ADVERTISEMENT

ನ.24ರಿಂದ ಜೆದ್ದಾದಲ್ಲಿ ಐಪಿಎಲ್ ಮೆಗಾ ಬಿಡ್

ಪಿಟಿಐ
Published 6 ನವೆಂಬರ್ 2024, 0:39 IST
Last Updated 6 ನವೆಂಬರ್ 2024, 0:39 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ನವದೆಹಲಿ: ಸೌದಿ ಅರೇಬಿಯಾದ ಜೆದ್ದಾದಲ್ಲಿ ಇದೇ 24 ಮತ್ತು 25 ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮೆಗಾ ಹರಾಜು ನಡೆಯಲಿದೆ. 

ಈ ಬಿಡ್ ಪ್ರಕ್ರಿಯೆಯಲ್ಲಿ ಒಟ್ಟು 1524 ಕ್ರಿಕೆಟಿಗರು ಕಣದಲ್ಲಿದ್ದಾರೆ. ಅವರಲ್ಲಿ 1165 ಮಂದಿ ಭಾರತದ ಆಟಗಾರರಿದ್ದಾರೆ. ಈ ಪಟ್ಟಿಯಲ್ಲಿ 320 ಮಂದಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದವರು ಮತ್ತು 1224 ಮಂದಿ ಅನ್‌ಕ್ಯಾಪ್ಡ್ ಆಟಗಾರರು ಇದ್ದಾರೆ. 30 ಅಸೋಸಿಯೇಟೆಡ್ ರಾಷ್ಟ್ರಗಳ ಆಟಗಾರರು ಕೂಡ ಇದರಲ್ಲಿದ್ದಾರೆ. ಅದರಲ್ಲಿ ಅಮೆರಿಕ, ನೆದರ್ಲೆಂಡ್ಸ್, ಕೆನಡಾ, ಇಟಲಿ, ಯುಎಇ ಮತ್ತು ಸ್ಕಾಟ್ಲೆಂಡ್ ಆಟಗಾರರು ಸೇರಿದ್ದಾರೆ.

ಕ್ಯಾಪ್ಡ್‌ ಆಟಗಾರರಲ್ಲಿ ಭಾರತದ 48 ಮಂದಿ ಇದ್ದಾರೆ. 965 ಅನ್‌ಕ್ಯಾಪ್ಡ್ ಆಟಗಾರರೂ ಇದ್ದಾರೆ. ಸೋಮವಾರ ಆಟಗಾರರ ನೋಂದಣಿ ಮುಕ್ತಾಯವಾಗಿದೆ. ಅದರಲ್ಲಿ ವಿದೇಶದ 409 ಆಟಗಾರರು ಇದ್ದಾರೆ. 

ADVERTISEMENT

ಎರಡನೇ ಬಾರಿ ಐಪಿಎಲ್ ಬಿಡ್ ಪ್ರಕ್ರಿಯೆಯು ವಿದೇಶದಲ್ಲಿ ನಡೆಯುತ್ತಿದೆ. ಹೋದ ವರ್ಷ ದುಬೈನಲ್ಲಿ ಆಯೋಜನೆಯಾಗಿತ್ತು. 

ಐಪಿಎಲ್‌ನಲ್ಲಿರುವ ಪ್ರತಿ ತಂಡವೂ ಗರಿಷ್ಠ 25 ಆಟಗಾರರನ್ನು (ರಿಟೇನಡ್‌ ಆಟಗಾರರನ್ನು ಸೇರಿಸಿ) ಸೇರಿಸಿಕೊಳ್ಳಬಹುದು. ಈ ಬಾರಿ ಬಿಡ್‌ನಲ್ಲಿ 204 ಆಟಗಾರರ ಖರೀದಿಗೆ ಅವಕಾಶವಿದೆ. ಸದ್ಯ ಎಲ್ಲ 10 ತಂಡಗಳು ಒಟ್ಟು 46 ಆಟಗಾರರನ್ನು ರಿಟೇನ್ ಮಾಡಿಕೊಂಡಿವೆ. 

ಈ ಬಿಡ್‌ನಲ್ಲಿ ರಿಷಭ್ ಪಂತ್, ಕೆ.ಎಲ್. ರಾಹುಲ್ ಸೇರಿದಂತೆ ಹಲವು ಖ್ಯಾತನಾಮ ಆಟಗಾರರು ಲಭ್ಯರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.