ADVERTISEMENT

IPL Auction LIVE: ಫಿಲ್ ಸಾಲ್ಟ್, ಜಿತೇಶ್ ಶರ್ಮಾ ಖರೀದಿಸಿದ ಆರ್‌ಸಿಬಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2024, 14:34 IST
Last Updated 24 ನವೆಂಬರ್ 2024, 14:34 IST
<div class="paragraphs"><p>ಐಪಿಎಲ್ ಟ್ರೋಪಿ</p></div>

ಐಪಿಎಲ್ ಟ್ರೋಪಿ

   

ಜಿತೇಶ್ ಶರ್ಮಾ

ಮೂಲ ಬೆಲೆ: ₹1 ಕೋಟಿ

ಮಾರಾಟವಾದ ಮೊತ್ತ: ₹11 ಕೋಟಿ

ADVERTISEMENT

ಖರೀದಿಸಿದ ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು

ಇಶಾನ್ ಕಿಶನ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹11.25 ಕೋಟಿ

ಖರೀದಿಸಿದ ತಂಡ: ಸನ್‌ರೈಸರ್ಸ್ ಹೈದರಾಬಾದ್

ಆರ್‌ಸಿಬಿ ಕ್ಯಾಪ್ ಧರಿಸಲಿರುವ ಫಿಲ್ ಸಾಲ್ಟ್

₹11.50 ಕೋಟಿ ನೀಡಿ ಫಿಲ್ ಸಾಲ್ಟ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ.

ಈ ಮೊದಲು ₹12.2ಕೋಟಿ ನೀಡಿ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಆರ್‌ಸಿಬಿ ಖರೀದಿಸಿತ್ತು.

ರೆಹಮಾನುಲ್ಲಾ ಗುರ್ಬಾಜ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹2 ಕೋಟಿ

ಖರೀದಿಸಿದ ತಂಡ: ಕೋಲ್ಕತ್ತ ನೈಟ್ ರೈಡರ್ಸ್

ಫಿಲ್ ಸಾಲ್ಟ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹11.50 ಕೋಟಿ

ಖರೀದಿಸಿದ ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮೊದಲ ಬಿಡ್‌ನಲ್ಲಿ ಜಾನಿ ಬೆಸ್ಟೊ ಅನ್‌ಸೋಲ್ಡ್

ಕ್ವಿಂಟನ್ ಡಿಕಾಕ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹3.6 ಕೋಟಿ

ಖರೀದಿಸಿದ ತಂಡ: ಕೋಲ್ಕತ್ತ ನೈಟ್ ರೈಡರ್ಸ್

ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಸಕ್ತಿ ತೋರಲಿಲ್ಲ. ಪರಿಣಾಮ ಮ್ಯಾಕ್ಸ್‌ವೆಲ್ ₹4.20 ಕೋಟಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹4.20 ಕೋಟಿ

ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್

ಮಿಚೆಲ್ ಮಾರ್ಷ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹3.4 ಕೋಟಿ

ಖರೀದಿಸಿದ ತಂಡ: ಲಖನೌ ಸೂಪರ್‌ಜೈಂಟ್ಸ್

ವೆಂಕಟೇಶ್ ಅಯ್ಯರ್‌ಗೆ ಜಾಕ್‌ಪಾಟ್

ತೀವ್ರ ಪೈಪೋಟಿಯಿಂದ ಸಾಗಿದ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ ₹23.75 ಕೋಟಿಗೆ ವೆಂಕಟೇಶ್ ಅಯ್ಯರ್ ಅವರನ್ನು ಕೋಲ್ಕತ್ತ ನೈಟ್ ರೈಡರ್ಸ್ ಖರೀದಿಸಿದೆ. ಅಯ್ಯರ್ ಖರೀದಿಗಾಗಿ ಆರ್‌ಸಿಬಿ ತೀವ್ರ ಪೈಪೋಟಿ ನಡೆಸಿತ್ತು.

