ADVERTISEMENT

IPL ಮೆಗಾ ಹರಾಜು: ಮೊದಲ ಬಿಡ್ ಧವನ್, ₹ 12.25 ಕೋಟಿಗೆ ಕೆಕೆಆರ್ ಪಾಲಾದ ಅಯ್ಯರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಫೆಬ್ರುವರಿ 2022, 9:37 IST
Last Updated 12 ಫೆಬ್ರುವರಿ 2022, 9:37 IST
ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್
ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್   

ಬೆಂಗಳೂರು:ಭಾರತ ಕ್ರಿಕೆಟ್ ತಂಡದ ಆರಂಬಿಕ ಬ್ಯಾಟರ್ ಶಿಖರ್ ಧವನ್ ಅವರು ಇಂದಿನಿಂದ ಆರಂಭವಾಗಿರುವ ಐಪಿಎಲ್–2022 ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಬಿಡ್ ಆದ ಮೊದಲ ಆಟಗಾರ ಎನಿಸಿದ್ದಾರೆ.ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಬ್ಯಾಟ್ ಬೀಸಿದ್ದ ಅವರನ್ನು ಪಂಜಾಬ್ ಕಿಂಗ್ಸ್ ತಂಡ ₹ 8.25 ಕೋಟಿ ನೀಡಿ ಖರೀದಿಸಿದೆ.

2020ರ ಆವೃತ್ತಿಯಲ್ಲಿ ಡೆಲ್ಲಿ ತಂಡದ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಅವರಿಗಾಗಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಪ್ರಾಂಚೈಸ್ ₹ 12.25 ಕೋಟಿ ಬಂಡವಾಳ ಹಾಕಿದೆ. ಡೆಲ್ಲಿ ಕ್ಯಾಂಪ್‌ನಲ್ಲಿದ್ದ ಮತ್ತೊಬ್ಬ ಆಟಗಾರ ಆರ್.ಅಶ್ವಿನ್ ಅವರನ್ನು ರಾಜಸ್ಥಾನ ರಾಯಲ್ಸ್ ₹ 5 ಕೋಟಿಗೆ ಕೊಂಡುಕೊಂಡಿದೆ.

ಕಳೆದ ಹರಾಜಿನ ದುಬಾರಿ ಆಟಗಾರಪ್ಯಾಟ್ ಕಮಿನ್ಸ್₹ 7.25 ಕೋಟಿಗೆಕೆಕೆಆರ್ ಪಾಲಾಗಿದ್ದಾರೆ.

ADVERTISEMENT

ಟ್ರೆಂಟ್ ಬೌಲ್ಟ್ (₹ 8 ಕೋಟಿ) ಮತ್ತು ಕಗಿಸೊ ರಬಾಡ(₹ 9.25 ಕೋಟಿ), ಕ್ರಮವಾಗಿ ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಸೇರಿಕೊಂಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ನ ಆರಂಭಿಕ ಆಟಗಾರನಾಗಿದ್ದ ಫಾಫ್ ಡು ಪ್ಲೆಸಿ ಅವರನ್ನು ₹ 7 ಕೋಟಿ ನೀಡಿ ಖರೀದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.