ಕೊಚ್ಚಿ:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಫ್ರಾಂಚೈಸ್‌ಗಳು 80 ಆಟಗಾರರನ್ನುಕೋಟಿ ಕೋಟಿ ಹಣ ಸುರಿದು ಖರೀದಿಸಿವೆ.
ಕೊಚ್ಚಿಯಲ್ಲಿ ನಡೆದ ಹರಾಜಿಗೆಒಟ್ಟು 405 ಆಟಗಾರರು ಲಭ್ಯರಿದ್ದರು. ಈ ಪೈಕಿ273 ಭಾರತೀಯರು ಮತ್ತು 132 ವಿದೇಶಿ ಆಟಗಾರರು ಇದ್ದರು.
ಹರಾಜಿಗೆ ಲಭ್ಯವಿದ್ದಆಟಗಾರರಲ್ಲಿ ಅಫ್ಗಾನಿಸ್ತಾನದ ಸ್ಪಿನ್ನರ್, 15 ವರ್ಷದ ಅಲ್ಹಾ ಮೊಹಮ್ಮದ್ ಘಝನ್ಫರ್ ಅತ್ಯಂತಕಿರಿಯ ಎನಿಸಿಕೊಂಡಿದ್ದರು.2007ರ ಜುಲೈ 15ರಂದು ಜನಿಸಿರುವ ಘಝನ್ಫರ್ ಈ ವರೆಗೆ ಮೂರು ಟಿ20 ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಅವರನ್ನು ಯಾವುದೇ ತಂಡ ಖರೀದಿಸಿಲ್ಲ.
ಹರಾಜಿನಲ್ಲಿ ಪಾಲ್ಗೊಂಡಿದ್ದ ಅತ್ಯಂತ ಹಿರಿಯ ಆಟಗಾರಅಮಿತ್ ಮಿಶ್ರಾ (40) ಅವರನ್ನುಲಖನೌ ಸೂಪರ್ ಜೈಂಟ್ಸ್₹ 50 ಲಕ್ಷ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಇಂದು ಮೊದಲ ಆಟಗಾರನಾಗಿ ಬಿಕರಿಯಾದರು. ಅವರಿಗೆ ನಿಗದಿಯಾಗಿದ್ದ ಮೂಲ ಬೆಲೆ ₹ 2 ಕೋಟಿ ನೀಡಿಗುಜರಾತ್ ಟೈಟನ್ಸ್ ಖರೀದಿಸಿತು.
ಇಂಗ್ಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್‌ಸ್ಯಾಮ್ ಕರನ್ ಅವರನ್ನುಪಂಜಾಬ್ ಕಿಂಗ್ಸ್ ತಂಡ ಬರೋಬ್ಬರಿ ₹ 18.5 ಕೋಟಿ ನೀಡಿ ಖರೀದಿಸಿದೆ. ಇದರೊಂದಿಗೆ ಅವರು ಐಪಿಎಲ್ ಹರಾಜು ಇತಿಹಾಸದಲ್ಲಿಯೇ ಅತಿಹೆಚ್ಚು ಮೊತ್ತ ಗಳಿಸಿಕೊಂಡ ಆಟಗಾರ ಎನಿಸಿಕೊಂಡಿದ್ದಾರೆ.2021ರಲ್ಲಿ ದಕ್ಷಿಣ ಆಫ್ರಿಕಾದ ಕ್ರಿಸ್ ಮಾರಿಸ್ ಅವರನ್ನು ರಾಜಸ್ತಾನ ರಾಯಲ್ಸ್ ತಂಡ ₹ 16.25 ಕೋಟಿ ನೀಡಿ ಖರೀದಿಸಿದ್ದು, ಈ ವರೆಗೆ ದಾಖಲೆಯಾಗಿತ್ತು.
