ADVERTISEMENT

IPL Auction | ಸ್ಟಾರ್ಕ್‌ಗೆ ದಾಖಲೆ ಬೆಲೆ: ಯಾರು ಯಾವ ತಂಡಕ್ಕೆ? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2023, 9:54 IST
Last Updated 19 ಡಿಸೆಂಬರ್ 2023, 9:54 IST
<div class="paragraphs"><p>ಐಪಿಎಲ್ ಟ್ರೋಫಿ</p></div>

ಐಪಿಎಲ್ ಟ್ರೋಫಿ

   

ಇಂಡಿಯನ್ ಪ್ರೀಮಿಯರ್ ಲೀಗ್ ವೆಬ್‌ಸೈಟ್‌ ಚಿತ್ರ

ದುಬೈ: 2023ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಹೀರೊಗಳಾದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಹಾಗೂ ಟ್ರಾವಿಸ್‌ ಹೆಡ್‌ ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್‌ (ಎಸ್‌ಆರ್‌ಎಚ್‌) ಖರೀದಿಸಿದೆ.

ADVERTISEMENT

ಇದೇ ಮೊದಲ ಬಾರಿಗೆ ಭಾರತದಿಂದ ಹೊರಗೆ (ದುಬೈನಲ್ಲಿ) ನಡೆಯುತ್ತಿರುವ ಐಪಿಎಲ್‌ ಹರಾಜು ಪ್ರಕ್ರಿಯೆಯಲ್ಲಿ, ಕಮಿನ್ಸ್‌ಗೆ ಬರೋಬ್ಬರಿ ₹ 20.5 ಕೋಟಿ ನೀಡಿರುವ ಸನ್‌ರೈಸರ್ಸ್ ತಂಡ, ಹೆಡ್‌ಗೆ ₹ 6.80 ಕೋಟಿ ಕೊಟ್ಟಿದೆ.

77 ಆಟಗಾರರ ಖರೀದಿಗೆ ಅವಕಾಶ

ಐಪಿಎಲ್ ಆಡಳಿತ ಸಮಿತಿಯು 1166 ನೋಂದಾಯಿತ ಆಟಗಾರರ ಪಟ್ಟಿಯನ್ನು ಫ್ರ್ಯಾಂಚೈಸಿಗಳಿಗೆ ನೀಡಿತ್ತು. ಅದನ್ನು ಪರಿಷ್ಕರಿಸಿ 333 ಆಟಗಾರರನ್ನು ಅಂತಿಮಗೊಳಿಸಲಾಗಿದೆ. ಅದರಲ್ಲಿ ಭಾರತದ 214 ಮತ್ತು ವಿದೇಶದ 119 ಆಟಗಾರರಿದ್ದಾರೆ.

ಹತ್ತು ಫ್ರ್ಯಾಂಚೈಸಿಗಳು 30 ವಿದೇಶಿ ಆಟಗಾರರೂ ಸೇರಿದಂತೆ ಒಟ್ಟು 77 ಆಟಗಾರರನ್ನು ಖರೀದಿಸಲು ಮಾತ್ರ ಅವಕಾಶವಿದೆ.

ಕೊಕ ಕೋಲಾ ಅರೆನಾದಲ್ಲಿ ನಡೆಯುತ್ತಿರುವ ಹರಾಜಿನಲ್ಲಿ ಯಾವ ಆಟಗಾರ ಯಾವ ತಂಡದ ಪಾಲಾಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಯಾರು ಯಾವ ತಂಡಕ್ಕೆ?

* ವೆಸ್ಟ್‌ ಇಂಡೀಸ್‌ನ ರಾಮನ್‌ ಪೊವೆಲ್‌: ರಾಜಸ್ಥಾನ ರಾಯಲ್ಸ್‌ – ₹ 7.4 ಕೋಟಿ

* ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್‌: ಡೆಲ್ಲಿ ಕ್ಯಾಪಿಟಲ್ಸ್‌ – ₹ 4 ಕೋಟಿ

