ಗುವಾಹಟಿ: ಇಲ್ಲಿ ನಡೆಯಬೇಕಿದ್ದ ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ನಡುವಿನ ಐಪಿಎಲ್ ಪಂದ್ಯ ಮಳೆಯಿಂದಾಗಿ ವಿಳಂಬವಾಗಿದೆ.
ಕೋಲ್ಕತ್ತ ನೈಟ್ ರೈಡರ್ಸ್ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿ ಹಾಗೂ ಎರಡನೇ ಸ್ಥಾನದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಇದೆ. ಸತತ ನಾಲ್ಕು ಪಂದ್ಯಗಳ ಸೋಲಿನ ಸರಪಳಿ ತುಂಡರಿಸಲು ರಾಜಸ್ಥಾನ ಮುಂದಾಗಿದೆ. ಪ್ಲೇ ಆಫ್‌ಗೆ ಪ‍್ರವೇಶಿಸಿರುವ ಇತ್ತಂಡಗಳಿಗೂ ಇದು ಔಪಚಾರಿಕ ಪಂದ್ಯವಷ್ಟೇ.
ರಾಯಲ್ಸ್ ಪ್ರಸ್ತುತ ಎರಡನೇ ಸ್ಥಾನದಲ್ಲಿದ್ದು, 16 ಪಾಯಿಂಟ್ಸ್ ಹೊಂದಿದೆ. ಆದರೆ ಕೊನೆಯ ಕೆಲವು ಪಂದ್ಯಗಳಲ್ಲಿ ಸೋಲನುಭವಿಸುತ್ತ ಬಂದಿದೆ. ಬ್ಯಾಟಿಂಗ್ ಇದ್ದಕ್ಕಿದ್ದ ಹಾಗೆ ಕಳೆಗುಂದಿದೆ. ಎರಡು ಪಂದ್ಯಗಳಲ್ಲಿ ತಂಡಕ್ಕೆ 150ರ ಗಡಿ ದಾಟಲೂ ಸಾಧ್ಯವಾಗಿಲ್ಲ. ಉತ್ತಮ ಲಯದಲ್ಲಿದ್ದ ಜೋಸ್ ಬಟ್ಲರ್ ತವರಿಗೆ ಮರಳಿದ್ದು, ಕೊರತೆ ಎನಿಸಿದೆ.
ಗುಜರಾತ್ ಟೈಟನ್ಸ್ ವಿರುದ್ಧ ಮಳೆಯಿಂದ ಪಂದ್ಯ ರದ್ದಾದ ಕಾರಣ ಕೆಕೆಆರ್ (19 ಪಾಯಿಂಟ್ಸ್) ಅಗ್ರಸ್ಥಾನ ಖಚಿತಪಡಿಸಿಕೊಂಡಾಗಿದೆ. ಆ ತಂಡ ಹೆಚ್ಚಿನ ಆತ್ಮವಿಶ್ವಾಸದಲ್ಲಿದೆ. ಮೇ 11ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ನಂತರ ಕೋಲ್ಕತ್ತ ಒಂದೂ ಪಂದ್ಯ ಆಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.