ಬೆಂಗಳೂರು: ಬಹುನಿರೀಕ್ಷಿತ, 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ.
ಮಾರ್ಚ್ 31ರಂದು ಆರಂಭವಾಗಲಿರುವ ಟೂರ್ನಿಯು ಮೇ 28ರವರೆಗೆ ನಡೆಯಲಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹಮದಾಬಾದ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಸವಾಲನ್ನು ಎದುರಿಸಲಿದೆ.
ಹಿಂದಿನಂತೆ ಹೋಮ್ ಹಾಗೂ ಎವೇ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಪ್ರತಿ ತಂಡಗಳು ತಲಾ ಏಳು ಹೋಮ್ ಹಾಗೂ ಎವೇ ಪಂದ್ಯಗಳನ್ನು ಆಡಲಿವೆ.
IPL 2023: ಬಹುನಿರೀಕ್ಷಿತ ಐಪಿಎಲ್ ವೇಳಾಪಟ್ಟಿ ಬಿಡುಗಡೆ - ಇಲ್ಲಿದೆ ಪಂದ್ಯಗಳ ವಿವರ
ಆರ್‌ಸಿಬಿಗೆ ಮೊದಲ ಪಂದ್ಯದಲ್ಲೇ ಬಲಿಷ್ಠ ಮುಂಬೈ ಸವಾಲು...
ಎಪ್ರಿಲ್ 2ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಹಣಾಹಣಿಯಲ್ಲಿ ರಾಯಲ್ ಚಾಲೆಂಜಲ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ.
ಭಾರತೀಯ ಕಾಲಮಾನ ಸಂಜೆಯ ಪಂದ್ಯಗಳು 3.30 ಮತ್ತು ರಾತ್ರಿಯ ಪಂದ್ಯಗಳು 7.30ಕ್ಕೆ ಸರಿಯಾಗಿ ಆರಂಭವಾಗಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಪೂರ್ಣ ವೇಳಾಪಟ್ಟಿ ಇಂತಿದೆ:
ದಿನಾಂಕ | ಆರ್‌ಸಿಬಿ ತಂಡದ ಎದುರಾಳಿ | ತಾಣ | ಸಮಯ |
ಭಾನುವಾರ, 02 ಎಪ್ರಿಲ್ 2023 | ಮುಂಬೈ ಇಂಡಿಯನ್ಸ್ | ಬೆಂಗಳೂರು | ರಾತ್ರಿ 7.30 |
ಗುರುವಾರ, 06 ಎಪ್ರಿಲ್ 2023 | ಕೋಲ್ಕತ್ತ ನೈಟ್ ರೈಡರ್ಸ್ | ಕೋಲ್ಕತ್ತ | ರಾತ್ರಿ 7.30 |
ಸೋಮವಾರ, 10 ಎಪ್ರಿಲ್ 2023 | ಲಖನೌ ಸೂಪರ್ ಜೈಂಟ್ಸ್ | ಬೆಂಗಳೂರು | ರಾತ್ರಿ 7.30 |
ಶನಿವಾರ, 15 ಎಪ್ರಿಲ್ 2023 | ಡೆಲ್ಲಿ ಕಾಪಿಟಲ್ಸ್ | ಬೆಂಗಳೂರು | ಸಂಜೆ 3.30 |
ಸೋಮವಾರ, 17 ಎಪ್ರಿಲ್ 2023 | ಚೆನ್ನೈ ಸೂಪರ್ ಕಿಂಗ್ಸ್ | ಬೆಂಗಳೂರು | ರಾತ್ರಿ 7.30 |
ಗುರುವಾರ, 20 ಎಪ್ರಿಲ್ 2023 | ಪಂಜಾಬ್ ಕಿಂಗ್ಸ್ | ಮೊಹಾಲಿ | ಸಂಜೆ 3.30 |
ಭಾನುವಾರ, 23 ಎಪ್ರಿಲ್ 2023 | ರಾಜಸ್ಥಾನ್ ರಾಯಲ್ಸ್ | ಬೆಂಗಳೂರು | ಸಂಜೆ 3.30 |
ಬುಧವಾರ , 26 ಎಪ್ರಿಲ್ 2023 | ಕೋಲ್ಕತ್ತ ನೈಟ್ ರೈಡರ್ಸ್ | ಬೆಂಗಳೂರು | ರಾತ್ರಿ 7.30 |
ಸೋಮವಾರ, 01 ಮೇ 2023 | ಲಖನೌ ಸೂಪರ್ ಜೈಂಟ್ಸ್ | ಲಖನೌ | ರಾತ್ರಿ 7.30 |
ಶನಿವಾರ, 06 ಮೇ 2023 | ಡೆಲ್ಲಿ ಕಾಪಿಟಲ್ಸ್ | ಡೆಲ್ಲಿ | ರಾತ್ರಿ 7.30 |
ಮಂಗಳವಾರ, 09 ಮೇ 2023 | ಮುಂಬೈ ಇಂಡಿಯನ್ಸ್ | ಮುಂಬೈ | ರಾತ್ರಿ 7.30 |
ಭಾನುವಾರ, 14 ಮೇ 2023 | ರಾಜಸ್ಥಾನ್ ರಾಯಲ್ಸ್ | ಜೈಪುರ | ಸಂಜೆ 3.30 |
ಗುರುವಾರ, 18 ಮೇ 2023 | ಸನ್‌ರೈಸರ್ಸ್ ಹೈದರಾಬಾದ್ | ಹೈದರಾಬಾದ್ | ರಾತ್ರಿ 7.30 |
ಭಾನುವಾರ, 21 ಮೇ 2023 | ಗುಜರಾತ್ ಟೈಟನ್ಸ್ | ಬೆಂಗಳೂರು | ರಾತ್ರಿ 7.30 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.