ನವದೆಹಲಿ: ಐಪಿಎಲ್‌ನಲ್ಲಿ ಆಡುವ ಎಲ್ಲ ತಂಡಗಳು ತಮ್ಮಲ್ಲೇ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿವೆ. ಇದರೊಂದಿಗೆ, 2025ರ ಆವೃತ್ತಿಗೂ ಮುನ್ನ ನಡೆಯುವ ಹರಾಜಿಗೆ ಲಭ್ಯವಿರುವ ಆಟಗಾರರ ಸಂಪೂರ್ಣ ಚಿತ್ರಣ ಲಭ್ಯವಾಗಿದೆ.
ಹತ್ತು ತಂಡಗಳು ಒಟ್ಟು 46 ಆಟಗಾರರನ್ನು ಉಳಿಸಿಕೊಂಡಿವೆ.
ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಮ್ಮ ಪಾಲಿನ ಆರು ಆಟಗಾರರನ್ನು ಉಳಿಸಿಕೊಂಡಿವೆ. ಪಂಜಾಬ್ ಕಿಂಗ್ಸ್ ಕೇವಲ ಇಬ್ಬರನ್ನಷ್ಟೇ ಉಳಿಸಿಕೊಂಡಿದೆ. ಅವರೂ ರಾಷ್ಟ್ರೀಯ ತಂಡಕ್ಕೆ ಆಡದ ಆಟಗಾರರು ಎಂಬುದು ವಿಶೇಷ. ಇದರೊಂದಿಗೆ, ಭಾರಿ ಮೊತ್ತದೊಂದಿಗೆ ಹರಾಜಿನಂಗಳಕ್ಕಿಳಿಯುವ ಲೆಕ್ಕಾಚಾರ ಹಾಕಿಕೊಂಡಿದೆ.
ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಹಾಗೂ ಯಶ್ ದಯಾಳ್ ಅವರನ್ನು ಹರಾಜಿಗೆ ಬಿಡದಿರಲು ನಿರ್ಧರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಿ ₹ 83 ಕೋಟಿ ಇದೆ.
ಹರಾಜಿಗೂ ಮುನ್ನ ಅತ್ಯಂತ ಕಡಿಮೆ ಮೊತ್ತ ಹೊಂದಿರುವುದು ರಾಜಸ್ಥಾನ ರಾಯಲ್ಸ್. ಐವರು ಅನ್‌ಕ್ಯಾಪ್ಡ್ ಪ್ಲೇಯರ್‌ಗಳು ಸೇರಿದಂತೆ ಒಟ್ಟು ಆರು ಮಂದಿಯನ್ನು ಉಳಿಸಿಕೊಂಡಿರುವ ಈ ಫ್ರಾಂಚೈಸ್ ಬಳಿ ₹ 41 ಕೋಟಿ ಇದೆ.
ಯಾರ ಬಳಿ ಎಷ್ಟು ಮೊತ್ತ?
ಪಂಜಾಬ್ ಕಿಂಗ್ಸ್ – ₹ 110.5 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು – ₹ 83 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್ – ₹ 73 ಕೋಟಿ
ಗುಜರಾತ್ ಟೈಟನ್ಸ್ – ₹ 69 ಕೋಟಿ
ಲಖನೌ ಸೂಪರ್ ಜೈಂಟ್ಸ್ – ₹ 69 ಕೋಟಿ
ಚೆನ್ನೈ ಸೂಪರ್ ಕಿಂಗ್ಸ್ – ₹ 55 ಕೋಟಿ
ಕೋಲ್ಕತ್ತ ನೈಟ್ ರೈಡರ್ಸ್ – ₹ 51 ಕೋಟಿ
ಸನ್‌ರೈಸರ್ಸ್ ಹೈದರಾಬಾದ್ – ₹ 45 ಕೋಟಿ
ಮುಂಬೈ ಇಂಡಿಯನ್ಸ್ – ₹ 45 ಕೋಟಿ
ರಾಜಸ್ಥಾನ ರಾಯಲ್ಸ್ – ₹ 41 ಕೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.