ಮುಂಬೈ: ಕುತೂಹಲಕಾರಿ ಬೆಳವಣಿಗೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟರ್ ಅಂಬಟಿ ರಾಯುಡು, ಐಪಿಎಲ್‌ಗೆ ನಿವೃತ್ತಿ ಘೋಷಣೆ ಟ್ವೀಟ್ ಮಾಡಿ ಬಳಿಕ ಅಳಿಸಿ ಹಾಕಿರುವ ಘಟನೆ ನಡೆದಿದೆ.
ರಾಯುಡು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇದು ತಮ್ಮ ಕೊನೆಯ ಐಪಿಎಲ್ ಎಂದು ಬರೆದುಕೊಂಡಿದ್ದರು. ಅಲ್ಲದೆ ಕಳೆದ 13 ವರ್ಷಗಳಿಂದ ಎರಡು ಶ್ರೇಷ್ಠ ತಂಡಗಳ ಭಾಗವಾಗುವ ಮೂಲಕ ಅದ್ಭುತ ಸಮಯವನ್ನು ಕಳೆದಿದ್ದೇನೆ ಎಂದು ಹೇಳಿದ್ದಾರೆ.
ಈಅದ್ಭುತ ಪಯಣಕ್ಕಾಗಿ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್‌ಕೆಗೆ ಪ್ರಾಮಾಣಿಕವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ರಾಯುಡು ಅವರ ಮುಂದಿನಪಯಣಕ್ಕೆಶುಭ ಹಾರೈಸಿದ್ದರು.
ಆದರೆ ಅಚ್ಚರಿಯೆಂಬಂತೆ ಸ್ವಲ್ಪ ಹೊತ್ತಲ್ಲೇ ರಾಯುಡು ತಮ್ಮ ಟ್ವೀಟ್ ಅಳಿಸಿ ಹಾಕಿದ್ದಾರೆ. ಇದರಿಂದಾಗಿ ಅಭಿಮಾನಿಗಳಲ್ಲೂ ಗೊಂದಲ ಉಂಟಾಗಿದೆ.
ಬಳಿಕ 'ಎನ್‌ಡಿಟಿವಿ'ಗೆ ಸ್ಪಷ್ಟನೆ ಕೊಟ್ಟಿರುವ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್, 'ರಾಯುಡು ನಿವೃತ್ತಿಯಾಗುತ್ತಿಲ್ಲ. ಉತ್ತಮ ಪ್ರದರ್ಶನ ನೀಡದಿರುವುದರಿಂದ ಅವರು ನಿರಾಸೆಗೊಂಡಿದ್ದರು. ಹಾಗಾಗಿ ಎಡವಟ್ಟಾಗಿ ಟ್ವೀಟ್ ಹಾಕಿದ್ದಾರೆ. ನಾನು ಅವರಿಗೆ ವಿಷಯ ವಿವರಿಸಿದ್ದೇನೆ. ಅವರು ನಿವೃತ್ತಿಯಾಗುತ್ತಿಲ್ಲ. ನಮ್ಮೊಂದಿಗೆ ಇರುತ್ತಾರೆ' ಎಂದು ಹೇಳಿದ್ದಾರೆ.
2019ರಲ್ಲಿ ಭಾರತದ ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದಿದ್ದಾಗ ರಾಯುಡು ಎಲ್ಲ ಪ್ರಕಾರದ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಬಳಿಕ ತಮ್ಮ ನಿರ್ಧಾರ ಬದಲಿಸಿ ದೇಶೀಯ ಕ್ರಿಕೆಟ್‌ಗೆ ಮರಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.