ADVERTISEMENT

IPL Auction: ಆಸ್ಟ್ರೇಲಿಯಾದ ಸ್ಟಾರ್ಕ್, ಕಮಿನ್ಸ್ ದಾಖಲೆ ಮೊತ್ತಕ್ಕೆ ಹರಾಜು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2023, 9:15 IST
Last Updated 19 ಡಿಸೆಂಬರ್ 2023, 9:15 IST
<div class="paragraphs"><p>ಆಸ್ಟ್ರೇಲಿಯಾ ತಂಡದ ಪ್ಯಾಟ್‌ ಕಮಿನ್ಸ್‌ ಹಾಗೂ ಮಿಚೇಲ್‌ ಸ್ಟಾರ್ಕ್‌</p></div>

ಆಸ್ಟ್ರೇಲಿಯಾ ತಂಡದ ಪ್ಯಾಟ್‌ ಕಮಿನ್ಸ್‌ ಹಾಗೂ ಮಿಚೇಲ್‌ ಸ್ಟಾರ್ಕ್‌

   

ಪಿಟಿಐ ಚಿತ್ರ

ದುಬೈ: ಇತ್ತೀಚೆಗೆ ಮುಕ್ತಾಯವಾದ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಹಾಗೂ ವೇಗಿ ಮಿಚೇಲ್‌ ಸ್ಟಾರ್ಕ್‌ ಅವರು ಐಪಿಎಲ್‌ ಹರಾಜಿನಲ್ಲಿ ದಾಖಲೆ ಮೊತ್ತ ಜೇಬಿಗಿಳಿಸಿಕೊಂಡಿದ್ದಾರೆ.

ADVERTISEMENT

ಇದೇ ಮೊದಲ ಬಾರಿಗೆ ಭಾರತದಿಂದ ಹೊರಗೆ (ದುಬೈನಲ್ಲಿ) ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ, ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಕಮಿನ್ಸ್‌ಗೆ ಬರೋಬ್ಬರಿ ₹ 20.5 ಕೋಟಿ ನೀಡಿದೆ. ಸ್ಟಾರ್ಕ್‌ ಅವರಿಗೆ ಕೋಲ್ಕತ್ತ ನೈಟ್‌ರೈಡರ್ಸ್‌ ದಾಖಲೆಯ ₹ 24.75 ಕೋಟಿ ನೀಡಿದೆ.

ಸ್ಟಾರ್ಕ್‌ ಖರೀದಿಗೆ ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಆರಂಭದಲ್ಲಿ ಪೈಪೋಟಿ ನಡೆಸಿದವು. ನಂತರ ಕೋಲ್ಕತ್ತ ಮತ್ತು ಗುಜರಾತ್‌ ಟೈಟನ್ಸ್‌ ಸಹ ಜಿದ್ದಿಗೆ ಇಳಿದವು. ಅಂತಿಮವಾಗಿ ಕೋಲ್ಕತ್ತ ಮೇಲುಗೈ ಸಾಧಿಸಿತು.

ಎಡಗೈ ವೇಗಿಯಾಗಿರುವ ಸ್ಟಾರ್ಕ್‌ ಅವರು 2014 ಹಾಗೂ 2015ರ ಆವೃತ್ತಿಗಳಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡಿದ್ದರು.

ಆಸ್ಟ್ರೇಲಿಯಾ ಏಕದಿನ ವಿಶ್ವಕಪ್‌ ಗೆಲ್ಲಲು, ಈ ಇಬ್ಬರು ಆಟಗಾರರೊಂದಿಗೆ ಪ್ರಮುಖ ಪಾತ್ರ ವಹಿಸಿದ್ದ ಮತ್ತೊಬ್ಬ ವೇಗಿ ಜೋಶ್‌ ಹ್ಯಾಜಲ್‌ವುಡ್‌ ಅವರನ್ನು ಯಾವುದೇ ತಂಡ ಖರೀದಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.