ADVERTISEMENT

IPL 2022 CSK vs KKR: ಧೋನಿ ಫಿಫ್ಟಿ ವ್ಯರ್ಥ; ಚೆನ್ನೈ ವಿರುದ್ಧ ಕೆಕೆಆರ್‌ಗೆ 6 ವಿಕೆಟ್ ಗೆಲುವು

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 17:49 IST
Last Updated 26 ಮಾರ್ಚ್ 2022, 17:49 IST

ಕೆಕೆಆರ್‌ಗೆ ಆರು ವಿಕೆಟ್ ಅಂತರದ ಭರ್ಜರಿ ಗೆಲುವು

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಈ ಮೂಲಕ ಕಳೆದ ವರ್ಷ ಯುಎಇನಲ್ಲಿ ನಡೆದ ಐಪಿಎಲ್ ಫೈನಲ್‌ನಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಂಡಿದೆ. 

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ, ಮಹೇಂದ್ರ ಸಿಂಗ್ ಧೋನಿ ಸಮಯೋಚಿತ ಅರ್ಧಶತಕದ (50*) ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 131 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. 

ADVERTISEMENT

ಬಳಿಕ ಗುರಿ ಬೆನ್ನತ್ತಿದ ಕೆಕೆಆರ್, ಅಜಿಂಕ್ಯ ರಹಾನೆ (44) ಹಾಗೂ ಸ್ಯಾಮ್ಸ್ ಬಿಲ್ಲಿಂಗ್ಸ್ (25) ಆಕರ್ಷಕ ಬ್ಯಾಟಿಂಗ್ ನೆರವಿನಿಂದ 18.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.  

ವಿಂಟೇಜ್ ಧೋನಿ

44 ರನ್ ಗಳಿಸಿ ರಹಾನೆ ಔಟ್

ಎರಡು ವಿಕೆಟ್ ಕಬಳಿಸಿದ ಬ್ರಾವೊ

10 ಓವರ್ ಅಂತ್ಯಕ್ಕೆ ಕೆಕೆಆರ್ ಎರಡು ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದೆ. ವೆಂಕಟೇಶ್ ಅಯ್ಯರ್ (16) ಹಾಗೂ ನಿತೀಶ್ ರಾಣಾ (21) ವಿಕೆಟ್ ಕಬಳಿಸಿರುವ ಡ್ವೇನ್ ಬ್ರಾವೊ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. 

ವಿಕೆಟ್ ಪಡೆದ ಬಳಿಕ ಬ್ರಾವೊ ಡ್ಯಾನ್ಸ್

ವಾಸೀಮ್ ಜಾಫರ್ ಟ್ವೀಟ್

ಮಹಿ ಬ್ಯಾಟಿಂಗ್‌ಗೆ ಸಚಿನ್ ಮೆಚ್ಚುಗೆ

ಕೆಕೆಆರ್ ಪವರ್ ಪ್ಲೇ ಅಂತ್ಯಕ್ಕೆ 43/0

132 ರನ್‌ಗಳ ಗುರಿ ಬೆನ್ನತ್ತಿದ ಕೆಕೆಆರ್ ಉತ್ತಮ ಆರಂಭ ಪಡೆದಿದ್ದು, ಪವರ್ ಪ್ಲೇ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 43 ರನ್ ಗಳಿಸಿದೆ. 

ನಾಯಕ ಸ್ಥಾನ ಬಿಟ್ಟುಕೊಟ್ಟ ಬೆನ್ನಲ್ಲೇ ಫಿಫ್ಟಿ ಬಾರಿಸಿದ ಧೋನಿ

ಐಪಿಎಲ್ 2022ರಲ್ಲಿ ಮೊದಲ ಅರ್ಧಶತಕ ಗಳಿಸಿದ ಧೋನಿ

ಐಪಿಎಲ್‌ನಲ್ಲಿ ಉದ್ಘಾಟನಾ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅರ್ಧಶತಕದ (50*) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 131 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. 

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ  ಆಹ್ವಾನಿಸಲ್ಪಟ್ಟ ಚೆನ್ನೈ ತಂಡದ ಆರಂಭ ಉತ್ತಮವಾಗಿರಲಿಲ್ಲ. 28 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ಋತುರಾಜ್ ಗಾಯಕವಾಡ್ (0) ಹಾಗೂ ಡೆವೊನ್ ಕಾನ್ವೆ (3) ವಿಕೆಟ್‌ಗಳನ್ನು ಕಳೆದುಕೊಂಡಿತು. ಇವರಿಬ್ಬರನ್ನು ಹೊರದಬ್ಬಿದ ಉಮೇಶ್ ಯಾದವ್ ನಿಖರ ದಾಳಿ ಸಂಘಟಿಸಿದರು.  

