ಬೆಂಗಳೂರು: ಪ್ರಸಕ್ತ ಸಾಲಿ ಐಪಿಎಲ್ ಟೂರ್ನಿಯ ಮೊದಲ ಫ್ಲೇ ಆಫ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಕೋಲ್ಕತ್ತ ನೈಟ್‌ರೈಡರ್ಸ್ ತಂಡ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಿವೆ.
ಟಾಸ್ ಗೆದ್ದ ಹೈದರಾಬಾದ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಕೈ ಸುಟ್ಟಿಕೊಂಡಿತು. ಕೋಲ್ಕತ್ತದ ಮೊನಚಾದ ದಾಳಿಗೆ ತತ್ತರಿಸಿದ ಹೈದರಾಬಾದ್ 19.3 ಓವರ್‌ಗಳಲ್ಲಿ ತನ್ನ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 159 ರನ್ ಮಾತ್ರ ಕಲೆ ಹಾಕಲು ಸಾಧ್ಯವಾಯಿತು. ಹೀಗಾಗಿ ಹೈದರಾಬಾದ್ ತಂಡ ನಿರೀಕ್ಷಿತ ಮೊತ್ತ ಗಳಿಸಲಿಲ್ಲ.
ಆರಂಭಿಕ ಕುಸಿತ ಕಂಡ ಹೈದರಾಬಾದ್ ತಂಡದ ಆಟಗಾರರು ರನ್ ಗಳಿಸಲು ತಿಣುಕಾಡಿದರು. ಒಂದು ಹಂತದಲ್ಲಿ ರನ್ ಏರುಗತಿ ಕಂಡರೂ ನಾಟಕೀಯ ಕುಸಿತ ಕಂಡು ಮೊದಲ ಇನ್ನಿಂಗ್ಸ್ ಮುಗಿಸಿತು.
ತೀವ್ರ ಭರವಸೆ ಮೂಡಿಸಿದ್ದ ಟ್ರಾವಿಸ್ ಹೆಡ್ ಅವರು ಶೂನ್ಯಕ್ಕೆ ಔಟಾಗುವ ಮೂಲಕ ನಿರ್ಗಮಿಸಿದರು. ಹೈದರಾಬಾದ್ ಪರ ರಾಹುಲ್ ತ್ರಿಪಾಠಿ ಅವರು 35 ಬಾಲ್‌ಗಳಲ್ಲಿ 55 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಪ್ಯಾಟ್ ಕಮೀನ್ಸ್ 30, ಕ್ಲಾಸೆನ್ 32 ರನ್ ಗಳಿಸಿದ್ದೇ ಹೆಚ್ಚು. ಉಳಿದವರು ಮಿಂಚಲಿಲ್ಲ.
ಕೋಲ್ಕತ್ತದ ಪರ ಮಿಚೆಲ್ ಸ್ಟಾರ್ಕ್ ಅವರು ಮೂರು ವಿಕೆಟ್ ಕಬಳಿಸಿ ಗಮನ ಸೆಳೆದರು. ರಸೆಲ್ ಎರಡು ವಿಕೆಟ್ ಕಿತ್ತರು.
ಸುಲಭ ಜಯದ ಮೇಲೆ ಕಣ್ಣಿಟ್ಟಿರುವ ಕೆಕೆಆರ್ ಗೆದ್ದರೆ ಫೈನಲ್‌ಗೆ ಲಗ್ಗೆ ಇಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.