ಕೊಚ್ಚಿ:ಇಂಗ್ಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಅವರನ್ನು ಪಂಜಾಬ್ ಕಿಂಗ್ಸ್‌ಫ್ರಾಂಚೈಸಿ ₹ 18.50 ಕೋಟಿ ನೀಡಿ ಖರೀದಿಸಿದೆ.
ಇದರೊಂದಿಗೆಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತ ಜೇಬಿಗಿಳಿಸಿಕೊಂಡ ಆಟಗಾರ ಎಂಬ ಶ್ರೇಯ ಸ್ಯಾಮ್ ಅವರದ್ದಾಗಿದೆ.
ಈ ಹಿಂದೆ (2021ರಲ್ಲಿ) ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕ್ರಿಸ್ ಮಾರಿಸ್ ಅವರನ್ನು ರಾಜಸ್ತಾನ ರಾಯಲ್ಸ್ ತಂಡ ₹ 16.25 ಕೋಟಿ ನೀಡಿ ಖರೀದಿಸಿತ್ತು. ಅದು ಈ ವರೆಗೆ ದಾಖಲೆಯಾಗಿತ್ತು.
ಆಸ್ಟ್ರೇಲಿಯಾದ 23 ವರ್ಷಆಟಗಾರಕೆಮರೂನ್ ಗ್ರೀನ್ ಅವರಿಗೆಮುಂಬೈ ಇಂಡಿಯನ್ಸ್ ಫ್ರಾಂಚೈಸಿ₹17.50 ಕೋಟಿ ನೀಡಿದೆ. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರನ್ನುಚೆನ್ನೈ ಸೂಪರ್ ಕಿಂಗ್ಸ್ ತಂಡ₹ 16.25 ಕೋಟಿಗೆ ಖರೀದಿಸಿದೆ.ಗ್ರೀನ್ ಹಾಗೂಸ್ಟೋಕ್ಸ್ ಅವರಿಗೆ ₹ 2 ಕೋಟಿ ಮೂಲ ಬೆಲೆ ನಿಗದಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.