ಮಾರಾಟವಾದ ಆಟಗಾರರು
1. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್): ₹ 2 ಕೋಟಿ – ಗುಜರಾತ್ ಟೈಟನ್ಸ್
2. ಹ್ಯಾರಿ ಬ್ರೂಕ್ (ಇಂಗ್ಲೆಂಡ್): ₹ 13.5 ಕೋಟಿ – ಸನ್‌ರೈಸರ್ಸ್ ಹೈದರಾಬಾದ್
3. ಮಯಂಕ್ ಅಗರವಾಲ್ (ಭಾರತ):₹ 8.25 ಕೋಟಿ – ಸನ್‌ರೈಸರ್ಸ್ ಹೈದರಾಬಾದ್
4. ಅಜಿಂಕ್ಯ ರಹಾನೆ(ಭಾರತ):₹ 50 ಲಕ್ಷ – ಚೆನ್ನೈ ಸೂಪರ್ ಕಿಂಗ್ಸ್
5. ಸ್ಯಾಮ್ ಕರನ್ (ಇಂಗ್ಲೆಂಡ್): ₹ 18.50 ಕೋಟಿ – ಪಂಜಾಬ್ ಕಿಂಗ್ಸ್
6. ಒಡಿಯಾನ್ ಸ್ಮಿತ್ (ವೆಸ್ಟ್ ಇಂಡೀಸ್): ₹50 ಲಕ್ಷ– ಗುಜರಾತ್ ಟೈಟನ್ಸ್
7. ಸಿಕಂದರ್ ರಾಜಾ (ಜಿಂಬಾಬ್ವೆ):₹50 ಲಕ್ಷ– ಪಂಜಾಬ್ ಕಿಂಗ್ಸ್
8. ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್): ₹5.75 ಕೋಟಿ – ರಾಜಸ್ಥಾನ ರಾಯಲ್ಸ್
9. ಕೆಮರೂನ್ ಗ್ರೀನ್ (ಆಸ್ಟ್ರೇಲಿಯಾ): ₹17.50 ಕೋಟಿ – ಮುಂಬೈ ಇಂಡಿಯನ್ಸ್
10. ಬೆನ್ ಸ್ಟೋಕ್ಸ್ (ಇಂಗ್ಲೆಂಡ್): ₹ 16.25 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
11. ರೀಸ್ ಟಾಪ್ಲೇ(ಇಂಗ್ಲೆಂಡ್): ₹ 1.9 ಕೋಟಿ – ರಾಯಲ್ ಚಾಲೆಂಜರ್ಸ್ ಬೆಂಗಳೂರು
12. ಜಯದೇವ್ ಉನದ್ಕತ್ (ಭಾರತ):₹50 ಲಕ್ಷ– ಲಖನೌ ಸೂಪರ್ ಜೈಂಟ್ಸ್
13. ಜೇ ರಿಚರ್ಡ್‌ಸನ್(ಆಸ್ಟ್ರೇಲಿಯಾ): ₹ 1.5 ಕೋಟಿ – ಮುಂಬೈ ಇಂಡಿಯನ್ಸ್
14. ಇಶಾಂತ್ ಶರ್ಮಾ (ಭಾರತ):₹50 ಲಕ್ಷ– ಡೆಲ್ಲಿ ಕ್ಯಾಪಿಟಲ್ಸ್
15. ಆದಿಲ್ ರಶೀದ್ (ಇಂಗ್ಲೆಂಡ್):₹ 2 ಕೋಟಿ – ಸನ್‌ರೈಸರ್ಸ್ ಹೈದರಾಬಾದ್
16. ಮಯಾಂಕ್ ಮಾರ್ಕಂಡೆ (ಭಾರತ):₹50 ಲಕ್ಷ– ಸನ್‌ರೈಸರ್ಸ್ ಹೈದರಾಬಾದ್
17. ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್):₹ 16 ಕೋಟಿ – ಲಖನೌ ಸೂಪರ್ ಜೈಂಟ್ಸ್
18. ಹೆನ್ರಿಚ್ ಕ್ಲಾಸೆನ್(ದಕ್ಷಿಣ ಆಫ್ರಿಕಾ):₹ 5.25 ಕೋಟಿ – ಸನ್‌ರೈಸರ್ಸ್ ಹೈದರಾಬಾದ್
19. ಫಿಲ್ ಸಾಲ್ಟ್(ಇಂಗ್ಲೆಂಡ್):₹2 ಕೋಟಿ – ಡೆಲ್ಲಿ ಕ್ಯಾಪಿಟಲ್ಸ್
20. ವಿವ್ರಾಂತ್ ಶರ್ಮಾ (ಭಾರತ):₹2.6 ಕೋಟಿಸನ್‌ರೈಸರ್ಸ್ ಹೈದರಾಬಾದ್
21. ಸಮರ್ಥ್ ವ್ಯಾಸ್ (ಭಾರತ):₹ 20 ಲಕ್ಷ– ಸನ್‌ರೈಸರ್ಸ್ ಹೈದರಾಬಾದ್
22. ಸನ್ವೀರ್ ಸಿಂಗ್ (ಭಾರತ):₹ 20 ಲಕ್ಷ– ಸನ್‌ರೈಸರ್ಸ್ ಹೈದರಾಬಾದ್
23. ನಿಶಾಂತ್ ಸಿಂಧು(ಭಾರತ):₹ 60 ಲಕ್ಷ–ಚೆನ್ನೈ ಸೂಪರ್ ಕಿಂಗ್ಸ್
24. ಶೇಕ್ ರಶೀದ್ (ಭಾರತ):₹ 20 ಲಕ್ಷ–ಚೆನ್ನೈ ಸೂಪರ್ ಕಿಂಗ್ಸ್
25. ಎನ್. ಜಗದೀಶನ್(ಭಾರತ):₹ 90 ಲಕ್ಷ–ಕೋಲ್ಕತ್ತ ನೈಟ್ ರೈಡರ್ಸ್
26. ಕೆ.ಎಸ್.ಭರತ್ (ಭಾರತ):₹ 1.2 ಕೋಟಿ – ಗುಜರಾತ್ ಟೈಟನ್ಸ್
27. ವೈಭವ್ ಅರೋರ (ಭಾರತ):₹ 60 ಲಕ್ಷ–ಕೋಲ್ಕತ್ತ ನೈಟ್ ರೈಡರ್ಸ್
28. ಯಶ್ ಠಾಕೂರ್ (ಭಾರತ):₹ 45 ಲಕ್ಷ– ಲಖನೌ ಸೂಪರ್ ಜೈಂಟ್ಸ್
29. ಶಿವಂ ಮಾವಿ (ಭಾರತ):₹ 6 ಕೋಟಿ – ಗುಜರಾತ್ ಟೈಟನ್ಸ್
30. ಮುಕೇಶ್ ಕುಮಾರ್ (ಭಾರತ):₹5.5 ಕೋಟಿ – ಡೆಲ್ಲಿ ಕ್ಯಾಪಿಟಲ್ಸ್
31. ಹಿಮಾಂಶು ಶರ್ಮಾ (ಭಾರತ):₹ 20ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
32. ಉಪೇಂದ್ರ ಸಿಂಗ್ ಯಾದವ್ (ಭಾರತ):₹ 25 ಲಕ್ಷ– ಸನ್‌ರೈಸರ್ಸ್ ಹೈದರಾಬಾದ್
33. ಮನೀಶ್ ಪಾಂಡೆ (ಭಾರತ):₹2.4 ಕೋಟಿ – ಡೆಲ್ಲಿ ಕ್ಯಾಪಿಟಲ್ಸ್
34. ವಿಲ್ ಜಾಕ್ಸ್ (ಇಂಗ್ಲೆಂಡ್):₹ 3.2 ಕೋಟಿ – ರಾಯಲ್ ಚಾಲೆಂಜರ್ಸ್ ಬೆಂಗಳೂರು