ಮಾರ್ಕಸ್ ಸ್ಟೋಯಿನಿಸ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹11 ಕೋಟಿ

ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್

ವೆಂಕಟೇಶ್ ಅಯ್ಯರ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹23.75 ಕೋಟಿ

ಖರೀದಿಸಿದ ತಂಡ: ಕೋಲ್ಕತ್ತ ನೈಟ್ ರೈಡರ್ಸ್

ರವಿಚಂದ್ರನ್ ಅಶ್ವಿನ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹9.75 ಕೋಟಿ

ಖರೀದಿಸಿದ ತಂಡ: ಚೆನ್ನೈ ಸೂಪರ್ ಕಿಂಗ್ಸ್

ರಚಿನ್ ರವೀಂದ್ರ

ಮೂಲ ಬೆಲೆ: ₹1.5 ಕೋಟಿ

ಮಾರಾಟವಾದ ಮೊತ್ತ: ₹4 ಕೋಟಿ

ಖರೀದಿಸಿದ ತಂಡ: ಚೆನ್ನೈ ಸೂಪರ್ ಕಿಂಗ್ಸ್

ಹರ್ಷಲ್ ಪಟೇಲ್

ಮಾರಾಟವಾದ ಮೊತ್ತ: ₹8 ಕೋಟಿ

ಖರೀದಿಸಿದ ತಂಡ: ಸನ್‌ರೈಸರ್ಸ್ ಹೈದರಾಬಾದ್

ಜೇಕ್‌ ಫ್ರೇಸರ್ ಮೆಕ್‌ಗುರ್ಕ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹9 ಕೋಟಿ

ಖರೀದಿಸಿದ ತಂಡ: ಡೆಲ್ಲಿ ಕ್ಯಾಪಿಟಲ್ಸ್ (ರೈಟು ಟು ಮ್ಯಾಚ್)

