ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತವರಿನಂಗಳದಲ್ಲಿಯೂ ಪ್ರೇಕ್ಷಕರು ಅಪಹಾಸ್ಯ ಮಾಡಿದರು. ಆದರೆ ಆ ಟೀಕೆಗಳನ್ನು ತಮ್ಮ ಉತ್ತಮ ಬ್ಯಾಟಿಂಗ್ ಮೂಲಕ ಶ್ಲಾಘನೆಗಳಲ್ಲಿ ಬದಲಾಯಿಸಿಕೊಳ್ಳುವಲ್ಲಿ ಆಲ್‌ರೌಂಡರ್ ಯಶಸ್ವಿಯಾದರು.
ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದ ಆರಂಭಕ್ಕೂಮುನ್ನ ಹಾರ್ದಿಕ್ ವಾರ್ಮ್ ಅಪ್ ವ್ಯಾಯಾಮ ಮಾಡುವಾಗ ಒಂದು ಗ್ಯಾಲರಿಯಲ್ಲಿದ್ದ ಜನರು ‘ರೋಹಿತ್... ರೋಹಿತ್..’ ಎಂದು ಕೂಗುವ ಮೂಲಕ ಪಾಂಡ್ಯ ಅವರನ್ನು ಅಪಹಾಸ್ಯ ಮಾಡಿದರು. ಅವರು ಟಾಸ್‌ಗಾಗಿ ಪಿಚ್‌ನತ್ತ ನಡೆದಾಗಲೂ ಅದೇ ರೀತಿಯ ಕೂಗುಗಳಿಂದ ವ್ಯಂಗ್ಯವಾಡಿದರು. ಆದರೆ ಹಾರ್ದಿಕ್ ಮಾತ್ರ ನಗುನಗುತ್ತಲೇ ಓಡಾಡಿಕೊಂಡಿದ್ದರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವು ರಾಯಲ್ಸ್‌ನ ಟ್ರೆಂಟ್ ಬೌಲ್ಟ್ ದಾಳಿಯ ಮುಂದೆ 20 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಹಾರ್ದಿಕ್ 21 ಎಸೆತಗಳಲ್ಲಿ 34 ರನ್ ರನ್ ಗಳಿಸಿದರು. ಅರ್ಧ ಡಜನ್ ಬೌಂಡರಿ ಹೊಡೆದರು. ಅವರು ಹೊಡೆದ ಮೊದಲ ಬೌಂಡರಿಯಿಂದಲೇ ಜನರು ಚಪ್ಪಾಳೆ ತಟ್ಟಿ, ಮೆಚ್ಚುಗೆಯ ಘೋಷಣೆಗಳನ್ನೂ ಕೂಗಿದರು.
29 ವರ್ಷದ ಪಾಂಡ್ಯ ಅವರು ಅಹಮದಾಬಾದ್ ಮತ್ತು ಹೈದರಾಬಾದ್‌ನಲ್ಲಿ ಪಂದ್ಯಗಳು ನಡೆದ ಸಂದರ್ಭದಲ್ಲಿ ಅಪಹಾಸ್ಯಕ್ಕೆ ತುತ್ತಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.