ADVERTISEMENT

ಇಂಡಿಯನ್ ಪ್ರೀಮಿಯರ್ ಲೀಗ್‌ನ ದುಬಾರಿ ಆಟಗಾರರ ಪಟ್ಟಿಯಲ್ಲಿರುವುದು ಭಾರತದ ಇಬ್ಬರೇ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2023, 11:20 IST
Last Updated 19 ಡಿಸೆಂಬರ್ 2023, 11:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮುಂದಿನ ವರ್ಷ ಮಾರ್ಚ್‌ನಲ್ಲಿ ನಡೆಯಲಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್ ಟೂರ್ನಿಗಾಗಿ ದುಬೈನಲ್ಲಿ ಇಂದು ಮಿನಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ.

ಇತ್ತೀಚೆಗಷ್ಟೇ ಮುಗಿದ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾ ತಂಡದ ಆಟಗಾರರ ಖರೀದಿಗೆ ಫ್ರಾಂಚೈಸಿಗಳು ಒಲವು ತೋರಿವೆ. ಅದರಂತೆ ಆಸಿಸ್‌ನ ಪ್ರಮುಖ ವೇಗಿಗಳಾದ ಮಿಚೇಲ್‌ ಸ್ಟಾರ್ಕ್‌ ಮತ್ತು ಪ್ಯಾಟ್‌ ಕಮಿನ್ಸ್‌ ಅವರು ₹ 20 ಕೋಟಿಗೂ ಅಧಿಕ ಮೊತ್ತಕ್ಕೆ ಬಿಕರಿಯಾಗುವ ಮೂಲಕ ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರರು ಎನಿಸಿಕೊಂಡಿದ್ದಾರೆ.

ಈ ಇಬ್ಬರಲ್ಲದೆ ನ್ಯೂಜಿಲೆಂಡ್‌ನ ಡೆರಿಲ್‌ ಮಿಚೇಲ್‌, ಭಾರತದ ಹರ್ಷಲ್‌ ಪಟೇಲ್‌ ಮತ್ತು ವೆಸ್ಟ್‌ ಇಂಡೀಸ್‌ನ ಅಲ್ಜಾರಿ ಜೋಸೆಫ್‌ ಮಾತ್ರವೇ ಈ ಬಾರಿಯ ಹರಾಜಿನಲ್ಲಿ (ಸಂಜೆ 4 ಗಂಟೆ ವರೆಗಿನ ಮಾಹಿತಿ ಪ್ರಕಾರ) ₹ 10 ಕೋಟಿಗಿಂತ ಹೆಚ್ಚಿನ ಮೊತ್ತ ಜೇಬಿಗಿಳಿಸಿಕೊಂಡಿದ್ದಾರೆ.

ADVERTISEMENT

ಐಪಿಎಲ್‌ ಹರಾಜು ಇತಿಹಾಸದ ಅಗ್ರ 10 ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
01. ಮಿಚೇಲ್‌ ಸ್ಟಾರ್ಕ್‌ (ಆಸ್ಟ್ರೇಲಿಯಾ):
ಕೋಲ್ಕತ್ತ ನೈಟ್‌ರೈಡರ್ಸ್‌ – ₹ 24.75 ಕೋಟಿ (2023)
02. ಪ್ಯಾಟ್‌ ಕಮಿನ್ಸ್‌ (ಆಸ್ಟ್ರೇಲಿಯಾ): ಸನ್‌ರೈಸರ್ಸ್‌ ಹೈದರಾಬಾದ್‌ – ₹ 20.50 ಕೋಟಿ (2023)
03. ಸ್ಯಾಮ್‌ ಕರನ್‌ (ಇಂಗ್ಲೆಂಡ್‌): ಪಂಜಾಬ್‌ ಕಿಂಗ್ಸ್‌ – ₹ 18.50 ಕೋಟಿ (2022)
04. ಕ್ಯಾಮರೂನ್‌ ಗ್ರೀನ್‌ (ಆಸ್ಟ್ರೇಲಿಯಾ): ಮುಂಬೈ ಇಂಡಿಯನ್ಸ್‌ – ₹ 17.50 ಕೋಟಿ (2022)
05. ಬೆನ್‌ ಸ್ಟೋಕ್ಸ್‌ (ಇಂಗ್ಲೆಂಡ್‌): ಚೆನ್ನೈ ಸೂಪರ್‌ಕಿಂಗ್ಸ್‌ – ₹ 16.25 ಕೋಟಿ (2022)
06. ಕ್ರಿಸ್‌ ಮೊರಿಸ್‌ (ದಕ್ಷಿಣ ಆಫ್ರಿಕಾ): ರಾಜಸ್ಥಾನ ರಾಯಲ್ಸ್‌ ₹ 16.25 ಕೋಟಿ (2021)
07. ಯುವರಾಜ್ ಸಿಂಗ್‌ (ಭಾರತ): ಡೆಲ್ಲಿ ಡೇರ್‌ಡೆವಿಲ್ಸ್‌ – ₹ 16 ಕೋಟಿ (2015)
08. ನಿಕೋಲಸ್‌ ಪೂರನ್‌ (ವೆಸ್ಟ್‌ಇಂಡೀಸ್‌): ಲಖನೌ ಸೂಪರ್‌ಜೈಂಟ್ಸ್‌ – ₹ 16 ಕೋಟಿ (2022)
09. ಪ್ಯಾಟ್‌ ಕಮಿನ್ಸ್‌ (ಆಸ್ಟ್ರೇಲಿಯಾ): ಕೋಲ್ಕತ್ತ ನೈಟ್‌ರೈಡರ್ಸ್‌ – ₹ 15.50 ಕೋಟಿ (2020)
10. ಇಶಾನ್ ಕಿಶನ್‌ (ಭಾರತ): ಮುಂಬೈ ಇಂಡಿಯನ್ಸ್‌ – ₹ 15.25 ಕೋಟಿ (2021)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.