ADVERTISEMENT

IPL 2024 | RCB vs CSK: ಆರ್‌ಸಿಬಿ ಪ್ಲೇ-ಆಫ್ ಲೆಕ್ಕಾಚಾರ ಹೀಗಿದೆ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಮೇ 2024, 9:58 IST
Last Updated 15 ಮೇ 2024, 9:58 IST
<div class="paragraphs"><p>ವಿರಾಟ್ ಕೊಹ್ಲಿ</p></div>

ವಿರಾಟ್ ಕೊಹ್ಲಿ

   

(ಪಿಟಿಐ ಚಿತ್ರ)

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯು ರೋಚಕ ಹಂತವನ್ನು ತಲುಪಿದ್ದು, ಯಾವೆಲ್ಲ ತಂಡಗಳು ಪ್ಲೇ-ಆಫ್‌ಗೆ ಪ್ರವೇಶಿಸಲಿವೆ ಎಂಬುದು ಬಹಳಷ್ಟು ಕುತೂಹಲ ಮೂಡಿಸಿವೆ.

ADVERTISEMENT

ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಈಗಾಗಲೇ ಪ್ಲೇ-ಆಫ್‌ ಸ್ಥಾನಗಳನ್ನು ಖಚಿತಪಡಿಸಿವೆ. ಉಳಿದೆರಡು ಸ್ಥಾನಕ್ಕಾಗಿ ಐದು ತಂಡಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿವೆ. ಈ ಪೈಕಿ ಚೊಚ್ಚಲ ಕಿರೀಟ ಎದುರು ನೋಡುತ್ತಿರುವ ಆರ್‌ಸಿಬಿ ಪ್ಲೇ-ಆಫ್‌ಗೆ ಪ್ರವೇಶಿಸಬಹುದೇ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಆರ್‌ಸಿಬಿ ಪ್ಲೇ-ಆಫ್ ಲೆಕ್ಕಾಚಾರ ಹೀಗಿದೆ....

ಈವರೆಗೆ 13 ಪಂದ್ಯಗಳನ್ನು ಆಡಿರುವ ಆರ್‌ಸಿಬಿ ಆರು ಗೆಲುವು ಹಾಗೂ ಏಳು ಸೋಲಿನೊಂದಿಗೆ ಒಟ್ಟು 12 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಅಲ್ಲದೆ +0.387 ನೇಟ್ ರನ್‌ರೇಟ್ ಕಾಯ್ದುಕೊಂಡಿದೆ.

ಆರ್‌ಸಿಬಿ ತನ್ನ ಕೊನೆಯ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರದಂದು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಇದು ಫಫ್ ಡುಪ್ಲೆಸಿ ಬಳಗದ ಪಾಲಿಗೆ ನಿರ್ಣಾಯಕ ಪಂದ್ಯವಾಗಿದೆ.

ಸನ್‌ರೈಸರ್ಸ್ ಹೈದರಾಬಾದ್ ಬಳಿ 12 ಅಂಕಗಳಿದ್ದು, ಇನ್ನೆರಡು ಪಂದ್ಯಗಳು ಬಾಕಿ ಉಳಿದಿದೆ. ಹಾಗಾಗಿ ಕನಿಷ್ಠ ಒಂದರಲ್ಲಿ ಗೆದ್ದರೆ ಪ್ಲೇ-ಆಫ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.

ಹಾಗಾದಲ್ಲಿ ಸಿಎಸ್‌ಕೆ ವಿರುದ್ಧ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದರೆ ಬೆಂಗಳೂರು ಕನಿಷ್ಠ 18 ರನ್ ಅಂತರದ ಅಥವಾ ಚೇಸಿಂಗ್ ಮಾಡಿದ್ದಲ್ಲಿ 18.1 ಓವರ್‌‌ನಲ್ಲಿ ಗೆಲುವು ದಾಖಲಿಸಬೇಕಿದೆ. ಒಂದು ವೇಳೆ 200 ರನ್ ಗಳಿಸಿದ್ದಲ್ಲಿ ಎದುರಾಳಿ ತಂಡವನ್ನು 182ಕ್ಕೆ ನಿಯಂತ್ರಿಸಬೇಕು. ಆ ಮೂಲಕ ಸಿಎಸ್‌ಕೆಗಿಂತಲೂ ಉತ್ತಮ ರನ್‌ರೇಟ್ ಕಾಯ್ದುಕೊಳ್ಳುವ ಮೂಲಕ ನಾಲ್ಕನೇ ತಂಡವಾಗಿ ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಲಿದೆ.

ಒಂದು ವೇಳೆ ಸಿಎಸ್‌ಕೆ ವಿರುದ್ಧ ಇದಕ್ಕೂ ಕಡಿಮೆ ಅಂತರದಲ್ಲಿ ಗೆದ್ದರೆ ಎಸ್‌ಆರ್‌ಎಚ್ ಉಳಿದೆರಡು ಪಂದ್ಯಗಳಲ್ಲಿ ಸೋಲಬೇಕಾಗುತ್ತದೆ. ಹಾಗೊಂದು ವೇಳೆ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಸೋತರೆ ಅಥವಾ ಪಂದ್ಯ ರದ್ದುಗೊಂಡರೆ ಆರ್‌ಸಿಬಿ ಟ್ರೋಫಿ ಕನಸು ಅಸ್ತಮಿಸಲಿದೆ.

ಇನ್ನೂ 14 ಪಂದ್ಯಗಳಲ್ಲಿ ಅಷ್ಟೇ ಅಂಕಗಳನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ (-0.377 ರನ್ ರೇಟ್) ಹಾಗೂ 13 ಪಂದ್ಯಗಳಲ್ಲಿ 12 ಅಂಕ ಹೊಂದಿರುವ ಲಖನೌ ಸೂಪರ್ ಜೈಂಟ್ಸ್ ಪ್ಲೇ-ಆಫ್‌ಗೆ ಪ್ರವೇಶಿಸುವ ಸಾಧ್ಯತೆ ಕ್ಷೀಣವಾಗಿದೆ. ಲಖನೌ ಪಾಲಿಗೆ ಇನ್ನೊಂದು ಪಂದ್ಯ ಬಾಕಿ ಉಳಿದರೂ ಕಳಪೆ ರನ್‌ರೇಟ್ (-0.787) ಹೊಂದಿದೆ.

ಐಪಿಎಲ್ 2024 ಅಂಕಪಟ್ಟಿ ಇಂತಿದೆ (64 ಪಂದ್ಯಗಳ ಅಂತ್ಯಕ್ಕೆ):

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.