ರಾಬಿನ್ ಉತ್ತಪ್ಪ (28) ಹಾಗೂ ಅಂಬಡಿ ರಾಯುಡು (15) ಉತ್ತಮ ಆರಂಭ ಪಡೆದರೂ ಗರಿಷ್ಠ ಪ್ರಯೋಜನ ಪಡೆಯಲು ಸಾಧ್ಯವಾಗಲಿಲ್ಲ. ಶಿವಂ ದುಬೆ (3) ಕೂಡ ನಿರಾಸೆ ಮೂಡಿಸಿದರು. ಪರಿಣಾಮ 10.5 ಓವರ್‌ಗಳಲ್ಲಿ 61 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. 

ಈ ಹಂತದಲ್ಲಿ ಜೊತೆಗೂಡಿದ ನಾಯಕ ರವೀಂದ್ರ ಜಡೇಜ ಹಾಗೂ ಮಹೇಂದ್ರ ಸಿಂಗ್ ಧೋನಿ ಮುರಿಯದ ಆರನೇ ವಿಕೆಟ್‌ಗೆ 70 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. 

ಆರಂಭದಲ್ಲಿ ನಿಧಾನವಾಗಿ ಆಡಿದ ಧೋನಿ, ಬಳಿಕ ತಮ್ಮ ನೈಜ ಆಟವನ್ನು ಪ್ರದರ್ಶಿಸಿದರು. ಅಲ್ಲದೆ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಅರ್ಧಶತಕ ಗಳಿಸಿದರು. 

ಅಲ್ಲದೆ ಐಪಿಎಲ್ 15ನೇ ಆವೃತ್ತಿಯಲ್ಲಿ ಅರ್ಧಶತಕ ಗಳಿಸಿದ ಮೊದಲ ಬ್ಯಾಟರ್ ಎನಿಸಿದರು. 38 ಎಸೆತಗಳನ್ನು ಎದುರಿಸಿದ ಧೋನಿ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು. 

ಅವರಿಗೆ ತಕ್ಕ ಸಾಥ್ ನೀಡಿದ ಜಡೇಜ 28 ಎಸೆತಗಳಲ್ಲಿ ಒಂದು ಸಿಕ್ಸರ್ ನೆರವಿನಿಂದ 26 ರನ್ ಗಳಿಸಿ ಔಟಾಗದೆ ಉಳಿದರು. ಕೆಕೆಆರ್ ಪರ ಉಮೇಶ್ ಯಾದವ್ ಎರಡು ಮತ್ತು ವರುಣ್ ಚಕ್ರವರ್ತಿ ಹಾಗೂ ಆ್ಯಂಡ್ರೆ ರಸೆಲ್ ತಲಾ ಒಂದು ವಿಕೆಟ್ ಪಡೆದರು. 

ಅಮೋಘ ಅರ್ಧಶತಕ ಗಳಿಸಿದ ಧೋನಿ

ಐಪಿಎಲ್‌ನಲ್ಲಿ ಉದ್ಘಾಟನಾ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅರ್ಧಶತಕದ (50*) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 131 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. 

ಧೋನಿ...ಧೋನಿ...ಧೋನಿ...ಜೈಕಾರ

ಶೆಲ್ಡನ್ ಜಾಕ್ಸನ್ ಅದ್ಭುತ ಸ್ಟಂಪಿಂಗ್

ಕೆಕೆಆರ್ ಬೌಲರ್‌ಗಳ ಮಿಂಚು

ಶೆಲ್ಡನ್ ಜ್ಯಾಕ್ಸನ್ ಹೊಗಳಿದ ಸಚಿನ್ ತೆಂಡೂಲ್ಕರ್

61 ರನ್ನಿಗೆ ಐದು ವಿಕೆಟ್ ಕಳೆದುಕೊಂಡ ಚೆನ್ನೈ

10.5 ಓವರ್‌ಗಳಲ್ಲಿ 61 ರನ್ನಿಗೆ ಐದು ವಿಕೆಟ್ ಕಳೆದುಕೊಂಡಿರುವ ಚೆನ್ನೈ ಸಂಕಷ್ಟಕ್ಕೆ ಸಿಲುಕಿದೆ. ರಾಬಿನ್ ಉತ್ತಪ್ಪ 28, ಅಂಬಟಿ ರಾಯುಡು 15 ಹಾಗೂ ಶಿವಂ ದುಬೆ 3 ರನ್ ಗಳಿಸಿದರು. 

