ಮುಂಬೈ: ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿ 15ನೇ ಆವೃತ್ತಿಗೆ ಕಾಲಿಟ್ಟಿದೆ.
ಇದರಂತೆ ಎಲ್ಲರ ಕಣ್ಣು ಐಪಿಎಲ್ ಮೇಲೆ ನೆಟ್ಟಿದೆ. ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ ಐಪಿಎಲ್ ತಂಡಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಅಲ್ಲದೆ ಲೀಗ್ ಹಂತವು ಹೊಸ ಮಾದರಿಯಲ್ಲಿ ಆಯೋಜನೆಯಾಗಲಿದೆ.
ಐಪಿಎಲ್ ಯುವ ಆಟಗಾರರ ಪಾಲಿಗೆ ಉತ್ತಮ ವೇದಿಕೆಯಾಗಿದೆ. ದೇಶೀಯ ಹಾಗೂ ವಿದೇಶಿ ಆಟಗಾರರ ಮಿಶ್ರಣವು ಮತ್ತಷ್ಟು ರೋಚಕತೆಗೆ ಸಾಕ್ಷಿಯಾಗಿದೆ.
2008ರಲ್ಲಿ ಆರಂಭವಾದ ಚೊಚ್ಚಲ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಚಾಂಪಿಯನ್ ಎನಿಸಿಕೊಂಡಿತ್ತು. ಆದರೆ ಅಲ್ಲಿಂದ ಬಳಿಕ ಮುಂಬೈ ಹಾಗೂ ಚೆನ್ನೈ ತಂಡಗಳು ಪಾರುಪತ್ಯ ಮೆರೆದಿವೆ.
ಮುಂಬೈ ಇಂಡಿಯನ್ಸ್ ಫ್ರಾಂಚೈಸ್ ದಾಖಲೆಯ ಐದು ಬಾರಿ ಪ್ರಶಸ್ತಿ ಜಯಿಸಿವೆ. ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು, ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ (ಹಿಂದೆ ಡೆಕ್ಕನ್ ಚಾರ್ಜರ್ಸ್) ತಲಾ ಎರಡು ಬಾರಿ ಕಿರೀಟ ಎತ್ತಿ ಹಿಡಿದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದುವರೆಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಮೂರು ಬಾರಿ ರನ್ನರ್-ಅಪ್ ಸ್ಥಾನ ಗಳಿಸಿರುವುದು ಶ್ರೇಷ್ಠ ಸಾಧನೆಯಾಗಿದೆ. ಡೆಲ್ಲಿ ಕಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿಗೂ ಪ್ರಶಸ್ತಿ ಬರ ಕಾಡುತ್ತಿದೆ.
ಐಪಿಎಲ್ ಚಾಂಪಿಯನ್ ಹಾಗೂ ರನ್ನರ್-ಅಪ್ ತಂಡಗಳ ವಿವರಗಳು:
2008: ಚಾಂಪಿಯನ್: ರಾಜಸ್ಥಾನ್ ರಾಯಲ್ಸ್, ರನ್ನರ್-ಅಪ್: ಚೆನ್ನೈ ಸೂಪರ್ ಕಿಂಗ್ಸ್
2009: ಚಾಂಪಿಯನ್: ಡೆಕ್ಕನ್ ಚಾರ್ಜರ್ಸ್, ರನ್ನರ್-ಅಪ್: ರಾಯಲ್ ಚಾಲೆಂಜರ್ಸ್ ಬೆಂಗಳೂರು
2010: ಚಾಂಪಿಯನ್: ಚೆನ್ನೈ ಸೂಪರ್ ಕಿಂಗ್ಸ್, ರನ್ನರ್-ಅಪ್: ಮುಂಬೈ ಇಂಡಿಯನ್ಸ್
2011: ಚಾಂಪಿಯನ್: ಚೆನ್ನೈ ಸೂಪರ್ ಕಿಂಗ್ಸ್, ರನ್ನರ್-ಅಪ್: ರಾಯಲ್ ಚಾಲೆಂಜರ್ಸ್ ಬೆಂಗಳೂರು
2012: ಚಾಂಪಿಯನ್: ಕೋಲ್ಕತ್ತ ನೈಟ್ ರೈಡರ್ಸ್, ರನ್ನರ್-ಅಪ್: ಚೆನ್ನೈ ಸೂಪರ್ ಕಿಂಗ್ಸ್
2013: ಚಾಂಪಿಯನ್: ಮುಂಬೈ ಇಂಡಿಯನ್ಸ್, ರನ್ನರ್-ಅಪ್: ಚೆನ್ನೈ ಸೂಪರ್ ಕಿಂಗ್ಸ್
2014: ಚಾಂಪಿಯನ್: ಕೋಲ್ಕತ್ತ ನೈಟ್ ರೈಡರ್ಸ್, ರನ್ನರ್-ಅಪ್: ಪಂಜಾಬ್ ಕಿಂಗ್ಸ್
2015: ಚಾಂಪಿಯನ್: ಮುಂಬೈ ಇಂಡಿಯನ್ಸ್, ರನ್ನರ್-ಅಪ್: ಚೆನ್ನೈ ಸೂಪರ್ ಕಿಂಗ್ಸ್
2016: ಚಾಂಪಿಯನ್: ಸನ್‌ರೈಸರ್ಸ್ ಹೈದರಾಬಾದ್, ರನ್ನರ್-ಅಪ್: ರಾಯಲ್ ಚಾಲೆಂಜರ್ಸ್ ಬೆಂಗಳೂರು
2017: ಚಾಂಪಿಯನ್: ಮುಂಬೈ ಇಂಡಿಯನ್ಸ್, ರನ್ನರ್-ಅಪ್: ರೈಸಿಂಗ್ ಪುಣೆ ಸೂಪರ್‌ಜೈಂಟ್
2018: ಚಾಂಪಿಯನ್: ಚೆನ್ನೈ ಸೂಪರ್ ಕಿಂಗ್ಸ್, ರನ್ನರ್-ಅಪ್: ಸನ್‌ರೈಸರ್ಸ್ ಹೈದರಾಬಾದ್
2019: ಚಾಂಪಿಯನ್: ಮುಂಬೈ ಇಂಡಿಯನ್ಸ್, ರನ್ನರ್-ಅಪ್: ಚೆನ್ನೈ ಸೂಪರ್ ಕಿಂಗ್ಸ್
2020: ಚಾಂಪಿಯನ್: ಮುಂಬೈ ಇಂಡಿಯನ್ಸ್, ರನ್ನರ್-ಅಪ್: ಡೆಲ್ಲಿ ಕ್ಯಾಪಿಟಲ್ಸ್
2021: ಚಾಂಪಿಯನ್: ಚೆನ್ನೈ ಸೂಪರ್ ಕಿಂಗ್ಸ್, ರನ್ನರ್-ಅಪ್: ಕೋಲ್ಕತ್ತ ನೈಟ್ ರೈಡರ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.