ಬೆಂಗಳೂರು: 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಾಗಿ ದುಬೈನಲ್ಲಿ ಮಂಗಳವಾರ (ಡಿ.19) ನಡೆದ ಮಿನಿ ಹರಾಜಿನಲ್ಲಿ ಅನೇಕ ನೂತನ ದಾಖಲೆಗಳು ಸೃಷ್ಟಿಯಾದವು. ಈ ಕುರಿತು ಪ್ರಮುಖಾಂಶಗಳನ್ನು ಇಲ್ಲಿ ಕೊಡಲಾಗಿದೆ.
ಮಿಚೆಲ್ ಸ್ಟಾರ್ಕ್: ₹24.75 ಕೋಟಿ
ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅವರನ್ನು ₹24.75 ಕೋಟಿ ತೆತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡ ಖರೀದಿಸಿತು. ಆ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಮೌಲ್ಯ ಗಳಿಸಿದ ಆಟಗಾರ ಎನಿಸಿದರು.
6 ಆಟಗಾರರಿಗೆ ₹10 ಕೋಟಿಗೂ ಹೆಚ್ಚು ಮೌಲ್ಯ
ಮಿಚೆಲ್ ಸ್ಟಾರ್ಕ್: ₹24.75 ಕೋಟಿ (ಕೋಲ್ಕತ್ತ ನೈಟ್ ರೈಡರ್ಸ್)
ಪ್ಯಾಟ್ ಕಮಿನ್ಸ್: ₹20.50 ಕೋಟಿ (ಸನ್‌ರೈಸರ್ಸ್ ಹೈದರಾಬಾದ್)
ಡೆರಿಲ್ ಮಿಚೆಲ್: ₹14 ಕೋಟಿ (ಚೆನ್ನೈ ಸೂಪರ್ ಕಿಂಗ್ಸ್)
ಹರ್ಷಲ್ ಪಟೇಲ್: ₹11.75 ಕೋಟಿ (ಪಂಜಾಬ್ ಕಿಂಗ್ಸ್)
ಅಲ್ಜಾರಿ ಜೋಸೆಫ್: ₹11.50 ಕೋಟಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಸ್ಪೆನ್ಸರ್ ಜಾನ್ಸನ್: ₹10 ಕೋಟಿ (ಗುಜರಾತ್ ಟೈಟನ್ಸ್)
ಈ ಸಲ ಭಾರತದ ದುಬಾರಿ ಆಟಗಾರ ಹರ್ಷಲ್
ಹರಿಯಾಣದ ಆಲ್‌ರೌಂಡರ್ ಹರ್ಷಲ್ ಅವರನ್ನು ₹11.75 ಕೋಟಿ ಗೆ ಪಂಜಾಬ್ ಕಿಂಗ್ಸ್ ತಂಡವು ಸೆಳೆದುಕೊಂಡಿತು. ಇದರೊಂದಿಗೆ ಈ ಬಾರಿಯ ಬಿಡ್‌ನಲ್ಲಿ ಅತಿ ಹೆಚ್ಚು ಮೌಲ್ಯಕ್ಕೆ ಮಾರಾಟವಾದ ಭಾರತದ ಆಟಗಾರನಾದರು.