35. ರೊಮಾರಿಯೊ ಶೆಫರ್ಡ್ (ವೆಸ್ಟ್ ಇಂಡೀಸ್):₹ 50 ಲಕ್ಷ– ಲಖನೌ ಸೂಪರ್ ಜೈಂಟ್ಸ್
36. ಡೇನಿಯಲ್ ಸ್ಯಾಮ್ಸ್(ಆಸ್ಟ್ರೇಲಿಯಾ):₹ 75 ಲಕ್ಷ– ಲಖನೌ ಸೂಪರ್ ಜೈಂಟ್ಸ್
37.ಕೈಲ್ ಜೇಮಿಸನ್ (ನ್ಯೂಜಿಲೆಂಡ್): ₹ 1ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
38. ಪಿಯೂಷ್ ಚಾವ್ಲಾ (ಭಾರತ):₹ 50 ಲಕ್ಷ – ಮುಂಬೈ ಇಂಡಿಯನ್ಸ್
39. ಅಮಿತ್ ಮಿಶ್ರಾ (ಭಾರತ):₹ 50 ಲಕ್ಷ – ಲಖನೌ ಸೂಪರ್ ಜೈಂಟ್ಸ್
40. ಹರ್‌ಪೀತ್ ಭಾಟಿಯಾ (ಭಾರತ):₹ 40 ಲಕ್ಷ – ಲಖನೌ ಸೂಪರ್ ಜೈಂಟ್ಸ್
41. ಮನೋಜ್ ಭಂದಗೆ (ಭಾರತ):₹ 20ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
42. ಮಯಾಂಕ್ ದಗಾರ್ (ಭಾರತ):₹ 1 8 ಕೋಟಿ– ಸನ್‌ರೈಸರ್ಸ್ ಹೈದರಾಬಾದ್
43. ದೌನ್ ಜಾನ್ಸನ್ (ದಕ್ಷಿಣ ಆಫ್ರಿಕಾ):₹ 20ಲಕ್ಷ –ಮುಂಬೈ ಇಂಡಿಯನ್ಸ್
44. ಪ್ರೇರಕ್ ಮಂಕಡ್ (ಭಾರತ):₹ 20 ಲಕ್ಷ – ಲಖನೌ ಸೂಪರ್ ಜೈಂಟ್ಸ್
45. ಡೊನೊವಾನ್ ಫೆರಾರಿಯಾ (ದಕ್ಷಿಣ ಆಫ್ರಿಕಾ):₹ 20 ಲಕ್ಷ – ರಾಜಸ್ಥಾನ ರಾಯಲ್ಸ್
46. ವಿದ್ವತ್ ಕಾವೇರಪ್ಪ (ಭಾರತ):₹ 20ಲಕ್ಷ – ಪಂಜಾಬ್ ಕಿಂಗ್ಸ್
47. ರಜನ್ ಕುಮಾರ್ (ಭಾರತ): ₹ 70ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
48. ಊರ್ವಿ ಪಟೇಲ್ (ಭಾರತ):₹ 20ಲಕ್ಷ – ಗುಜರಾತ್ ಟೈಟನ್ಸ್
49. ವಿಷ್ಣು ವಿನೋದ್ (ಭಾರತ):₹ 20ಲಕ್ಷ –ಮುಂಬೈ ಇಂಡಿಯನ್ಸ್
50. ಸುಯಾಷ್ ಶರ್ಮಾ (ಭಾರತ):₹ 20 ಲಕ್ಷ–ಕೋಲ್ಕತ್ತ ನೈಟ್ ರೈಡರ್ಸ್
51. ಜೋಶುವಾ ಲಿಟ್ಟೆ (ಐರ್ಲೆಂಡ್):₹ 4.4 ಕೋಟಿ – ಗುಜರಾತ್ ಟೈಟನ್ಸ್