ಮೊದಲ ಸುತ್ತಿನಲ್ಲಿ ಡೇವಿಡ್ ವಾರ್ನರ್ ಅನ್‌ಸೋಲ್ಡ್

ರಾಹುಲ್ ತ್ರಿಪಾಠಿ

ಮಾರಾಟವಾದ ಮೊತ್ತ: ₹3.4 ಕೋಟಿ

ಖರೀದಿಸಿದ ತಂಡ: ಚೆನ್ನೈ ಸೂಪರ್ ಕಿಂಗ್ಸ್

ಡೆವೊನ್ ಕಾನ್ವೆ

ಮಾರಾಟವಾದ ಮೊತ್ತ: ₹6.25 ಕೋಟಿ

ಖರೀದಿಸಿದ ತಂಡ: ಚೆನ್ನೈ ಸೂಪರ್ ಕಿಂಗ್ಸ್

ಏಡೆನ್ ಮಾರ್ಕರಮ್

ಮಾರಾಟವಾದ ಮೊತ್ತ: ₹2 ಕೋಟಿ

ಖರೀದಿಸಿದ ತಂಡ: ಲಖನೌ ಸೂಪರ್‌ಜೈಂಟ್ಸ್

ಮೊದಲ ಸುತ್ತಿನಲ್ಲಿ ಕನ್ನಡಿಗ ದೇವದತ್ತ ಪಡಿಕ್ಕಲ್ ಅನ್‌ಸೋಲ್ಡ್ 

ಹ್ಯಾರಿ ಬ್ರೂಕ್

ಮಾರಾಟವಾದ ಮೊತ್ತ: ₹6.25 ಕೋಟಿ

ಖರೀದಿಸಿದ ತಂಡ: ಡೆಲ್ಲಿ ಕ್ಯಾಪಿಟಲ್ಸ್

ಈವರೆಗೆ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಟಾಪ್ 5 ಆಟಗಾರರು 

ರಿಷಭ್ ಪಂತ್

ಮಾರಾಟವಾದ ಮೊತ್ತ: ₹27 ಕೋಟಿ

ಖರೀದಿಸಿದ ತಂಡ: ಲಖನೌ ಸೂಪರ್‌ಜೈಂಟ್ಸ್

ಶ್ರೇಯಸ್ ಅಯ್ಯರ್

ಮಾರಾಟವಾದ ಮೊತ್ತ: ₹26.75 ಕೋಟಿ

ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್

ಅರ್ಷದೀಪ್ ಸಿಂಗ್

ಮಾರಾಟವಾದ ಮೊತ್ತ: ₹18 ಕೋಟಿ

ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್

ಯಜುವೇಂದ್ರ ಚಾಹಲ್

ಮಾರಾಟವಾದ ಮೊತ್ತ: ₹18 ಕೋಟಿ

ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್

ಜೋಸ್ ಬಟ್ಲರ್

ಮಾರಾಟವಾದ ಮೊತ್ತ: ₹15.75 ಕೋಟಿ

ಖರೀದಿಸಿದ ತಂಡ: ಗುಜರಾತ್ ಟೈಟನ್ಸ್

ಮೊಹಮ್ಮದ್ ಸಿರಾಜ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹12.25 ಕೋಟಿ

ಖರೀದಿಸಿದ ತಂಡ: ಗುಜರಾತ್ ಟೈಟನ್ಸ್

ಕೆ.ಎಲ್.ರಾಹುಲ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹14 ಕೋಟಿ

ಖರೀದಿಸಿದ ತಂಡ: ಡೆಲ್ಲಿ ಕಾಪಿಟಲ್ಸ್

ಲಿಯಾಮ್ ಲಿವಿಂಗ್‌ಸ್ಟೋನ್

ಮಾರಾಟವಾದ ಮೊತ್ತ: ₹8.75 ಕೋಟಿ

ಖರೀದಿಸಿದ ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು

ಯಜುವೇಂದ್ರ ಚಾಹಲ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹18 ಕೋಟಿ

ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್

ಡೇವಿಡ್ ಮಿಲ್ಲರ್

ಮೂಲ ಬೆಲೆ: ₹1.5 ಕೋಟಿ

ಮಾರಾಟವಾದ ಮೊತ್ತ: ₹7.5 ಕೋಟಿ

ಖರೀದಿಸಿದ ತಂಡ: ಲಖನೌ ಸೂಪರ್‌ಜೈಂಟ್ಸ್

ಮೊಹಮ್ಮದ್ ಶಮಿ

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹10 ಕೋಟಿ

ಖರೀದಿಸಿದ ತಂಡ: ಸನ್‌ರೈಸರ್ಸ್ ಹೈದರಾಬಾದ್

ಪಂತ್‌ಗೆ ಜಾಕ್‌ಪಾಟ್ 

ಐಪಿಎಲ್ ಹರಾಜಿನಲ್ಲಿ ನಿರೀಕ್ಷೆಯಂತೆಯೇ ರಿಷಭ್ ಪಂತ್ ಭಾರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ. ರಿಷಭ್ ಪಂತ್ ಅವರನ್ನು ₹27 ಕೋಟಿಗೆ ಲಖನೌ ಸೂಪರ್‌ಜೈಂಟ್ಸ್ ಖರೀದಿಸಿದೆ.

ಕೊನೆಯ ಹಂತದಲ್ಲಿ ಪಂತ್ ಖರೀದಿಗೆ ಲಖನೌ ₹27 ಕೋಟಿಯ ಭಾರಿ ಬಿಡ್ ಸಲ್ಲಿಸಿತು. ಈ ವೇಳೆ 'ರೈಟ್ ಟು ಮ್ಯಾಚ್' ಕಾರ್ಡ್ ಬಳಕೆ ಮಾಡಲು ಡೆಲ್ಲಿ ಕ್ಯಾಪಿಟಲ್ಸ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಪಂತ್ ಲಖನೌ ಪಾಲಾದರು.