ಅನ್‌ಕ್ಯಾಪ್ಡ್ ಆಟಗಾರರಿಗೆ ಬಂಪರ್:
ಸಮೀರ್ ರಿಜ್ವಿ: ₹8.40 ಕೋಟಿ (ಚೆನ್ನೈ ಸೂಪರ್ ಕಿಂಗ್ಸ್)
ಶಾರೂಕ್ ಖಾನ್: ₹7.40 ಕೋಟಿ (ಗುಜರಾತ್ ಟೈಟನ್ಸ್)
ಶುಭಂ ದುಬೆ: ₹5.80 ಕೋಟಿ (ರಾಜಸ್ಥಾನ ರಾಯಲ್ಸ್)
ಶಿವಂ ಮಾವಿ: ₹6.40 ಕೋಟಿ (ಲಖನೌ ಸೂಪರ್ ಜೈಂಟ್ಸ್)
ಬಿಕರಿಯಾಗದೇ ಉಳಿದ ಪ್ರಮುಖ ಆಟಗಾರರು:
ಸ್ಟೀವ್ ಸ್ಮಿತ್,
ಜೋಷ್ ಹ್ಯಾಜಲ್‌ವುಡ್,
ಜೋಷ್ ಇಂಗ್ಲಿಸ್,
ರಸಿ ವ್ಯಾನ್ ಡೆರ್ ಡಸೆ,
ಜಿಮ್ಮಿ ನಿಶಾಮ್,
ಕೈಲ್ ಜೆಮಿಸನ್,
ಫಿಲಿಪ್ ಸಾಲ್ಟ್,
ಸರ್ಫರಾಜ್ ಖಾನ್,
ಅದಿಲ್ ರಶೀದ್,
ಸೀನ್ ಅಬಾಟ್,
ಕಾಲಿನ್ ಮುನ್ರೊ,
ಜೇಸನ್ ಹೋಲ್ಡರ್,
ಕ್ರಿಸ್ ಜಾರ್ಡನ್,
ಟಿಮ್ ಸೌಥಿ,
ಈಶ್ ಸೋಧಿ,
ಕುಸಾಲ್ ಮೆಂಡಿಸ್,
ರೀಜಾ ಹೆಂಡ್ರಿಕ್ಸ್,
ಕೇಶವ್ ಮಹಾರಾಜ್,
ಹನುಮ ವಿಹಾರಿ,
ಸಿದ್ದಾರ್ಥ್ ಕೌಲ್,
ಸಂದೀಪ್ ವಾರಿಯರ್,
ಬಾಸಿಲ್ ಥಂಪಿ,
ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಮೌಲ್ಯ ಪಡೆದ ಟಾಪ್ 5 ಆಟಗಾರರು:
2024: ಮಿಚೆಲ್ ಸ್ಟಾರ್ಕ್: ₹24.75 ಕೋಟಿ (ಕೋಲ್ಕತ್ತ ನೈಟ್ ರೈಡರ್ಸ್)
2024: ಪ್ಯಾಟ್ ಕಮಿನ್ಸ್: ₹20.50 ಕೋಟಿ (ಸನ್‌ರೈಸರ್ಸ್ ಹೈದರಾಬಾದ್)
2023: ಸ್ಯಾಮ್ ಕರ್ರನ್: ₹18.50 ಕೋಟಿ (ಪಂಜಾಬ್ ಕಿಂಗ್ಸ್)
2023: ಕ್ಯಾಮರೂನ್ ಗ್ರೀನ್: ₹17.50 ಕೋಟಿ (ಆಸ್ಟ್ರೇಲಿಯಾ)
2023: ಬೆನ್ ಸ್ಟೋಕ್ಸ್: ₹16.25 ಕೋಟಿ (ಇಂಗ್ಲೆಂಡ್)
ಹರಾಜಿನಲ್ಲಿ ಮಾರಾಟವಾದ ಆಟಗಾರರ ಪಟ್ಟಿ:
ಐಪಿಎಲ್ 2024 ಹರಾಜಿನ ಬಳಿಕ ಆರ್‌ಸಿಬಿ ತಂಡ:
ಫಾಫ್ ಡು ಪ್ಲೆಸಿ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಟೀದಾರ್, ಮಯಾಂಕ್ ದಾಗರ್, ವಿಜಯ್‌ಕುಮಾರ್ ವೈಶಾಖ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೂನ್ ಗ್ರೀನ್, ಅಲ್ಜಾರಿ ಜೋಸೆಫ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ಸುಯಾಸ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲಾಮ್ರೋರ್, ಕರಣ್ ಶರ್ಮಾ, ಮನೋಜ್ ಭಾಂದಗೆ, ಯಶ್ ದಯಾಳ್, ಲಾಕಿ ಫರ್ಗ್ಯೂಸನ್, ಟಾಮ್ ಕರನ್, ಸೌರವ್ ಚೌಹಾಣ್, ಸ್ವಪ್ನಿಲ್ ಸಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.