* ಆಸ್ಟ್ರೇಲಿಯಾದ ಟ್ರಾವಿಸ್‌ ಹೆಡ್‌: ಸನ್‌ರೈಸರ್ಸ್‌ ಹೈದರಾಬಾದ್‌ – ₹ 6.80 ಕೋಟಿ

* ಶ್ರೀಲಂಕಾದ ವನಿಂದು ಹಸರಂಗ: ಸನ್‌ರೈಸರ್ಸ್‌ ಹೈದರಾಬಾದ್‌ – ₹ 1.5 ಕೋಟಿ

* ನ್ಯೂಜಿಲೆಂಡ್‌ನ ರಚಿನ್‌ ರವೀಂದ್ರ: ಚೆನ್ನೈ ಸೂಪರ್‌ ಕಿಂಗ್ಸ್‌ – ₹ 1.8 ಕೋಟಿ

* ಭಾರತದ ಶಾರ್ದೂಲ್‌ ಠಾಕೂರ್‌: ಚೆನ್ನೈ ಸೂಪರ್‌ ಕಿಂಗ್ಸ್‌ – ₹ 4 ಕೋಟಿ

* ಅಫ್ಗಾನಿಸ್ತಾನದ ಅಝ್ಮತ್‌ವುಲ್ಲ ಒಮರ್ಜೈ: ಗುಜರಾತ್‌ ಟೈಟನ್ಸ್‌ – ₹ 50 ಲಕ್ಷ

* ಆಸ್ಟ್ರೇಲಿಯಾದ ಪ್ಯಾಟ್‌ ಕಮಿನ್ಸ್‌: ಸನ್‌ರೈಸರ್ಸ್‌ ಹೈದರಾಬಾದ್‌ – ₹ 20.5 ಕೋಟಿ

* ದಕ್ಷಿಣ ಆಪ್ರಿಕಾದ ಜೆರಾಲ್ಡ್ ಕೋಜಿ: ಮುಂಬೈ ಇಂಡಿಯನ್ಸ್‌ – ₹ 5 ಕೋಟಿ

* ಭಾರತದ ಹರ್ಷಲ್ ಪಟೇಲ್‌: ಪಂಜಾಬ್‌ ಕಿಂಗ್ಸ್‌ – ₹ 11.75 ಕೋಟಿ

* ನ್ಯೂಜಿಲೆಂಡ್‌ನ ಡೆರಿಲ್‌ ಮಿಚೇಲ್‌: ಚೆನ್ನೈ ಸೂಪರ್‌ ಕಿಂಗ್ಸ್‌ – ₹ 14 ಕೋಟಿ

* ಇಂಗ್ಲೆಂಡ್‌ನ ಕ್ರಿಸ್‌ ವೋಕ್ಸ್‌: ಪಂಜಾಬ್‌ ಕಿಂಗ್ಸ್‌ – ₹ 4.2 ಕೋಟಿ

* ದಕ್ಷಿಣ ಆಪ್ರಿಕಾದ ಟ್ರಿಸ್ಟನ್‌ ಸ್ಟಬ್ಸ್‌: ಡೆಲ್ಲಿ ಕ್ಯಾಪಿಟಲ್ಸ್‌ – ₹ 50 ಲಕ್ಷ

* ಭಾರತದ ಚೇತನ್‌ ಸಕಾರಿಯಾ: ಕೋಲ್ಕತ್ತ ನೈಟ್‌ರೈಡರ್ಸ್‌ – ₹ 50 ಲಕ್ಷ

* ಭಾರತದ ಕೆ.ಎಸ್‌. ಭರತ್‌: ಕೋಲ್ಕತ್ತ ನೈಟ್‌ರೈಡರ್ಸ್‌ – ₹ 50 ಲಕ್ಷ

* ವೆಸ್ಟ್‌ ಇಂಡೀಸ್‌ನ ಅಲ್ಜಾರಿ ಜೋಸೆಫ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – ₹ 11.5 ಕೋಟಿ

