ADVERTISEMENT

IPL 2023: ಸ್ಯಾಮ್ ಕರನ್ ಅಬ್ಬರ, ರಾಯಲ್ಸ್‌ ಗೆಲುವಿಗೆ 188 ರನ್ ಗುರಿ ನೀಡಿದ ಪಂಜಾಬ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮೇ 2023, 16:11 IST
Last Updated 19 ಮೇ 2023, 16:11 IST
ಸ್ಯಾಮ್ ಕರನ್
ಸ್ಯಾಮ್ ಕರನ್   

ಧರ್ಮಶಾಲಾ: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 66ನೇ ಪಂದ್ಯದಲ್ಲಿ ಶುಕ್ರವಾರ ರಾಜಸ್ಥಾನ ರಾಯಲ್ಸ್‌ ಮತ್ತು ಪಂಜಾಬ್ ಕಿಂಗ್ಸ್ ಗೆಲುವಿಗಾಗಿ ಸೆಣಸಾಟ ನಡೆಸುತ್ತಿವೆ.

ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ (ಎಚ್‌ಪಿಸಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಟಾಸ್‌ ಗೆದ್ದ ರಾಯಲ್ಸ್‌, ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 187 ರನ್ ಗಳಿಸಿದೆ.

ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಆರಂಭಿಕ ಆಘಾತ ಎದುರಿಸಿತು. ಪ್ರಭ್​ಸಿಮ್ರಾನ್ ಸಿಂಗ್ 2 ರನ್ ಗಳಿಸಿ ಟ್ರೆಂಟ್ ಬೌಲ್ಟ್‌ಗೆ ವಿಕೆಟ್‌ ಒಪ್ಪಿಸಿದರು. ಸ್ಯಾಮ್ ಕರನ್ ಔಟಾಗದೆ 49, ಶಾರುಖ್ ಖಾನ್ ಔಟಾಗದೆ 41, ಜಿತೇಶ್ ಶರ್ಮಾ 44, ಅಥರ್ವ್​ ಟೈಡೆ 19, ನಾಯಕ ಶಿಖರ್ ಧವನ್ 17, ಲಿಯಾಮ್ ಲಿವಿಂಗ್‌ಸ್ಟನ್ 09 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ADVERTISEMENT

ರಾಜಸ್ಥಾನ ರಾಯಲ್ಸ್ ಪರ ನವದೀಪ್ ಸೈನಿ 3, ಟ್ರೆಂಟ್ ಬೌಲ್ಟ್ ಹಾಗೂ ಆ್ಯಡಂ ಜಂಪಾ ತಲಾ ಒಂದೊಂದು ವಿಕೆಟ್ ಪಡೆದರು.

ಉಭಯ ತಂಡಗಳಿಗೂ ಈ ಪಂದ್ಯವು ಲೀಗ್ ಹಂತದಲ್ಲಿ ಕೊನೆಯದ್ದಾಗಿದೆ. ಅಲ್ಲದೇ ಜಯಿಸುವ ಒತ್ತಡವೂ ಇದೆ. ಪ್ಲೇಆಫ್‌ ಪ್ರವೇಶಿಸಲು ಉಭಯ ತಂಡಗಳಿಗೂ ಈ ಜಯ ಅಗತ್ಯ. ಆದರೆ ನಿವ್ವಳ ರನ್‌ ರೇಟ್‌ನಲ್ಲಿ ಉತ್ತಮವಾಗಿರುವ ರಾಜಸ್ಥಾನ ತಂಡವು ಗೆದ್ದರೆ ಪ್ಲೇ ಆಫ್‌ ಅವಕಾಶ ಹೆಚ್ಚು. ಆದರೂ ಇಬ್ಬರಲ್ಲಿ ಯಾರೇ ಗೆದ್ದರೂ ನಂತರದ ಪಂದ್ಯಗಳಲ್ಲಿ ಬರುವ ಫಲಿತಾಂಶದ ಲೆಕ್ಕಾಚಾರದವರೆಗೂ ಕಾಯುವುದು ಅನಿವಾರ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.