ಒಲಿಂಪಿಕ್ ಪದಕ ವಿಜೇತರಿಗೆ ಬಿಸಿಸಿಐ ಸನ್ಮಾನ

ಉಮೇಶ್ ಯಾದವ್ ಮಿಂಚಿನ ದಾಳಿ

ಆರಂಭಿಕ ಆಘಾತಕ್ಕೊಳಗಾದ ಚೆನ್ನೈ

ಟಾಸ್ ಸೋತು ಬ್ಯಾಟಿಂಗ್‌ಗೆ  ಆಹ್ವಾನಿಸಲ್ಪಟ್ಟ ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. 28 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ಋತುರಾಜ್ ಗಾಯಕವಾಡ್ (0) ಹಾಗೂ ಡೆವೊನ್ ಕಾನ್ವೆ (3) ವಿಕೆಟ್‌ಗಳನ್ನು ಕಳೆದುಕೊಂಡಿತು. ಇವರಿಬ್ಬರನ್ನು ಹೊರದಬ್ಬಿದ ಉಮೇಶ್ ಯಾದವ್ ನಿಖರ ದಾಳಿ ಸಂಘಟಿಸಿದರು.  

ಕೆಕೆಆರ್ ಬೌಲರ್‌ಗಳ ಮೇಲುಗೈ

ಚೆನ್ನೈ ನಿಧಾನಗತಿಯ ಆರಂಭ ಪಡೆದಿದ್ದು, ನಾಲ್ಕು ಓವರ್‌ಗಳ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದೆ. 

ಗಾಯಕವಾಡ್ ಶೂನ್ಯಕ್ಕೆ ಔಟ್, ಚೆನ್ನೈಗೆ ಆಘಾತ

ಇನ್ನಿಂಗ್ಸ್‌ನ ಪ್ರಥಮ ಓವರ್‌ನಲ್ಲೇ ಋತುರಾಜ್ ಗಾಯಕವಾಡ್ ವಿಕೆಟ್ ಕಬಳಿಸುವಲ್ಲಿ ಉಮೇಶ್ ಯಾದವ್ ಯಶಸ್ವಿಯಾಗಿದ್ದಾರೆ. 

ಕೋಲ್ಕತ್ತ ನೈಟ್ ರೈಡರ್ಸ್

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ತಂಡದ ನೂತನ ನಾಯಕ

ಟಾಸ್ ಗೆದ್ದ ಶ್ರೇಯಸ್ ಅಯ್ಯರ್

ಪ್ಲೇಯಿಂಗ್ ಇಲೆವೆನ್:

ಕೋಲ್ಕತ್ತ: ಶ್ರೇಯಸ್ ಅಯ್ಯರ್ (ನಾಯಕ), ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಆ್ಯಂಡ್ರೆ ರಸೆಲ್, ಸುನಿಲ್ ನಾರಾಯಣ್, ಶೆಲ್ಡನ್ ಜಾಕ್ಸನ್, ಉಮೇಶ್ ಯಾದವ್, ಶಿವಂ ಮಾವಿ, ವರುಣ್ ಚಕ್ರವರ್ತಿ.

ಚೆನ್ನೈ: ರವೀಂದ್ರ ಜಡೇಜ (ನಾಯಕ), ಋತುರಾಜ್ ಗಾಯಕವಾಡ್, ಡೆವೊನ್ ಕಾನ್ವೆ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಶಿವಂ ದುಬೆ, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ಡ್ವೇನ್ ಬ್ರಾವೊ, ಮಿಚೆಲ್ ಸ್ಯಾಂಟನರ್, ಆ್ಯಡಂ ಮಿಲ್ನೆ, ತುಷಾರ್ ದೇಶಪಾಂಡೆ. 
 

ಟಾಸ್ ಗೆದ್ದ ಕೋಲ್ಕತ್ತ ಫೀಲ್ಡಿಂಗ್ ಆಯ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ನಡೆಯುತ್ತಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದಿರುವ ಕೋಲ್ಕತ್ತ ನೈಟ್ ರೈಡರ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. 