* ಭಾರತದ ಉಮೇಶ್‌ ಯಾದವ್‌: ಗುಜರಾತ್‌ ಟೈಟನ್ಸ್‌ – ₹ 5.8 ಕೋಟಿ

* ಭಾರತದ ಶಿವಂ ಮಾವಿ: ಲಖನೌ ಸೂಪರ್‌ ಜೈಂಟ್ಸ್‌ – ₹ 6.4 ಕೋಟಿ

* ಆಸ್ಟ್ರೇಲಿಯಾದ ಮಿಚೇಲ್‌ ಸ್ಟಾರ್ಕ್‌: ಕೋಲ್ಕತ್ತ ನೈಟ್‌ರೈಡರ್ಸ್‌ – ₹ 24.75 ಕೋಟಿ

* ಭಾರತದ ಜಯದೇವ್‌ ಉನದ್ಕತ್: ಸನ್‌ರೈಸರ್ಸ್‌ ಹೈದರಾಬಾದ್‌ – ₹ 1.6 ಕೋಟಿ

* ಶ್ರೀಲಂಕಾದ ದಿಲ್ಶಾನ್‌ ಮಧುಶಂಕ: ಮುಂಬೈ ಇಂಡಿಯನ್ಸ್‌ – ₹ 4.6 ಕೋಟಿ

* ಭಾರತದ ಶುಭಮ್‌ ದುಬೇ: ರಾಜಸ್ಥಾನ ರಾಯಲ್ಸ್‌ – ₹ 5.8 ಕೋಟಿ

* ಭಾರತದ ಅಂಗ್‌ಕ್ರಿಶ್‌ ರಘುವಂಶಿ: ಕೋಲ್ಕತ್ತ ನೈಟ್‌ರೈಡರ್ಸ್‌ – ₹ 20 ಲಕ್ಷ

* ಭಾರತದ ಅರ್ಶಿನ್‌ ಕುಲಕರ್ಣಿ: ಲಖನೌ ಸೂಪರ್‌ ಜೈಂಟ್ಸ್‌ – ₹ 20 ಲಕ್ಷ

* ಭಾರತದ ರಿಸಿಖ್‌ ದರ್‌: ಡೆಲ್ಲಿ ಕ್ಯಾಪಿಟಲ್ಸ್‌ – ₹ 20 ಲಕ್ಷ

* ಭಾರತದ ಕಾರ್ತಿಕ್‌ ತ್ಯಾಗಿ: ಗುಜರಾತ್‌ ಟೈಟನ್ಸ್‌ – ₹ 60 ಲಕ್ಷ

* ಭಾರತದ ಶ್ರೇಯಸ್‌ ಗೋಪಾಲ್‌: ಮುಂಬೈ ಇಂಡಿಯನ್ಸ್‌ – ₹ 20 ಲಕ್ಷ

* ಭಾರತದ ಎಂ.ಸಿದ್ಧಾರ್ಥ್‌: ಲಖನೌ ಸೂಪರ್‌ ಜೈಂಟ್ಸ್‌ – ₹ 2.4 ಕೋಟಿ

* ಭಾರತದ ಮಾನವ್‌ ಸುತಾರ್‌: ಗುಜರಾತ್‌ ಟೈಟನ್ಸ್‌ – ₹ 20 ಲಕ್ಷ

* ಭಾರತದ ಆಕಾಶ್‌ ಸಿಂಗ್‌: ಸನ್‌ರೈಸರ್ಸ್‌ ಹೈದರಾಬಾದ್‌ – ₹ 20 ಲಕ್ಷ

* ಭಾರತದ ಸಮೀರ್‌ ರಿಜ್ವಿ: ಚೆನ್ನೈ ಸೂಪರ್‌ ಕಿಂಗ್ಸ್‌ – ₹ 8.4 ಕೋಟಿ

* ಭಾರತದ ಶಾರುಖ್‌ ಖಾನ್‌: ಗುಜರಾತ್‌ ಟೈಟನ್ಸ್‌ – ₹ 7 ಕೋಟಿ

* ಭಾರತದ ರಮಣ್‌ದೀಪ್‌ ಸಿಂಗ್‌: ಕೋಲ್ಕತ್ತ ನೈಟ್‌ರೈಡರ್ಸ್‌ – ₹ 20 ಲಕ್ಷ

* ಇಂಗ್ಲೆಂಡ್‌ನ ಟಾಮ್‌ ಕಾಹ್ಲೆರ್‌: ರಾಜಸ್ಥಾನ ರಾಯಲ್ಸ್‌ – ₹ 20 ಲಕ್ಷ

* ಭಾರತದ ರಿಕಿ ಭುಯಿ: ಡೆಲ್ಲಿ ಕ್ಯಾಪಿಟಲ್ಸ್‌ – ₹ 20 ಲಕ್ಷ

* ಭಾರತದ ಕುಮಾರ್‌ ಕುಶಾಗ್ರ: ಡೆಲ್ಲಿ ಕ್ಯಾಪಿಟಲ್ಸ್‌ – ₹ 7.2 ಕೋಟಿ

* ಭಾರತದ ಯಶ್‌ ದಯಾಳ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – ₹ 5 ಕೋಟಿ

* ಭಾರತದ ಸುಶಾಂತ್‌ ಮಿಶ್ರಾ: ಗುಜರಾತ್‌ ಟೈಟನ್ಸ್‌ – ₹ 2.2 ಕೋಟಿ

* ವೆಸ್ಟ್‌ಇಂಡೀಸ್‌ನ ಶೆರ್ಫಾನ್‌ ರುದರ್ಫೋರ್ಡ್: ಕೋಲ್ಕತ್ತ ನೈಟ್‌ರೈಡರ್ಸ್‌ – ₹ 1.5 ಕೋಟಿ

* ಆಸ್ಟ್ರೇಲಿಯಾದ ಆಸ್ಟನ್‌ ಟರ್ನರ್‌: ಲಖನೌ ಸೂಪರ್‌ ಜೈಂಟ್ಸ್‌ – ₹ 1 ಕೋಟಿ

* ಇಂಗ್ಲೆಂಡ್‌ನ ಟಾಮ್‌ ಕರನ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – ₹ 1.5 ಕೋಟಿ

