ್ಲಿ 428 (ದೀಪ್ತಿ ಶರ್ಮಾ 67, ಪೂಜಾ ವಸ್ತ್ರಕರ್ ಔಟಾಗದೆ 10, ಲಾರೆನ್ ಬೆಲ್ 67ಕ್ಕೆ3, ಸೋಫಿ ಎಕ್ಸೆಲೆಸ್ಟೋನ್ 91ಕ್ಕೆ3)
ಇಂಗ್ಲೆಂಡ್: 35.3 ಓವರ್‌ಗಳಲ್ಲಿ 136 (ನಥಾಲಿಯ ಸೀವರ್ ಬ್ರಂಟ್ 59, ಡೇನಿಲ್ ವೈಟ್ 19, ಸ್ನೇಹಾ ರಾಣಾ 25ಕ್ಕೆ2, ದೀಪ್ತಿ ಶರ್ಮಾ 7ಕ್ಕೆ5)
ಎರಡನೇ ಇನಿಂಗ್ಸ್: ಭಾರತ : 42 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 186 (ಶಫಾಲಿ ವರ್ಮಾ 33, ಸ್ಮೃತಿ ಮಂದಾನ 26, ಜೆಮಿಮಾ ರಾಡ್ರಿಗಸ್ 27, ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ 44, ದೀಪ್ತಿ ಶರ್ಮಾ 20, ಪೂಜಾ ವಸ್ತ್ರಕರ್ ಬ್ಯಾಟಿಂಗ್ 17, ಶಾರ್ಲೊಟ್ಡೀನ್ 68ಕ್ಕೆ4, ಸೋಫಿ ಎಕ್ಸೆಲ್‌ಸ್ಟೋನ್ 76ಕ್ಕೆ2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.