ಶುಭಾರಂಭದ ನಿರೀಕ್ಷೆಯಲ್ಲಿ ಚೆನ್ನೈ

ಶ್ರೇಯಸ್ ಅಯ್ಯರ್ ತಯಾರಿ

ಐಪಿಎಲ್ ಟ್ರೋಫಿ

ಉದ್ಘಾಟನಾ ಪಂದ್ಯ: ಚೆನ್ನೈ vs ಕೋಲ್ಕತ್ತ

ಇಂದಿನಿಂದ ಐಪಿಎಲ್ ಹಬ್ಬ

ಎರಡು ಡಿಆರ್‌ಎಸ್‌; ‘ಮಂಕಡಿಂಗ್‌’ಗೆ ಅವಕಾಶ

ಎರಡು ಡಿಆರ್‌ಎಸ್‌, ಮಂಕಂಡಿಂಗ್‌ನಲ್ಲಿ ರನೌಟ್ ಸೇರಿದಂತೆ ಎಂಸಿಸಿ ಜಾರಿಗೆ ತಂದಿರುವ ಹೊಸ ನಿಯಮಗಳೆಲ್ಲವೂ ಈ ಬಾರಿಯ ಐಪಿಎಲ್‌ನಲ್ಲಿ ಇರುತ್ತವೆ.

* ಅಂಪೈರ್ ತೀರ್ಪು ಮರುಪರಿಶೀಲನೆ (ಡಿಆರ್‌ಎಸ್‌) ಪದ್ಧತಿಯಡಿ ಈ ಹಿಂದೆ ಒಂದು ತಂಡಕ್ಕೆ ಇನಿಂಗ್ಸ್‌ನಲ್ಲಿ ಒಂದು ಅವಕಾಶ ಮಾತ್ರ ನೀಡಲಾಗುತ್ತಿತ್ತು. ಈ ಬಾರಿಯ ಟೂರ್ನಿಯ ಪಂದ್ಯಗಳಲ್ಲಿ ಪ್ರತಿ ತಂಡಕ್ಕೆ ಪ್ರತಿ ಇನಿಂಗ್ಸ್‌ನಲ್ಲಿ ಎರಡು  ಡಿಆರ್‌ಎಸ್‌ ಅವಕಾಶಗಳು ಲಭಿಸಲಿವೆ. 

* ಕೋವಿಡ್–19ರ ಸಂದರ್ಭದಲ್ಲಿ ಚೆಂಡಿಗೆ ಎಂಜಲು ಸವರುವುದರ ಮೇಲೆ ಐಸಿಸಿ ನಿಷೇಧ ಹೇರಿತ್ತು. ಐಪಿಎಲ್‌ನಲ್ಲಿ ಈ ಬಾರಿ ಈ ನಿಯಮ ಜಾರಿಯಲ್ಲಿರುತ್ತೆ.

* ಬೌಲರ್ ಚೆಂಡು ರಿಲೀಸ್ ಮಾಡುವ ಮೊದಲೇ ನಾನ್‌ ಸ್ಟ್ರೈಕರ್ ಕ್ರೀಸ್ ಬಿಟ್ಟರೆ ರನೌಟ್ ಮಾಡುವುದಕ್ಕೂ (ಮಂಕಡಿಂಗ್) ಹೊಸ ನಿಯಮದಲ್ಲಿ ಅವಕಾಶವಿದೆ.

* ತಂಡದಲ್ಲಿ ಸೋಂಕು ಕಾಣಿಸಿಕೊಂಡು 12 ಆಟಗಾರರು (ಭಾರತದ 7 ಆಟಗಾರರು ಕಡ್ಡಾಯ) ಆಟಕ್ಕೆ ಲಭ್ಯ ಇಲ್ಲದೇ ಇದ್ದರೆ ಆ ಪಂದ್ಯವನ್ನು ಮರುನಿಗದಿ ಮಾಡಲಾಗುತ್ತದೆ. ಈ ಕುರಿತು ಐಪಿಎಲ್ ತಾಂತ್ರಿಕ ಸಮಿತಿ ನಿರ್ಧಾರ ಕೈಗೊಳ್ಳಲಿದೆ.

* ಬ್ಯಾಟರ್ ಕ್ಯಾಚ್ ಔಟ್‌ ಆದಾಗ ನಾನ್‌ಸ್ಟ್ರೈಕರ್ ಕ್ರೀಸ್‌ನ ಅರ್ಧಭಾಗವನ್ನು ದಾಟಿದ್ದರೆ ಮುಂದಿನ ಎಸೆತ ಎದುರಿಸುವ ಅವಕಾಶ ಆ ಬ್ಯಾಟರ್‌ಗೆ ಲಭಿಸುತ್ತಿತ್ತು. ಆದರೆ ಇನ್ನು ಮುಂದೆ ಹೊಸ ಬ್ಯಾಟರ್ ಸ್ಟ್ರೈಕ್‌ ತೆಗೆದುಕೊಳ್ಳಲು ಅರ್ಹ.

