ADVERTISEMENT

ನವೆಂಬರ್‌ ಕೊನೆಯಲ್ಲಿ ರಿಯಾದ್‌ನಲ್ಲಿ ಐಪಿಎಲ್‌ ಹರಾಜು ಪ್ರಕ್ರಿಯೆ

ಪಿಟಿಐ
Published 4 ನವೆಂಬರ್ 2024, 14:04 IST
Last Updated 4 ನವೆಂಬರ್ 2024, 14:04 IST
ಐಪಿಎಲ್‌
ಐಪಿಎಲ್‌   

ನವದೆಹಲಿ: ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌) ಆಟಗಾರರ ಹರಾಜು ಪ್ರಕ್ರಿಯೆ ಈ ತಿಂಗಳ ಅಂತ್ಯದಲ್ಲಿ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ನಡೆಯಲಿದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಮೂಲಗಳು ಸೋಮವಾರ ಖಚಿತಪಡಿಸಿವೆ.

ಐಪಿಎಲ್‌ಗೆ ಆಟಗಾರರ ಹರಾಜು ಪ್ರಕ್ರಿಯೆ ರಿಯಾದ್‌ನಲ್ಲಿ ನಡೆಯಲಿದ್ದು, ಫ್ರಾಂಚೈಸಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ನವೆಂಬರ್ 24 ಮತ್ತು 25ರಂದು ಈ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ ಎಂದು ಬಿಸಿಸಿಐನ ಮೂಲವೊಂದು ಪಿಟಿಐಗೆ ತಿಳಿಸಿದೆ.

ಈ ಬಾರಿಯ ಹರಾಜು ಪ್ರಕ್ರಿಯೆಗೆ ಹೆಚ್ಚಿನ ಮಹತ್ವ ಬಂದಿದ್ದು, ಭಾರತ ತಂಡದಲ್ಲಿ ಆಡಿರುವ ರಿಷಭ್ ಪಂತ್‌, ಕೆ.ಎಲ್‌.ರಾಹುಲ್, ಶ್ರೇಯಸ್‌ ಅಯ್ಯರ್, ಅರ್ಷದೀಪ್ ಸಿಂಗ್‌ ಅಂಥ ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳಿಗೆ ಅವಕಾಶವಿದ.

ADVERTISEMENT

ಒಟ್ಟು 10 ಫ್ರಾಂಚೈಸಿಗಳಿಗೆ ಒಟ್ಟು 641.5 ಕೋಟಿ ವೆಚ್ಚ ಮಾಡಲು ಅವಕಾಶವಿದೆ. ವಿವಿಧ ತಂಡಗಳಿಗೆ 204 ಆಟಗಾರರನ್ನು ಪಡೆದುಕೊಳ್ಳಲು ಅವಕಾಶವಿದೆ. 204 ಆಟಗಾರರಲ್ಲಿ ಹೊರದೇಶಗಳ 70 ಮಂದಿ ಆಟಗಾರರು ಇದ್ದಾರೆ.

ಆಟಗಾರರನ್ನು ಉಳಿಸಿಕೊಳ್ಳಲು ಅಂತಿಮ ಗಡುವು ಮುಗಿದಿದ್ದು 10 ಫ್ರಾಂಚೈಸಿಗಳು 46 ಆಟಗಾರರನ್ನು ಉಳಿಸಿಕೊಂಡಿವೆ. ಇದಕ್ಕಾಗಿ 558.5 ಕೋಟಿ ವೆಚ್ಚ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.