ADVERTISEMENT

ನ. 17ರಿಂದ ಮಾಸ್ಟರ್ಸ್‌ ಲೀಗ್‌ ಕ್ರಿಕೆಟ್‌ ಲೀಗ್‌

ಪಿಟಿಐ
Published 8 ಅಕ್ಟೋಬರ್ 2024, 23:30 IST
Last Updated 8 ಅಕ್ಟೋಬರ್ 2024, 23:30 IST
<div class="paragraphs"><p>ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್‌ನಲ್ಲಿ ಆಡುವ ತಂಡಗಳ ನಾಯಕರು ಮಂಗಳವಾರ ಅಧಿಕೃತವಾಗಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾದರು. </p></div>

ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್‌ನಲ್ಲಿ ಆಡುವ ತಂಡಗಳ ನಾಯಕರು ಮಂಗಳವಾರ ಅಧಿಕೃತವಾಗಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾದರು.

   

ಮುಂಬೈ: ಸಚಿನ್ ತೆಂಡೂಲ್ಕರ್‌, ಬ್ರಯಾನ್‌ ಲಾರಾ ಸೇರಿದಂತೆ ಘಟಾನುಘಟಿ ಆಟಗಾರರು ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಕ್ರಿಕೆಟ್‌ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ
ಪಾಲ್ಗೊಳ್ಳಲಿದ್ದಾರೆ. ಈ ಲೀಗ್‌ ನವೆಂಬರ್‌ 17ರಿಂದ ಡಿಸೆಂಬರ್‌ 8ರವರೆಗಿನ ಅವಧಿಯಲ್ಲಿ ಮುಂಬೈ, ಲಖನೌ ಮತ್ತು ರಾಯಪುರದಲ್ಲಿ ನಡೆಯಲಿದೆ.

ಟೂರ್ನಿಗೆ ಮಂಗಳವಾರ ಅಧಿಕೃತವಾಗಿ ಇಲ್ಲಿ ಚಾಲನೆ ನೀಡಲಾಯಿತು. ಭಾರತ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ ಇಂಡೀಸ್‌ ಕಣದಲ್ಲಿರುವ ತಂಡಗಳಾಗಿವೆ.

ADVERTISEMENT

ತೆಂಡೂಲ್ಕರ್ ಭಾರತ ಮಾಸ್ಟರ್ಸ್‌ ತಂಡದ ನಾಯಕರಾಗಿದ್ದಾರೆ. ಬ್ಯಾಟಿಂಗ್ ದಿಗ್ಗಜ ಸುನಿಲ್‌ ಗಾವಸ್ಕರ್ ಅವರು ಲೀಗ್‌ ಕಮಿಷನರ್ ಆಗಿದ್ದಾರೆ. ನ.17ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಭಾರತ ಮಾಸ್ಟರ್ಸ್‌ ತಂಡ, ಶ್ರೀಲಂಕಾ ಮಾಸ್ಟರ್ಸ್ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.