ತಂಡಗಳು:

ಚೆನ್ನೈ ಸೂಪರ್ ಕಿಂಗ್ಸ್: ರವೀಂದ್ರ ಜಡೇಜ(ನಾಯಕ), ಮಹೇಂದ್ರ ಸಿಂಗ್ ಧೋನಿ, ಸಿ. ಹರಿ ನಿಶಾಂತ್, ಡೆವೊನ್ ಕಾನ್ವೆ, ರಾಬಿನ್ ಉತ್ತಪ್ಪ, ಋತುರಾಜ್ ಗಾಯಕವಾಡ್, ಸುಬ್ರಾಂಶು ಸೇನಾಪತಿ, ಅಂಬಟಿ ರಾಯುಡು, ಎನ್.ಜಗದೀಶನ್, ಕ್ರಿಸ್ ಜೋರ್ಡಾನ್, ಡ್ವೇನ್ ಪ್ರಿಟೋರಿಯಸ್, ಡ್ವೇನ್ ಬ್ರಾವೊ, ಕೆ.ಭಗತ್ ವರ್ಮಾ, ಮಿಚೆಲ್ ಸ್ಯಾಂಟನರ್,  ರಾಜವರ್ಧನ್ ಹಂಗರ್ಗೇಕರ್, ಶಿವಂ ದುಬೆ, ಆ್ಯಡಂ ಮಿಲ್ನೆ, ದೀಪಕ್ ಚಾಹರ್, ಕೆ.ಎಂ.ಆಸಿಫ್, ಮಹೀಶ್ ತೀಕ್ಷಣ, ಮುಖೇಶ್ ಚೌಧರಿ,  ಪ್ರಶಾಂತ್ ಸೋಲಂಕಿ, ಸಿಮರ್‌ಜೀತ್‌ ಸಿಂಗ್, ತುಷಾರ್ ದೇಶಪಾಂಡೆ,  

ಕೋಲ್ಕತ್ತ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್ (ನಾಯಕ), ಅಜಿಂಕ್ಯ ರಹಾನೆ, ರಿಂಕು ಸಿಂಗ್, ಅಲೆಕ್ಸ್ ಹೇಲ್ಸ್, ಆ್ಯರನ್‌ ಫಿಂಚ್, ಅಭಿಜೀತ್ ತೋಮರ್, ರಮೇಶ್ ಕುಮಾರ್, ಪ್ರಥಮ್ ಸಿಂಗ್, ಸ್ಯಾಮ್ ಬಿಲಿಂಗ್ಸ್, ಶೆಲ್ಡನ್ ಜಾಕ್ಸನ್, ಬಾಬಾ ಇಂದ್ರಜೀತ್, ಪ್ಯಾಟ್ ಕಮಿನ್ಸ್, ಮೊಹಮ್ಮದ್ ನಬಿ, ನಿತೀಶ್ ರಾಣಾ, ಶಿವಂ ಮಾವಿ, ಅನುಕೂಲ್ ರಾಯ್, ಚಮಿಕಾ ಕರುಣರತ್ನೆ, ಅಮನ್ ಖಾನ್, ಆ್ಯಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಉಮೇಶ್ ಯಾದವ್, ರಸಿಕ್‌ ದಾರ್, ಟಿಮ್ ಸೌಥಿ, ಅಶೋಕ್ ಶರ್ಮಾ, ಸುನಿಲ್ ನಾರಾಯಣ್, ವರುಣ್ ಚಕ್ರವರ್ತಿ

ಜಡೇಜ vs ಅಯ್ಯರ್

ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಆಧಾರಸ್ತಂಭಗಳಾಗಿರುವ ಇಬ್ಬರು ಆಟಗಾರರು ಶನಿವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಪ್ರತಿಸ್ಪರ್ಧಿಗಳಾಗಿ ಕಣಕ್ಕಿಳಿಯಲಿದ್ದಾರೆ.

ಇಲ್ಲಿ ಆರಂಭವಾಗಲಿರುವ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿರುವ ಆ ಇಬ್ಬರು ಆಟಗಾರರು ರವೀಂದ್ರ ಜಡೇಜ ಮತ್ತು ಶ್ರೇಯಸ್ ಅಯ್ಯರ್. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಜಡೇಜ ಮತ್ತು ರನ್ನರ್ ಅಪ್ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳನ್ನು ಇವರಿಬ್ಬರೂ ಮುನ್ನಡೆಸಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.