ADVERTISEMENT

ಐಪಿಎಲ್: ಇಂಪ್ಯಾಕ್ಟ್‌ ಪ್ಲೇಯರ್ ಮುಂದುವರಿಕೆ

ಪಿಟಿಐ
Published 28 ಸೆಪ್ಟೆಂಬರ್ 2024, 21:41 IST
Last Updated 28 ಸೆಪ್ಟೆಂಬರ್ 2024, 21:41 IST
IPL Logo
IPL Logo   

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಮುಂದಿನ ವರ್ಷದ ಟೂರ್ನಿಯಲ್ಲಿಯೂ ಮುಂದುವರಿಸಲು ನಿರ್ಧರಿಸಲಾಗಿದೆ.

ಶನಿವಾರ ಇಲ್ಲಿ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.  2023ರ ಐಪಿಎಲ್ ಟೂರ್ನಿಯಲ್ಲಿ ಈ ನಿಯಮವನ್ನು ಜಾರಿ ಮಾಡಲಾಗಿತ್ತು. 

ಆದರೆ ಹೋದ ವರ್ಷದ ಟೂರ್ನಿಯ ಸಂದರ್ಭದಲ್ಲಿ ಈ ಟೂರ್ನಿಗೆ ಕೆಲವು  ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ನಿಯಮದ ಪರವಾಗಿ ಮಾತನಾಡಿದ್ದರು. ಕಳೆದ ಜುಲೈನಲ್ಲಿ ನಡೆದಿದ್ದ ಫ್ರ್ಯಾಂಚೈಸಿ ಮಾಲೀಕರ ಸಭೆಯ ಲ್ಲಿಯೂ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ADVERTISEMENT

‘ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದಾಗಿ ಆಲ್‌ರೌಂಡರ್‌ಗಳ ಮಹತ್ವ ಕಡಿಮೆಯಾಗಿದೆ’ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. 

‘ಈ ನಿಯಮವನ್ನು ರದ್ದು ಮಾಡಲು ಸಮಂಜಸವಾದ ಕಾರಣ ಕಾಣುತ್ತಿಲ್ಲ. ಐಪಿಎಲ್ ಪಂದ್ಯಗಳಲ್ಲಿ ಹೊಸ ಆಯಾಮ ನೀಡುವಲ್ಲಿ ಇದು ಸಹಕಾರಿಯಾಗಿದೆ. ಪ್ರೇಕ್ಷಕರಿಗೂ ಇದು ಮನರಂಜನೆ ನೀಡುತ್ತಿದೆ’ ಎಂದು ಸಭೆಯ ನಂತರ ಸದಸ್ಯರೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.