ನವದೆಹಲಿ: ಈ ಸಲದ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯವು ಮಳೆಯಿಂದ ನಡೆಯದಿದ್ದರೆ ಸೂಪರ್ ಓವರ್ ಮೂಲಕ ವಿಜೇತ ತಂಡವನ್ನು ನಿರ್ಧರಿಸಲಾಗುವುದು.
ಸೂಪರ್ ಓವರ್ ಕೂಡ ಸಾಧ್ಯವಾಗದಿದ್ದರೆ ಲೀಗ್ ಹಂತದಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ವಿಜಯಿಯನ್ನು ನಿರ್ಧರಿಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕ್ವಾಲಿಫೈಯರ್ 1, ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಪಂದ್ಯಗಳಿಗೂ ಇದೇ ನಿಯಮ ಅನ್ವಯವಾಗಲಿದೆ. ಈ ಪಂದ್ಯಗಳಿಗೆ ಕಾಯ್ದಿಟ್ಟ ದಿನಗಳನ್ನು ನಿಗದಿಪಡಿಸಿಲ್ಲ. ಆದರೆ ಫೈನಲ್ ಪಂದ್ಯಕ್ಕೆ ಒಂದು ಮೀಸಲು ದಿನವನ್ನು (ಮೇ 30) ಇರಿಸಲಾಗಿದೆ. ರಾತ್ರಿ 8ಕ್ಕೆ ಪಂದ್ಯ ಆರಂಭವಾಗಲಿದೆ.
‘ನಿಗದಿಯ ಅವಧಿಯಲ್ಲಿ ಆಟ ನಡೆಯದಿದ್ದರೆ ಸೂಪರ್ ಓವರ್ ಮಾಡಿಸಲಾಗುತ್ತದೆ. ಆದರೆ ನಿಗದಿತ ಸಮಯದಲ್ಲಿ ಅವಕಾಶ ಸಿಕ್ಕರೆ ಕನಿಷ್ಠ 5 ಓವರ್‌ಗಳಾದರೂ ಸರಿ ಆಟ ನಡೆಸಲಾಗುವುದು’ ಎಂದು ಐಪಿಎಲ್ ನಿಯಮದಲ್ಲಿ ತಿಳಿಸಲಾಗಿದೆ.
‘ನನ್ನ ತವರು ಈಡನ್ ಅಲ್ಲ’
ಕೋಲ್ಕತ್ತ: ಭಾರತ ತಂಡದ ವಿಕೆಟ್‌ಕೀಪರ್ ಬ್ಯಾಟರ್ ವೃದ್ಧಿಮಾನ್ ಸಹಾ ಅವರು ತಮ್ಮ ತವರು ಈಡನ್ ಗಾರ್ಡನ್ ಅಲ್ಲ. ಮೊಟೇರಾ ಕ್ರೀಡಾಂಗಣ ಎಂದು ಹೇಳಿದ್ದಾರೆ.
ಮೂಲತಃ ಬಂಗಾಳದ ಆಟಗಾರನಾಗಿರುವ ಸಹಾ ಐಪಿಎಲ್‌ನಲ್ಲಿ ಗುಜರಾತ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.