ಮುಂಬೈ: ಟ್ವೆಂಟಿ-20 ಕ್ರಿಕೆಟ್ ಇತಿಹಾಸದಲ್ಲೇಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ದಾಖಲೆಯ 89ನೇ ಅರ್ಧಶತಕ ಗಳಿಸಿದ್ದಾರೆ.
ಈ ಮೂಲಕ ವೆಸ್ಟ್ ಇಂಡೀಸ್‌ನ ದೈತ್ಯ ಕ್ರಿಸ್ ಗೇಲ್ (88 ಅರ್ಧಶತಕ) ದಾಖಲೆ ಮುರಿದಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ವಿರಾಟ್ ಕೊಹ್ಲಿ (77) ಹಾಗೂ ರೋಹಿತ್ ಶರ್ಮಾ (69) ಕ್ರಮವಾಗಿ ಮೂರು ಹಾಗೂ ಐದನೇ ಸ್ಥಾನದಲ್ಲಿದ್ದಾರೆ.
ಐಪಿಎಲ್ 2022 ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ವಾರ್ನರ್ ತನ್ನ ಹಳೆಯ ತಂಡವಾದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಕರ್ಷಕ ಅರ್ಧಶತಕ ಗಳಿಸಿದರು.
ಈ ಮೂಲಕ ಐಪಿಎಲ್‌ನಲ್ಲೂ ದಾಖಲೆಯ 54ನೇ ಅರ್ಧಶತಕ ಬಾರಿಸಿದರು. ಅಲ್ಲದೆ ಈ ಬಾರಿಯ ಐಪಿಎಲ್‌ನಲ್ಲಿ 4ನೇ ಫಿಫ್ಟಿ ಬಾರಿಸಿದರು.
34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವಾರ್ನರ್, ಹೈದರಾಬಾದ್ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದರು.
ಅಂತಿಮವಾಗಿ 92 ರನ್ ಗಳಿಸಿ ಔಟಾಗದೆ ಉಳಿದರು. ಈ ಮೂಲಕ ಕೇವಲ ಎಂಟು ರನ್ ಅಂತರದಿಂದ ಐಪಿಎಲ್‌ನಲ್ಲಿ 5ನೇ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು.
58 ಎಸೆತಗಳನ್ನು ಎದುರಿಸಿದ ವಾರ್ನರ್ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು.
ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಸಾಧನೆ:
ಡೇವಿಡ್ ವಾರ್ನರ್: 89
ಕ್ರಿಸ್ ಗೇಲ್: 88
ವಿರಾಟ್ ಕೊಹ್ಲಿ: 77
ಆ್ಯರನ್ ಫಿಂಚ್: 70
ರೋಹಿತ್ ಶರ್ಮಾ: 69
ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಸಾಧನೆ:
ಡೇವಿಡ್ ವಾರ್ನರ್: 54
ಶಿಖರ್ ಧವನ್: 49
ವಿರಾಟ್ ಕೊಹ್ಲಿ: 48
ಎಬಿ ಡಿವಿಲಿಯರ್ಸ್: 43
ರೋಹಿತ್ ಶರ್ಮಾ: 41
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.