ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎಂಬ ಕೀರ್ತಿಗೆ ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೊ ಭಾಜನರಾಗಿದ್ದಾರೆ.
ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಬ್ರಾವೊ, ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ನೂತನ ಮೈಲಿಗಲ್ಲು ಸ್ಥಾಪಿಸಿದರು.
ಈ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ ದಾಖಲೆ ಮುರಿದಿರುವ ಬ್ರಾವೊ, ಈವರೆಗೆ ಒಟ್ಟು 171 ವಿಕೆಟ್ ಗಳಿಸಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಟಾಪ್ 5 ಬೌಲರ್‌ಗಳ ಪಟ್ಟಿ:
ಡ್ವೇನ್ ಬ್ರಾವೊ: 171
ಲಸಿತ್ ಮಾಲಿಂಗ: 170
ಅಮಿತ್ ಮಿಶ್ರಾ: 166
ಪಿಯೂಷ್ ಚಾವ್ಲಾ: 157
ಹರಭಜನ್ ಸಿಂಗ್: 150
ಬ್ರಾವೊ ಚಾಂಪಿಯನ್; ಮಾಲಿಂಗ ಅಭಿನಂದನೆ...
ಏತನ್ಮಧ್ಯೆ ಐಪಿಎಲ್‌ನಲ್ಲಿ ತಮ್ಮ ದಾಖಲೆ ಅಳಿಸಿರುವ ಬ್ರಾವೊ ಅವರನ್ನು ಅಭಿನಂದಿಸಿರುವ ಮಾಲಿಂಗ, ಚಾಂಪಿಯನ್ ಎಂದು ಕರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.