ಮುಂಬೈ: 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಶುಕ್ರವಾರ ಬಿಡುಗಡೆಗೊಳಿಸಿದೆ.
2023 ಮಾರ್ಚ್ 31ರಂದು ಗುಜರಾತ್‌ನ ಅಹಮದಾಬಾದ್ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದೊಂದಿಗೆ ಬಹುನಿರೀಕ್ಷಿತ ಟೂರ್ನಿಗೆ ಚಾಲನೆ ದೊರಕಲಿದೆ.
ಲೀಗ್ ಹಂತದಲ್ಲಿ 52 ದಿನಗಳ ಪರ್ಯಂತ 12 ತಾಣಗಳಲ್ಲಿ 70 ಪಂದ್ಯಗಳು ಆಯೋಜನೆಯಾಗಲಿವೆ.
ಹಿಂದಿನಂತೆ ಹೋಮ್ ಹಾಗೂ ಎವೇ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಪ್ರತಿ ತಂಡಗಳು ತಲಾ ಏಳು ಹೋಮ್ ಹಾಗೂ ಎವೇ ಪಂದ್ಯಗಳನ್ನು ಆಡಲಿವೆ.
ಭಾರತೀಯ ಕಾಲಮಾನ ಸಂಜೆಯ ಪಂದ್ಯಗಳು 3.30 ಮತ್ತು ರಾತ್ರಿಯ ಪಂದ್ಯಗಳು 7.30ಕ್ಕೆ ಸರಿಯಾಗಿ ಆರಂಭವಾಗಲಿದೆ. ಒಟ್ಟು 18 ಡಬಲ್ ಹೆಡರ್ (ದಿನಕ್ಕೆ 2 ಪಂದ್ಯ) ಪಂದ್ಯಗಳು ನಡೆಯಲಿದೆ.
ಪ್ಲೇ-ಆಫ್ ಹಾಗೂ ಫೈನಲ್ ಪಂದ್ಯಗಳ ವೇಳಾಪಟ್ಟಿ ಆನಂತರ ಬಿಡುಗಡೆಯಾಗಲಿದೆ. ಫೈನಲ್ ಪಂದ್ಯ ಮೇ 28ರಂದು ನಡೆಯಲಿದೆ.
ಐಪಿಎಲ್ 2023 ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ (ಪಿಡಿಎಫ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.