ರಿಷಭ್ ಪಂತ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹27 ಕೋಟಿ

ಖರೀದಿಸಿದ ತಂಡ: ಲಖನೌ ಸೂಪರ್‌ಜೈಂಟ್ಸ್

ಮಿಚೆಲ್ ಸ್ಟಾರ್ಕ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹11.75 ಕೋಟಿ

ಖರೀದಿಸಿದ ತಂಡ: ಡೆಲ್ಲಿ ಕ್ಯಾಪಿಟಲ್ಸ್

ಜೋಸ್ ಬಟ್ಲರ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹15.75 ಕೋಟಿ

ಖರೀದಿಸಿದ ತಂಡ: ಗುಜರಾತ್ ಟೈಟನ್ಸ್

ಶ್ರೇಯಸ್ ಅಯ್ಯರ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹26.75 ಕೋಟಿ

ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್

₹26.75 ಕೋಟಿಗೆ ಪಂಜಾಬ್ ತೆಕ್ಕೆಗೆ ಶ್ರೇಯಸ್ ಅಯ್ಯರ್

ತೀವ್ರ ಜಿದ್ದಾಜಿದ್ದಿನಿಂದ ಸಾಗಿದ ಹರಾಜು ಪ್ರಕ್ರಿಯೆಯಲ್ಲಿ ಶ್ರೇಯಸ್ ಅಯ್ಯರ್ ₹26.75 ಕೋಟಿಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.

ಕಗಿಸೋ ರಬಾಡ

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹10.75 ಕೋಟಿ

ಖರೀದಿಸಿದ ತಂಡ: ಗುಜರಾತ್ ಟೈಟನ್ಸ್

ದಿನದ ಮೊದಲ ಬಿಡ್ ಅರ್ಷದೀಪ್ ಸಿಂಗ್

ಮೂಲ ಬೆಲೆ: ₹2 ಕೋಟಿ

ಮಾರಾಟವಾದ ಮೊತ್ತ: ₹18 ಕೋಟಿ

ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್

'ರೈಟ್ ಟು ಮ್ಯಾಚ್' ಅಡಿಯಲ್ಲಿ ₹18 ಕೋಟಿ ನೀಡಿ ಅರ್ಷದೀಪ್ ಸಿಂಗ್ ಅವರನ್ನು ಪಂಜಾಬ್ ಕಿಂಗ್ಸ್ ಖರೀದಿಸಿದೆ.

ಹರಾಜು ಪ್ರಕ್ರಿಯೆಯಲ್ಲಿ ಅರ್ಷದೀಪ್ ಅವರ ಖರೀದಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಯಿತು. ಸನ್‌ರೈಸರ್ಸ್ ಹೈದರಾಬಾದ್ ಗರಿಷ್ಠ ₹18 ಕೋಟಿಗೆ ಬಿಡ್ ಸಲ್ಲಿಸಿತ್ತು. ಆದರೆ 'ರೈಟ್ ಟು ಮ್ಯಾಚ್' ಅಡಿಯಲ್ಲಿ ಅರ್ಷದೀಪ್ ಅವರನ್ನು ಖರೀದಿಸುವಲ್ಲಿ ಪಂಜಾಬ್ ಕಿಂಗ್ಸ್ ಯಶಸ್ವಿಯಾಯಿತು.

ಹರಾಜಿನಲ್ಲಿರುವ ಪ್ರಮುಖರು

ರಿಷಭ್ ಪಂತ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಇಂಗ್ಲೆಂಡ್‌ನ ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್‌ಸ್ಟೋನ್, ನ್ಯೂಜಿಲೆಂಡ್‌ನ ರಚಿನ್ ರವೀಂದ್ರ, ಬೌಲರ್‌ಗಳಾದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್, ಖಲೀಲ್ ಅಹಮದ್, ದೀಪಕ್ ಚಾಹರ್, ಆವೇಶ್ ಖಾನ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಆರ್‌. ಅಶ್ವಿನ್, ತನುಷ್ ಕೋಟ್ಯಾನ್, ವಾಷಿಂಗ್ಟನ್ ಸುಂದರ್, ಆಸ್ಟ್ರೇಲಿಯಾದ ಮಾರ್ಕಸ್ ಸ್ಟೊಯಿನಿಸ್, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಸೇರಿ ಹಲವರಿಗೆ ಹೆಚ್ಚಿನ ಬೇಡಿಕೆ ಕುದುರುವ ನಿರೀಕ್ಷೆ ಇದೆ. 

ಪಂತ್‌ಗೆ ಸಿಗುವುದು ಜಾಕ್‌ಪಾಟ್?

