ADVERTISEMENT

IPL 2025 | ಆರ್‌ಸಿಬಿಗೆ ರೋಹಿತ್ ಶರ್ಮಾ; ಎಬಿ ಡಿವಿಲಿಯರ್ಸ್ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2024, 7:45 IST
Last Updated 6 ಅಕ್ಟೋಬರ್ 2024, 7:45 IST
<div class="paragraphs"><p>ರೋಹಿತ್ ಶರ್ಮಾ</p></div>

ರೋಹಿತ್ ಶರ್ಮಾ

   

(ಪಿಟಿಐ ಚಿತ್ರ)

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮೆಗಾ ಹರಾಜು ಕುರಿತು ಕುತೂಹಲ ಗರಿಗೆದರಿದೆ. ಈಗಾಗಲೇ ಹರಾಜು ನಿಮಯಗಳನ್ನು ಬಿಸಿಸಿಐ ಘೋಷಿಸಿದೆ.

ADVERTISEMENT

ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ಬಳಿಯೇ ಉಳಿಸಿಕೊಳ್ಳಲಿದೆಯೇ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಈ ನಡುವೆ ಹರಾಜಿಗೆ ಬಿಟ್ಟುಕೊಟ್ಟರೆ ರೋಹಿತ್ ಶರ್ಮಾ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಖರೀದಿಸಬೇಕು ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರ್‌ಸಿಬಿಯ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, 'ಹೀಗಾಗುವ ಸಾಧ್ಯತೆ ತೀರಾ ವಿರಳ' ಎಂದು ಹೇಳಿದ್ದಾರೆ.

ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಡಿವಿಲಿಯರ್ಸ್, 'ಮುಂಬೈ ಇಂಡಿಯನ್ಸ್‌ನಿಂದ ರೋಹಿತ್ ಆರ್‌ಸಿಬಿಗೆ ಬಂದರೆ ಅದು ದೊಡ್ಡ ಸುದ್ದಿಯಾಗಲಿದೆ. ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ಬಿಟ್ಟು ಮುಂಬೈಗೆ ಮರಳಿ ಬಂದಿರುವುದಕ್ಕಿಂತ ಹೆಚ್ಚಿನ ಮಹತ್ವವನ್ನು ಗಿಟ್ಟಿಸಲಿದೆ. ಹಾರ್ದಿಕ್ ಮರಳಿರುವುದು ಹೆಚ್ಚಿನ ಅಚ್ಚರಿ ಮೂಡಿಸಿರಲಿಲ್ಲ. ಆದರೆ ರೋಹಿತ್ ಮುಂಬೈಯಿಂದ ಆರ್‌ಸಿಬಿಗೆ ಬಂದರೆ ಓ ದೇವರೇ, ಆಲೋಚಿಸಿ ನೋಡಿ!' ಎಂದು ಹೇಳಿದ್ದಾರೆ.

ಆದರೂ ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ಕೈಬಿಡುವ ಸಾಧ್ಯತೆಯಿಲ್ಲ ಎಂದು ಅವರು ಹೇಳಿದ್ದಾರೆ.

ಅದೇ ಹೊತ್ತಿಗೆ ಫಫ್ ಡುಪ್ಲೆಸಿ ಆರ್‌ಸಿಬಿ ನಾಯಕರಾಗಿ ಮುಂದುವರಿಬೇಕು ಎಂದು ಎಬಿಡಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.