ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್ಯಜುವೇಂದ್ರ ಚಾಹಲ್, ಚೊಚ್ಚಲ ಹ್ಯಾಟ್ರಿಕ್ ಸೇರಿದಂತೆ ಐದು ವಿಕೆಟ್ ಸಾಧನೆ ಮಾಡಿದ್ದಾರೆ.
ಇದರಲ್ಲಿ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಸಾಧನೆಯೂ ಸೇರಿತ್ತು ಎಂಬುದು ಗಮನಾರ್ಹವೆನಿಸುತ್ತದೆ. ಈ ಮೂಲಕ ಬೌಲರ್‌ಗಳ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚಾಹಲ್ ಜಾದೂ ಮಾಡಿದರು.
ಇನ್ನಿಂಗ್ಸ್‌ನ 17ನೇ ಓವರ್‌ನಲ್ಲಿ ವೆಂಕಟೇಶ್ ಅಯ್ಯರ್ (6), ಶ್ರೇಯಸ್ ಅಯ್ಯರ್ (85), ಶಿವಂ ಮಾವಿ (0) ಹಾಗೂ ಪ್ಯಾಟ್ ಕಮಿನ್ಸ್ (0) ಹೊರದಬ್ಬಿದ ಚಾಹಲ್, ದಾಖಲೆ ಬರೆದರು.
ಈ ಮೂಲಕ ರಾಜಸ್ಥಾನ್ ತಂಡಕ್ಕೆ ಏಳು ರನ್ ಅಂತರದ ರೋಚಕಗೆಲುವು ಒದಗಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದರು.
ಶ್ರೇಯಸ್ ಅಯ್ಯರ್ ಕ್ರೀಸಿನಲ್ಲಿದ್ದಾಗ ಕೆಕೆಆರ್ ಗೆಲುವು ದಾಖಲಿಸಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ ಚಾಹಲ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು.
ಹ್ಯಾಟ್ರಿಕ್ ಗಳಿಸಿದ ಬಳಿಕ ಚಾಹಲ್ ಸಂಭ್ರಮವು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಇದೇ ಐಪಿಎಲ್‌ನಲ್ಲಿ ಕ್ಯಾಚ್ ಕೈಚೆಲ್ಲಿದ ಪರಿಣಾಮ ಚಾಹಲ್‌ಗೆ ಹ್ಯಾಟ್ರಿಕ್ ಮಿಸ್ ಆಗಿತ್ತು. ಆದರೆ ಈ ಬಾರಿ ಹ್ಯಾಟ್ರಿಕ್ ಗಳಿಸುವ ಮೂಲಕ ಪಂದ್ಯವನ್ನುಸ್ಮರಣೀಯವಾಗಿಸಿದರು.
ಒಟ್ಟಾರೆಯಾಗಿ ಐಪಿಎಲ್ ಇತಿಹಾಸದಲ್ಲಿ 21ನೇ ಬಾರಿಗೆ ಹ್ಯಾಟ್ರಿಕ್ ಸಾಧನೆ ದಾಖಲಾಗಿದೆ. ಅಲ್ಲದೆ ಚಾಹಲ್,ಈ ಸಾಧನೆ ಮಾಡಿದ ರಾಜಸ್ಥಾನ್ ತಂಡದ ಐದನೇ ಬೌಲರ್ ಎನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.