ADVERTISEMENT

IPL Auction 2022: ಕುಸಿದು ಬಿದ್ದ ಹರಾಜುದಾರ, ಬಿಡ್ಡಿಂಗ್ ತಾತ್ಕಾಲಿತ ಸ್ಥಗಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಫೆಬ್ರುವರಿ 2022, 9:35 IST
Last Updated 12 ಫೆಬ್ರುವರಿ 2022, 9:35 IST
ಹರಾಜುದಾರ ಹಗ್ ಎಡ್ಮೀಡ್ಸ್ ವೇದಿಕೆಯಲ್ಲಿ ಕುಸಿದುಬಿದ್ದರು – ಚಿತ್ರ ಕೃಪೆ: ‘ಟಾಟಾ ಐಪಿಎಲ್ 2022’ ಟ್ವಿಟರ್ ಖಾತೆ
ಹರಾಜುದಾರ ಹಗ್ ಎಡ್ಮೀಡ್ಸ್ ವೇದಿಕೆಯಲ್ಲಿ ಕುಸಿದುಬಿದ್ದರು – ಚಿತ್ರ ಕೃಪೆ: ‘ಟಾಟಾ ಐಪಿಎಲ್ 2022’ ಟ್ವಿಟರ್ ಖಾತೆ   

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯ ತಂಡಗಳಿಗಾಗಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಬಿಡ್ಡಿಂಗ್ ವೇಳೆ ಹರಾಜುದಾರ ಹಗ್ ಎಡ್ಮೀಡ್ಸ್ ವೇದಿಕೆಯಲ್ಲೇ ಕುಸಿದುಬಿದ್ದರು. ಪರಿಣಾಮವಾಗಿ ಹರಾಜು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಹಗ್ ಎಡ್ಮೀಡ್ಸ್ ಚೇತರಿಸಿಕೊಂಡಿದ್ದಾರೆ ಎಂದು ಫ್ರಾಂಚೈಸ್ ಪ್ರತಿನಿಧಿಯೊಬ್ಬರು ಖಚಿತಪಡಿಸಿರುವುದಾಗಿ ‘ಟಾಟಾ ಐಪಿಎಲ್ 2022’ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.

ಹಗ್ ಎಡ್ಮೀಡ್ಸ್ ಆರಾಮವಾಗಿದ್ದಾರೆ. ಸದ್ಯ ಊಟದ ವಿರಾಮ ಘೋಷಿಸಲಾಗಿದೆ ಎಂದು ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಟ್ವೀಟ್ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.