ಜೆದ್ದಾ: ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ವೇಳೆ ಅಳೆದು ತೂಗಿ ಆಟಗಾರರನ್ನು ಖರೀದಿಸಿದ ಫ್ರಾಂಚೈಸ್‌ಗಳು, ಕೆಲವು ಖ್ಯಾತನಾಮರನ್ನು ತಂಡಕ್ಕೆ ಸೇರಿಸಿಕೊಳ್ಳಲು ನಿರಾಸಕ್ತಿ ತೋರಿವೆ.
ಸೌದಿ ಅರೇಬಿಯಾದ ಜೆದ್ದಾದಲ್ಲಿ ಭಾನುವಾರ (ನಿನ್ನೆ) ಮತ್ತು ಸೋಮವಾರ (ಇಂದು) ಹರಾಜು ನಡೆಯುತ್ತಿದೆ.
ವಿಕೆಟ್‌ಕೀಪರ್–ಬ್ಯಾಟರ್ ರಿಷಭ್ ಪಂತ್ ಅವರು ಮೊದಲ ದಿನವೇ, ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಎನಿಸಿದ್ದಾರೆ. ಅವರನ್ನು ಲಖನೌ ಸೂಪರ್ ಜೈಂಟ್ಸ್ ತಂಡವು, ಬರೋಬ್ಬರಿ ₹ 27 ಕೋಟಿಗೆ ಖರೀದಿಸಿದೆ. ಇದು, ಕ್ರಿಕೆಟ್ ಪ್ರಿಯರ ಹುಬ್ಬೇರಿಸಿದೆ.
ಪಂತ್ ಅವರನ್ನು ಮಾತ್ರವಲ್ಲ. ಇನ್ನೂ ಹಲವು ಆಟಗಾರರಿಗಾಗಿ ವಿವಿಧ ಫ್ರಾಂಚೈಸ್‌ಗಳು ಕೋಟಿ ಕೋಟಿ ಹಣ ಸುರಿದಿವೆ. ಆದರೆ, ಅದಕ್ಕೆ ತದ್ವಿರುದ್ಧ ಎಂಬಂತೆ ಕೆಲವು ಆಟಗಾರರನ್ನು ಖರೀದಿಸಲು ಯಾವುದೇ ತಂಡ ಆಸಕ್ತಿ ತೋರಿಲ್ಲ. ಹೀಗೆ ಮಾರಾಟವಾಗದ ಆಟಗಾರರ ಪಟ್ಟಿಯು ಅಭಿಮಾನಿಗಳನ್ನು ಇನ್ನಷ್ಟು ಅಚ್ಚರಿಗೆ ದೂಡಿದೆ.
ಮಾರಾಟವಾಗದ ಪ್ರಮುಖರ ಪಟ್ಟಿ ಇಲ್ಲಿದೆ.
ಭಾರತದ ಪ್ರಮುಖರು
ಉಮೇಶ್ ಯಾದವ್: ಮೂಲಬೆಲೆ ₹ 2 ಕೋಟಿ
ದೇವದತ್ತ ಪಡಿಕ್ಕಲ್: ಮೂಲಬೆಲೆ ₹ 2 ಕೋಟಿ
ಅಜಿಂಕ್ಯ ರಹಾನೆ: ಮೂಲಬೆಲೆ ₹ 1.5 ಕೋಟಿ
ಮಯಂಕ್ ಅಗರವಾಲ್: ಮೂಲಬೆಲೆ ₹ 1 ಕೋಟಿ
ಉಮ್ರಾನ್ ಮಲಿಕ್: ಮೂಲಬೆಲೆ ₹ 75 ಲಕ್ಷ
ಪೃಥ್ವಿ ಶಾ: ಮೂಲಬೆಲೆ ₹ 75 ಲಕ್ಷ
ಶಾರ್ದೂಲ್ ಠಾಕೂರ್: ಮೂಲಬೆಲೆ ₹ 2 ಕೋಟಿ
'ಸೇಲ್'ಆಗದ ವಿದೇಶಿಯರು
ಆಸ್ಟ್ರೇಲಿಯಾದ ಡೇವಿಡ್ ವಾರ್ನರ್: ಮೂಲಬೆಲೆ ₹ 2 ಕೋಟಿ
ಅಫ್ಗಾನಿಸ್ತಾನದ ಮುಜೀಬ್ ಉರ್ ರಹಮಾನ್: ಮೂಲಬೆಲೆ ₹ 2 ಕೋಟಿ
ಇಂಗ್ಲೆಂಡ್‌ನ ಆದಿಲ್ ರಶೀದ್: ಮೂಲಬೆಲೆ ₹ 2 ಕೋಟಿ
ಅಫ್ಗಾನಿಸ್ತಾನದ ನವೀನ್ ಉಲ್ ಹಕ್: ಮೂಲಬೆಲೆ ₹ 2 ಕೋಟಿ
ಬಾಂಗ್ಲಾದೇಶ ಮುಸ್ತಾಫಿಜುರ್ ರೆಹಮಾನ್: ಮೂಲಬೆಲೆ ₹ 2 ಕೋಟಿ
ಇಂಗ್ಲೆಂಡ್‌ನ ಜಾನಿ ಬೆಸ್ಟೊ: ಮೂಲಬೆಲೆ ₹ 2 ಕೋಟಿ
ಇಂಗ್ಲೆಂಡ್‌ನ ಮೋಯಿನ್ ಅಲಿ: ಮೂಲಬೆಲೆ ₹ 2 ಕೋಟಿ
ನ್ಯೂಜಿಲೆಂಡ್ ಗ್ಲೆನ್ ಫಿಲಿಪ್ಸ್: ಮೂಲಬೆಲೆ ₹ 2 ಕೋಟಿ
ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್: ಮೂಲಬೆಲೆ ₹ 2 ಕೋಟಿ
ಐಪಿಎಲ್ ಹರಾಜು ಕುರಿತ ಪೂರ್ಣ ಮಾಹಿತಿ ಇಲ್ಲಿದೆ. https://www.iplt20.com/auction
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.