ಎರಡು ವರ್ಷಗಳ ಹಿಂದೆ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು ದೀರ್ಘ ಸಮಯ ಚಿಕಿತ್ಸೆ ಪಡೆದಿದ್ದ ರಿಷಭ್ ಹೋದ ವರ್ಷದ ಐಪಿಎಲ್‌ನಲ್ಲಿ ಅಂಗಳಕ್ಕೆ ಮರಳಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ಆಡಿದ್ದರು. ನಂತರ ಟಿ20 ವಿಶ್ವಕಪ್ ಟೂರ್ನಿ ಹಾಗೂ ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿಯೂ ಅಮೋಘವಾಗಿ ಆಡಿದ್ದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರ್ಯಾಂಚೈಸಿಯು ಈಚೆಗೆ ರಿಟೇನರ್ಸ್‌ ಪಟ್ಟಿಯಿಂದ ಅವರನ್ನು ಕೈಬಿಟ್ಟಿತ್ತು. ಆದ್ದರಿಂದ ಅವರನ್ನು ಖರೀದಿಸಲು ಎಲ್ಲ ತಂಡಗಳೂ ಪೈಪೋಟಿಗಿಳಿಯುವ ಸಾಧ್ಯತೆ ಇದೆ. ಡೆಲ್ಲಿ ತಂಡವೂ ರೈಟ್‌ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ಪ್ರಯೋಗಿಸಿ ಮರಳಿ ಪಂತ್ ಅವರನ್ನು ಖರೀದಿಸಿದರೂ ಅಚ್ಚರಿಯಿಲ್ಲ. 

₹ 25 ಕೋಟಿಗಿಂತಲೂ ಹೆಚ್ಚಿನ ಮೌಲ್ಯ ಪಂತ್ ಅವರಿಗೆ ದಕ್ಕುವ ಸಾಧ್ಯತೆ ಕೆಲವು ಮಾಜಿ ಕ್ರಿಕೆಟಿಗರು ಈಗಾಗಲೇ ವ್ಯಕ್ತಪಡಿಸಿದ್ದಾರೆ. ನಾಯಕತ್ವ, ವಿಕೆಟ್‌ಕೀಪಿಂಗ್ ಮತ್ತು ಬ್ಯಾಟಿಂಗ್ ವಿಭಾಗಗಳಲ್ಲಿ ಉಪಯುಕ್ತ ಕಾಣಿಕೆ ನೀಡಬಲ್ಲ ರಿಷಭ್ ಅವರಿಗೆ ಈ ಮೌಲ್ಯ ಲಭಿಸಿದರೂ ಅಚ್ಚರಿಯೇನಿಲ್ಲ.

577 ಆಟಗಾರರ ಹರಾಜು

ಭಾನುವಾರ ಮತ್ತು ಸೋಮವಾರ ಇಲ್ಲಿ ಮುಂದಿನ ವರ್ಷದ ಐಪಿಎಲ್‌ನಲ್ಲಿ ಆಡುವ 10 ತಂಡಗಳು ಆಟಗಾರರನ್ನು ಖರೀದಿಸಲಿವೆ. ಈ ಮೆಗಾ ಬಿಡ್‌ ಪ್ರಕ್ರಿಯೆಯಲ್ಲಿ  ಒಟ್ಟು  577 ಆಟಗಾರರು ಭಾಗವಹಿಸಲಿದ್ದಾರೆ. ಅದರಲ್ಲಿ 204 ಆಟಗಾರರ ಖಾಲಿ ಸ್ಥಾನಗಳಿಗೆ ಆಟಗಾರರ ಖರೀದಿ ನಡೆಯುವ ಸಾಧ್ಯತೆ ಇದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆಗೆ ಮರುಭೂಮಿ ನಾಡಿನ ನಗರಿ ಸಿದ್ಧವಾಗಿದೆ. ದೆಹಲಿ ಹುಡುಗ ರಿಷಭ್ ಪಂತ್  ಅವರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯಾವೆಲ್ಲ ಆಟಗಾರರನ್ನು ಖರೀದಿಸಲಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.