ಅಹಮದಾಬಾದ್: ಸೋಮವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಗೋಲ್ಡನ್ ಡಕ್ ಆಗುವ ಮೂಲಕ ಪ್ರೇಕ್ಷರಲ್ಲಿ ತೀವ್ರ ನಿರಾಸೆ, ಆಘಾತ ಮೂಡಿಸಿದರು.
ಡಕ್ವರ್ತ್ ಲುಯಿಸ್ ಸೂತ್ರದಂತೆ ಪರಿಷ್ಕರಣೆಗೊಂಡ ಪಂದ್ಯದಲ್ಲಿ ಚೆನ್ನೈಗೆ 15 ಓವರ್‌ಗಳಲ್ಲಿ 171 ರನ್‌ಗಳ ಗುರಿ ನಿಗದಿಯಾಗಿತ್ತು.
ಸವಾಲಿನ ಮೊತ್ತ ಬೆನ್ನಟ್ಟಿದ್ದ ಸಿಎಸ್‌ಕೆ ಅದ್ಭುತ ಆರಂಭವನ್ನೇ ಪಡೆಯಿತು. ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದ್ದಾಗ 13ನೇ ಓವರ್‌ನಲ್ಲಿ ಅಜಿಂಕ್ಯ ರಹಾನೆ ಔಟಾದರು. ತಂಡಕ್ಕೆ 13ರನ್‌ಗಳ ಅಗತ್ಯವಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ ಆರ್ಡರ್ ಬದಲಿಸಿ, ಸ್ವತಃ ದೋನಿ ಅವರೇ ಬ್ಯಾಟಿಂಗ್‌ಗೆ ಬಂದರು.
ಆದರೆ, ಮೋಹಿತ್ ಶರ್ಮಾ ಬೌಲಿಂಗ್‌ನಲ್ಲಿ ಎಕ್ಸ್‌ಟ್ರಾ ಕವರ್‌ನಲ್ಲಿ ಡೇವಿಡ್ ಮಿಲ್ಲರ್ ಅವರಿಗೆ ಕ್ಯಾಚ್ ನೀಡಿದ ಧೋನಿ ಔಟಾಗಿ ಹೊರನಡೆಯಬೇಕಾಯಿತು. ಇದು ಅಭಿಮಾನಿಗಳಲ್ಲಿ ತೀವ್ರ ನಿರಾಶೆ, ಆಘಾತ ಮೂಡಿಸಿತು.
ಕ್ವಾಲಿಫೈಯರ್ 1ರಲ್ಲೂ ಮೋಹಿತ್ ಶರ್ಮಾ ಅವರು ಧೋನಿಯನ್ನು ಔಟ್ ಮಾಡಿದ್ದರು.
ಒಟ್ಟಾರೆ ಐಪಿಎಲ್‌ನಲ್ಲಿ ಧೋನಿ ಈ ವರೆಗೆ 5 ಬಾರಿ ಗೋಲ್ಡನ್ ಡಕ್ ಆಗಿದ್ದಾರೆ.
ಅಹಮದಾಬಾದ್‌ನಲ್ಲಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್ ತಂಡ, 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214ರನ್ ಗಳಿಸಿತ್ತು. ಮೊದಲ ಇನ್ನಿಂಗ್ಸ್ ನಂತರ ಮಳೆ ಸುರಿದಿದ್ದರಿಂದ ಡಕ್ವರ್ಥ್ ಲೂಯಿಸ್ ನಿಯಮದಂತೆ ಪಂದ್ಯ ಪರಿಷ್ಕೃತಗೊಂಡಿತ್ತು. ಅದರಂತೆ, 15 ಓವರ್‌ಗಳಲ್ಲಿ 171 ರನ್‌ಗಳ ಗುರಿ ಬೆನ್ನಟ್ಟಿದ್ದ ಚೆನ್ನೈ ಗೆದ್ದು ಬೀಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.