ಅಬುಧಾಬಿ:ಪಂಜಾಬ್ ಕಿಂಗ್ಸ್ ವಿರುದ್ಧನಡೆಯುತ್ತಿರುವ ಪಂದ್ಯದಲ್ಲಿ ಎರಡು ವಿಕೆಟ್ ಉರುಳಿಸಿದ ಮುಂಬೈ ಇಂಡಿಯನ್ಸ್ ತಂಡದ ಕೀರನ್ ಪೊಲಾರ್ಡ್, ಟಿ20 ಕ್ರಿಕೆಟ್‌ನಲ್ಲಿ ಅಸಾಮಾನ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಈ ಪಂದ್ಯಕ್ಕೂ ಮುನ್ನ ಪೊಲಾರ್ಡ್‌ಚುಟುಕು ಕ್ರಿಕೆಟ್‌ನಲ್ಲಿಬರೋಬ್ಬರಿ 298ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದ ಬೌಲರ್ ಎನಿಸಿದ್ದರು. ಇದೀಗ ಆ ಸಂಖ್ಯೆ ಮುನ್ನೂರಕ್ಕೇರಿದೆ. ಅಂದಹಾಗೆ ಪೊಲಾರ್ಡ್ ಈ ಮಾದರಿಯಲ್ಲಿ 11,202 ರನ್‌ಗಳನ್ನೂ ಬಾರಿಸಿದ್ದಾರೆ. ಹೀಗಾಗಿಹತ್ತು ಸಾವಿರಕ್ಕಿಂತ ಹೆಚ್ಚು ರನ್ ಮತ್ತು300 ವಿಕೆಟ್ ಗಳಿಸಿಕೊಂಡ ಏಕೈಕ ಬೌಲರ್ ಎಂಬ ಶ್ರೇಯ ಅವರದ್ದಾಯಿತು.
ಸಾಧಾರಣ ಮೊತ್ತಕ್ಕೆ ಕುಸಿದಕಿಂಗ್ಸ್
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ನಿಗದಿತ20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 135 ರನ್ ಕಲೆ ಹಾಕಿದೆ.
ಟಾಸ್ ಗೆದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.ನಾಯಕನ ನಿರ್ಧಾರ ಸಮರ್ಥಿಸಿಕೊಳ್ಳುವಂತೆದಾಳಿ ಸಂಘಟಿಸಿದ ಮುಂಬೈ ಬೌಲರ್‌ಗಳು, ಕಿಂಗ್ಸ್‌ಗೆ ಆರಂಭಿಕ ಆಘಾತ ನೀಡಿದರು.
ತಂಡದ ಮೊತ್ತ 48 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದನಾಲ್ವರನ್ನು ಪೆವಿಲಿಯನ್‌ಗೆ ಅಟ್ಟಿ ಮೇಲುಗೈ ತಂದುಕೊಟ್ಟರು. ಆದರೆ ಈ ಹಂತದಲ್ಲಿ ಜೊತೆಯಾದ ಏಡನ್‌ಮಾರ್ಕ್ರಂ (38) ಮತ್ತು ದೀಪಕ್ ಹೂಡ (25) ಐದನೇ ವಿಕೆಟ್ ಜೊತೆಯಾಟದಲ್ಲಿ61 ರನ್ ಕೂಡಿಸಿಕುಸಿತ ತಪ್ಪಿಸಿದರು.
ಈ ಜೋಡಿಯನ್ನು16ನೇ ಓವರ್‌ನಲ್ಲಿ ರಾಹುಲ್ ಚಾಹರ್‌ಬೇರ್ಪಡಿಸಿದರು. 26 ಎಸೆತಗಳಲ್ಲಿ 28 ರನ್ ಬಾರಿಸಿದ್ದ ದೀಪಕ್ ಅವರೂ 19ನೇ ಓವರ್‌ನಲ್ಲಿಔಟಾದರು. ಕೊನೆಯಲ್ಲಿ ಹರ್ಪ್ರೀತ್ ಬ್ರಾರ್ ಮತ್ತು ನಾಥನ್ ಎಲ್ಲಿಸ್ ತಂಡದ ಮೊತ್ತವನ್ನು130ರ ಗಡಿ ದಾಟಿಸಿದರು.
ಮುಂಬೈ ಪರಜಸ್‌ಪ್ರಿತ್ ಬೂಮ್ರಾ ಹಾಗೂ ಕೀರನ್ ಪೊಲಾರ್ಡ್ ತಲಾ ಎರಡು ವಿಕೆಟ್ ಕಬಳಿಸಿದರೆ, ಕೃಣಾಲ್ ಪಾಂಡ್ಯ ಮತ್ತು ರಾಹುಲ್ ಚಾಹರ್ ಒಂದೊಂದು ವಿಕೆಟ್ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.