52. ಅವಿನಾಶ್ ಸಿಂಗ್ (ಭಾರತ): ₹ 60 ಲಕ್ಷ –ರಾಯಲ್ ಚಾಲೆಂಜರ್ಸ್ ಬೆಂಗಳೂರು
53. ನಿತೀಶ್ ಕುಮಾರ್ ರೆಡ್ಡಿ (ಭಾರತ):₹ 20 ಲಕ್ಷ– ಸನ್‌ರೈಸರ್ಸ್ ಹೈದರಾಬಾದ್
54. ಡೇವಿಡ್ ವೈಸ್ (ನಮೀಬಿಯಾ):₹ 1ಕೋಟಿ –ಕೋಲ್ಕತ್ತ ನೈಟ್ ರೈಡರ್ಸ್
55. ಸ್ವಪ್ನಿಲ್ ಸಿಂಗ್ (ಭಾರತ):₹ 20 ಲಕ್ಷ–ಲಖನೌ ಸೂಪರ್ ಜೈಂಟ್ಸ್
56. ಶ್ಯಾಮ್ಸ್‌ಮುಲಾನಿ (ಭಾರತ):₹ 20ಲಕ್ಷ –ಮುಂಬೈ ಇಂಡಿಯನ್ಸ್
57. ಕೃಣಾಲ್ ರಾಥೋರ್ (ಭಾರತ):₹ 20ಲಕ್ಷ –ರಾಜಸ್ಥಾನ ರಾಯಲ್ಸ್
58. ಸೋನು ಯಾದವ್ (ಭಾರತ):₹ 20 ಲಕ್ಷ –ರಾಯಲ್ ಚಾಲೆಂಜರ್ಸ್ ಬೆಂಗಳೂರು
59. ಕುಲ್ವಂತ್ ಕೆಜ್ರೋಲಿಯಾ (ಭಾರತ):₹ 20 ಲಕ್ಷ –ಕೋಲ್ಕತ್ತ ನೈಟ್ ರೈಡರ್ಸ್
60. ಅಜಯ್ ಮಂಡಲ್ (ಭಾರತ):₹ 20 ಲಕ್ಷ – ಚೆನ್ನೈ ಸೂಪರ್ ಕಿಂಗ್ಸ್
61. ಮೋಹಿತ್ ರಾಥೇ (ಭಾರತ):₹ 20 ಲಕ್ಷ – ಪಂಜಾಬ್ ಕಿಂಗ್ಸ್
62. ನೇಹಲ್ ವಡೇರಾ (ಭಾರತ):₹ 20ಲಕ್ಷ –ಮುಂಬೈ ಇಂಡಿಯನ್ಸ್
63. ಭಗತ್ ವರ್ಮಾ (ಭಾರತ):₹ 20 ಲಕ್ಷ – ಚೆನ್ನೈ ಸೂಪರ್ ಕಿಂಗ್ಸ್
64. ಶಿವಂ ಸಿಂಗ್ (ಭಾರತ):₹ 20 ಲಕ್ಷ – ಪಂಜಾಬ್ ಕಿಂಗ್ಸ್
65.ರೈಲೀ ರುಸ್ಸೋ (ದಕ್ಷಿಣ ಆಫ್ರಿಕಾ):₹ 4.6 ಕೋಟಿ – ಡೆಲ್ಲಿ ಕ್ಯಾಪಿಟಲ್ಸ್
66. ಲಿಟನ್ ದಾಸ್ (ಬಾಂಗ್ಲಾದೇಶ):₹ 50 ಲಕ್ಷ –ಕೋಲ್ಕತ್ತ ನೈಟ್ ರೈಡರ್ಸ್
67. ಅಕೀಲ್ ಹೊಸೈನ್ (ವೆಸ್ಟ್ ಇಂಡೀಸ್):₹ 1 ಕೋಟಿ– ಸನ್‌ರೈಸರ್ಸ್ ಹೈದರಾಬಾದ್
68. ಆ್ಯಡಂ ಜಂಪಾ (ಆಸ್ಟ್ರೇಲಿಯಾ):₹ 1.5 ಕೋಟಿ – ರಾಜಸ್ಥಾನ ರಾಯಲ್ಸ್
69.ಅನ್ಮೋಲ್‌ಪ್ರೀತ್ ಸಿಂಗ್ (ಭಾರತ):₹ 20 ಲಕ್ಷ –ಸನ್‌ರೈಸರ್ಸ್ ಹೈದರಾಬಾದ್
70. ಕೆ.ಎಂ. ಆಸಿಫ್ (ಭಾರತ):₹ 30 ಲಕ್ಷ – ರಾಜಸ್ಥಾನ ರಾಯಲ್ಸ್