* ಇಂಗ್ಲೆಂಡ್‌ನ ಡೇವಿಡ್‌ ವಿಲ್ಲಿ: ಲಖನೌ ಸೂಪರ್‌ ಜೈಂಟ್ಸ್‌ – ₹ 2 ಕೋಟಿ

* ಆಸ್ಟ್ರೇಲಿಯಾದ ಸ್ಪೆನ್ಸರ್‌ ಜಾನ್ಸನ್‌: ಗುಜರಾತ್‌ ಟೈಟನ್ಸ್‌ – ₹ 10 ಕೋಟಿ

* ಬಾಂಗ್ಲಾದೇಶದ ಮುಸ್ತಾಫಿಜುರ್‌ ರಹಮಾನ್‌: ಚೆನ್ನೈ ಸೂಪರ್‌ ಕಿಂಗ್ಸ್‌ – ₹ 2 ಕೋಟಿ

* ಆಸ್ಟ್ರೇಲಿಯಾದ ಜೇ ರಿಚರ್ಡ್ಸನ್‌: ಡೆಲ್ಲಿ ಕ್ಯಾಪಿಟಲ್ಸ್‌ – ₹ 5 ಕೋಟಿ

* ಶ್ರೀಲಂಕಾದ ನುವಾನ್ ತುಷಾರ: ಮುಂಬೈ ಇಂಡಿಯನ್ಸ್‌ – ₹ 4.80 ಕೋಟಿ

* ಭಾರತದ ನಮ್‌ ಧಿರ್‌: ಮುಂಬೈ ಇಂಡಿಯನ್ಸ್‌ – ₹ 20 ಲಕ್ಷ

* ಭಾರತದ ಅನ್ಶುಲ್‌ ಕಂಬೋಜ್‌: ಮುಂಬೈ ಇಂಡಿಯನ್ಸ್‌ – ₹ 20 ಲಕ್ಷ

* ಭಾರತದ ಸುಮಿತ್ ಕುಮಾರ್: ಡೆಲ್ಲಿ ಕ್ಯಾಪಿಟಲ್ಸ್‌ – ₹ 1 ಕೋಟಿ

* ಭಾರತದ ಅಶುತೋಷ್‌ ಶರ್ಮಾ: ಪಂಜಾಬ್‌ ಕಿಂಗ್ಸ್‌ – ₹ 20 ಲಕ್ಷ

* ಭಾರತದ ವಿ.ಪಿ. ಸಿಂಗ್‌: ಪಂಜಾಬ್‌ ಕಿಂಗ್ಸ್‌ – ₹ 20 ಲಕ್ಷ

* ಭಾರತದ ಶಶಾಂಕ್‌ ಸಿಂಗ್‌: ಪಂಜಾಬ್‌ ಕಿಂಗ್ಸ್‌ – ₹ 20 ಲಕ್ಷ

* ಭಾರತದ ತನ್ಮಯ್ ತ್ಯಾಗರಾಜನ್‌: ಪಂಜಾಬ್‌ ಕಿಂಗ್ಸ್‌ – ₹ 20 ಲಕ್ಷ

* ಭಾರತದ ರಾಬಿನ್‌ ಮಿಂಜ್‌: ಗುಜರಾತ್‌ ಟೈಟನ್ಸ್‌ – ₹ 3.6 ಕೋಟಿ

* ಭಾರತದ ಪ್ರಿನ್ಸ್‌ ಚೌಧರಿ: ಪಂಜಾಬ್‌ ಕಿಂಗ್ಸ್‌ – ₹ 20 ಲಕ್ಷ

* ಭಾರತದ ಜೆ.ಸುಬ್ರಮಣ್ಯನ್‌: ಸನ್‌ರೈಸರ್ಸ್‌ ಹೈದರಾಬಾದ್‌ – ₹ 20 ಲಕ್ಷ

* ಭಾರತದ ಮನೀಷ್ ಪಾಂಡೆ: ಕೋಲ್ಕತ್ತ ನೈಟ್‌ರೈಡರ್ಸ್‌ – ₹ 50 ಲಕ್ಷ

* ದಕ್ಷಿಣ ಆಫ್ರಿಕಾದ ರಿಲೀ ರೊಸ್ಸೋ: ಪಂಜಾಬ್‌ ಕಿಂಗ್ಸ್‌ – ₹ 8 ಕೋಟಿ

