ಜೆದ್ದಾ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ 2ನೇ ದಿನದ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದ ಜೆದ್ದಾದಲ್ಲಿ ಸೋಮವಾರರ ನಡೆಯುತ್ತಿದೆ.
ಹರಾಜು ಪ್ರಕ್ರಿಯೆಯ ಆರಂಭದಲ್ಲೇ ಬಿಡ್‌ಗೆ ಬಂದ, ನ್ಯೂಜಿಲೆಂಡ್‌ನ ಸ್ಟಾರ್ ಆಟಗಾರ ಕೇನ್ ವಿಲಿಯಮ್ಸನ್, ಭಾರತದ ಯುವ ಆಟಗಾರ ಪೃಥ್ವಿ ಶಾ, ಕನ್ನಡಿಗ ಮಯಂಕ್ ಅಗರವಾಲ್, ಅನುಭವಿಗಳಾದ ಅಜಿಂಕ್ಯ ರಹಾನೆ, ಶಾರ್ದೂಲ್ ಠಾಕೂರ್ ಅವರನ್ನು ಖರೀದಿಸಲು ಯಾವುದೇ ತಂಡ ಉತ್ಸಾಹ ತೋರಿಲ್ಲ.
ಹೀಗಾಗಿ, ಇವರೆಲ್ಲ ಬಿಕರಿಯಾಗದೆ ಉಳಿದಿದ್ದಾರೆ.
ಪೃಥ್ವಿ ಶಾ ₹ 75 ಲಕ್ಷ, ಮಯಂಕ್ ₹ 1 ಕೋಟಿ, ರಹಾನೆ ₹ 1.5 ಕೋಟಿ, ಠಾಕೂರ್ ಮತ್ತು ವಿಲಿಯಮ್ಸನ್ ತಲಾ ₹ 2 ಕೋಟಿ ಮೂಲ ಬೆಲೆ ಹೊಂದಿದ್ದಾರೆ.
ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ನಾಯಕತ್ವ ವಹಿಸಿದ್ದ ಫಾಫ್ ಡು ಪ್ಲೆಸಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸ್ ₹ 2 ಕೋಟಿ ನೀಡಿ ಖರೀದಿಸಿದೆ.
ಮೊದಲ ದಿನದ ಹರಾಜಿನಲ್ಲಿ ವಿಕೆಟ್ ಕೀಪರ್–ಬ್ಯಾಟರ್ ರಿಷಭ್ ಪಂತ್ ಮತ್ತು ಕಳೆದ ಆವೃತ್ತಿಯಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್‌ಗೆ ಪ್ರಶಸ್ತಿ ಗೆದ್ದು ಕೊಟ್ಟಿದ್ದ ನಾಯಕ ಶ್ರೇಯಸ್ ಅಯ್ಯರ್ ಭಾರಿ ಮೊತ್ತ ಜೇಬಿಗಿಳಿಸಿದ್ದರು.
ಎಚ್ಚರಿಕೆಯ ನಡೆ ಪ್ರದರ್ಶಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪರ್ಸ್‌ನಲ್ಲಿ ₹ 83 ಕೋಟಿ ಇಟ್ಟುಕೊಂಡು ಇಂದು ಬಿಡ್‌ಗೆ ಇಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.