71. ಮುರುಗನ್ ಅಶ್ವಿನ್ (ಭಾರತ):₹ 20 ಲಕ್ಷ – ರಾಜಸ್ಥಾನ ರಾಯಲ್ಸ್
72.ಮಂದೀಪ್ ಸಿಂಗ್ (ಭಾರತ):₹ 50 ಲಕ್ಷ – ಕೋಲ್ಕತ್ತ ನೈಟ್ ರೈಡರ್ಸ್
73. ಆಕಾಶ್ ವಶಿಷ್ಠ್ (ಭಾರತ):₹ 20 ಲಕ್ಷ – ರಾಜಸ್ಥಾನ ರಾಯಲ್ಸ್
74. ನವೀನ್ ಉಲ್ ಹಕ್ (ಅಫ್ಗಾನಿಸ್ತಾನ):₹ 50 ಲಕ್ಷ – ಲಖನೌ ಸೂಪರ್ ಜೈಂಟ್ಸ್
75. ಯಧ್ವೀರ್ ಚರಕ್(ಭಾರತ):₹ 20 ಲಕ್ಷ – ಲಖನೌ ಸೂಪರ್ ಜೈಂಟ್ಸ್
76. ರಾಘವ್ ಗೋಯಲ್ (ಭಾರತ):₹ 20ಲಕ್ಷ –ಮುಂಬೈ ಇಂಡಿಯನ್ಸ್
77. ಅಬ್ದುಲ್ ಪಿ.ಎ. (ಭಾರತ):₹ 20ಲಕ್ಷ– ರಾಜಸ್ಥಾನ ರಾಯಲ್ಸ್
78.ಜೋ ರೂಟ್ (ಇಂಗ್ಲೆಂಡ್):₹ 1ಕೋಟಿ – ರಾಜಸ್ಥಾನ ರಾಯಲ್ಸ್
79. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ): ₹ 1.5 ಕೋಟಿ – ಕೋಲ್ಕತ್ತ ನೈಟ್ ರೈಡರ್ಸ್
80. ಮೋಹಿತ್ ಶರ್ಮಾ (ಭಾರತ): ₹ 50 ಲಕ್ಷ –ಗುಜರಾತ್ ಟೈಟನ್ಸ್
ಮಾರಾಟವಾಗದ ಪ್ರಮುಖ ಆಟಗಾರರು
ಆ್ಯಡಂ ಮಿಲ್ನೆ – ನ್ಯೂಜಿಲೆಂಡ್
ಕ್ರಿಸ್ ಜೋರ್ಡನ್ – ಇಂಗ್ಲೆಂಡ್
ತಬ್ರೇಜ್ ಶಂಸಿ–ದಕ್ಷಿಣ ಆಫ್ರಿಕಾ
ಮುಜೀಬ್ ಉರ್ ರೆಹಮಾನ್ – ಅಫ್ಗಾನಿಸ್ತಾನ
ಶ್ರೇಯಸ್ ಗೋಪಾಲ್ –ಭಾರತ
ಪ್ರಿಯಮ್ ಗರ್ಗ್ – ಭಾರತ
ಕುಶಾಲ್ ಮೆಂಡಿಸ್ – ಶ್ರೀಲಂಕಾ
ಪೌಲ್ ಸ್ಟರ್ಲಿಂಗ್ – ಐರ್ಲೆಂಡ್
ಟ್ರಾವಿಸ್ ಹೆಡ್ –ಆಸ್ಟ್ರೇಲಿಯಾ
ಡೇವಿಡ್ ಮಲಾನ್ – ಇಂಗ್ಲೆಂಡ್
ಸಂದೀಪ್ ಶರ್ಮಾ – ಭಾರತ
ಜಿಮ್ಮಿ ನೀಶಮ್ – ನ್ಯೂಜಿಲೆಂಡ್
ದಾಸುನ್ ಶನಕ – ಶ್ರೀಲಂಕಾ
ಜಗದೀಶಸುಚಿತ್ – ಭಾರತ
ವರುಣ್ ಆ್ಯರನ್ – ಭಾರತ
ಟಾಮ್ ಕರನ್ – ಇಂಗ್ಲೆಂಡ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.