* ನ್ಯೂಜಿಲೆಂಡ್‌ನ ಲಾಕಿ ಫರ್ಗ್ಯೂಸನ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – ₹ 2 ಕೋಟಿ

* ಅಫ್ಗಾನಿಸ್ತಾನದ ಮುಜೀಬ್‌ ಉರ್‌ ರಹಮಾನ್‌: ಕೋಲ್ಕತ್ತ ನೈಟ್‌ರೈಡರ್ಸ್‌ – ₹ 2 ಕೋಟಿ

* ಭಾರತದ ಮೊ. ಅರ್ಶದ್‌ ಖಾನ್‌: ಲಖನೌ ಸೂಪರ್‌ ಜೈಂಟ್ಸ್‌ – ₹ 20 ಲಕ್ಷ

* ಅಫ್ಗಾನಿಸ್ತಾನದ ಮೊಹಮ್ಮದ್‌ ನಬಿ: ಮುಂಬೈ ಇಂಡಿಯನ್ಸ್‌ – ₹ 1.5 ಕೋಟಿ

* ವೆಸ್ಟ್‌ಇಂಡೀಸ್‌ನ ಶಾಯ್‌ ಹೋಪ್‌: ಡೆಲ್ಲಿ ಕ್ಯಾಪಿಟಲ್ಸ್‌ – ₹ 75 ಲಕ್ಷ

* ಇಂಗ್ಲೆಂಡ್‌ನ ಜಿ.ಅಟ್ಕಿನ್‌ಸನ್‌: ಕೋಲ್ಕತ್ತ ನೈಟ್‌ರೈಡರ್ಸ್‌ – ₹ 1 ಕೋಟಿ

* ಭಾರತದ ಸ್ವಸ್ತಿಕ್‌ ಚಿಕ್ಕಾರ: ಡೆಲ್ಲಿ ಕ್ಯಾಪಿಟಲ್ಸ್‌ – ₹ 20 ಲಕ್ಷ

* ಭಾರತದ ಅಬಿದ್‌ ಮುಷ್ತಾಕ: ರಾಜಸ್ಥಾನ ರಾಯಲ್ಸ್‌ – ₹ 20 ಲಕ್ಷ

* ಭಾರತದ ಸ್ವಸ್ತಿಕ್‌ ಶರ್ಮಾ: ಮುಂಬೈ ಇಂಡಿಯನ್ಸ್‌ – ₹ 20 ಲಕ್ಷ

* ಭಾರತದ ಸ್ವಪ್ನಿಲ್‌ ಸಿಂಗ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – ₹ 20 ಲಕ್ಷ

* ಭಾರತದ ಅವನೀಶ್‌ ರಾವ್‌: ಚೆನ್ನೈ ಸೂಪರ್‌ ಕಿಂಗ್ಸ್‌ – ₹ 20 ಲಕ್ಷ

* ದಕ್ಷಿಣ ಆಫ್ರಿಕಾದ ನಂದ್ರೆ ಬರ್ಜರ್‌: ರಾಜಸ್ಥಾನ ರಾಯಲ್ಸ್‌ – ₹ 50 ಲಕ್ಷ

* ಭಾರತದ ಶಕೀಬ್‌ ಹಸನ್‌: ಕೋಲ್ಕತ್ತ ನೈಟ್‌ರೈಡರ್ಸ್‌ – ₹ 20 ಲಕ್ಷ

* ಭಾರತದ ಸೌರವ್‌ ಚೌಹಾಣ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – ₹ 20 ಲಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.