ADVERTISEMENT

IPL Auction 2022 LIVE: ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯ; ಫ್ರಾಂಚೈಸ್‌ಗಳ ಪರ್ಸ್‌ನಲ್ಲಿ ಇನ್ನೆಷ್ಟು ಹಣವಿದೆ?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) 15ನೇ ಆವೃತ್ತಿಯ ಟೂರ್ನಿಗಾಗಿ ಬೆಂಗಳೂರಿನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಯಾವ ತಂಡದಲ್ಲಿ ಎಷ್ಟು ಆಟಗಾರರು ಇದ್ದಾರೆ, ಯಾವ ಫ್ರಾಂಚೈಸ್ ಎಷ್ಟು ಹಣ ಉಳಿಸಿಕೊಂಡಿದೆ ಎಂಬ ವಿವರ ಇಲ್ಲಿದೆ.

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 15:52 IST
Last Updated 13 ಫೆಬ್ರುವರಿ 2022, 15:52 IST

ಯಾವ ಫ್ರಾಂಚೈಸ್‌ನಲ್ಲಿ ಎಷ್ಟು ಆಟಗಾರರು?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) 15ನೇ ಆವೃತ್ತಿಯ ಟೂರ್ನಿಗಾಗಿ ಬೆಂಗಳೂರಿನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಆಟಗಾರರ ಮೇಲೆ ಕೋಟಿ ಕೋಟಿ ಹಣ ಸುರಿದಿವೆ.

ಚೆನ್ನೈ ಸೂಪರ್‌ ಕಿಂಗ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಪಂಜಾಬ್ ಕಿಂಗ್ಸ್‌ ಫ್ರಾಂಚೈಸ್‌ಗಳು ತಲಾ 21 ಆಟಗಾರರನ್ನು ಹೊಂದಿವೆ. ಸನ್‌ರೈಸರ್ಸ್‌ ಹೈದರಾಬಾದ್ ಮತ್ತು ಲಖನೌ ಸೂಪರ್‌ ಜೈಂಟ್ಸ್‌ ಫ್ರಾಂಚೈಸ್‌ಗಳು ಕ್ರಮವಾಗಿ 20, 19 ಆಟಗಾರರನ್ನು ಹೊಂದಿವೆ. ಮುಂಬೈ ಇಂಡಿಯನ್ಸ್‌, ಕೋಲ್ಕತ್ತ ನೈಟ್‌ ರೈಡರ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಲಾ 18 ಆಟಗಾರರನ್ನು ಖರೀದಿಸಿವೆ. ಉಳಿದಂತೆ, ಗುಜರಾತ್ ಟೈಟಾನ್ಸ್‌ ಬಳಿ 17, ರಾಜಸ್ಥಾನ ರಾಯಲ್ಸ್‌ ಬಳಿ 14 ಆಟಗಾರರು ಇದ್ದಾರೆ.

ಫ್ರಾಂಚೈಸ್‌ಗಳ ಪರ್ಸ್‌ನಲ್ಲಿ ಇನ್ನೆಷ್ಟು ಹಣವಿದೆ?

ಸದ್ಯ 2022ರ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಕೋಟಿಕೋಟಿ ಹಣ ಸುರಿದು ಆಟಗಾರರನ್ನು ಖರೀದಿಸಿರುವ  ಫ್ರಾಂಚೈಸ್‌ಗಳು, ಪರ್ಸ್‌ಗಳಲ್ಲಿಯೂ ಹಣ ಉಳಿಸಿಕೊಂಡಿವೆ.

ADVERTISEMENT

ಯಾವ ಫ್ರಾಂಚೈಸ್‌ ಬಳಿ ಎಷ್ಟು ಹಣ?

 ಫ್ರಾಂಚೈಸ್‌ ಹರಾಜಿಗೂ ಮುನ್ನ ಹರಾಜಿನ ಬಳಿಕ
ಕೋಲ್ಕತ್ತ ನೈಟ್‌ ರೈಡರ್ಸ್‌ ₹ 48 ಕೋಟಿ ₹ 8.85 ಕೋಟಿ
ಗುಜರಾತ್ ಟೈಟಾನ್ಸ್‌ ₹ 52 ಕೋಟಿ ₹ 8.65 ಕೋಟಿ
ರಾಜಸ್ಥಾನ ರಾಯಲ್ಸ್‌ ₹ 62 ಕೋಟಿ ₹ 8.60 ಕೋಟಿ
ಚೆನ್ನೈ ಸೂಪರ್‌ಕಿಂಗ್ಸ್‌ ₹ 48 ಕೋಟಿ ₹ 7.15 ಕೋಟಿ
ಪಂಜಾಬ್ ಕಿಂಗ್ಸ್‌ ₹ 72 ಕೋಟಿ ₹ 5.30 ಕೋಟಿ
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ₹ 57 ಕೋಟಿ ₹ 5 ಕೋಟಿ
ಸನ್‌ರೈಸರ್ಸ್‌ ಹೈದರಾಬಾದ್ ₹ 68 ಕೋಟಿ ₹ 2.60 ಕೋಟಿ
ಲಖನೌ ಸೂಪರ್‌ ಜೈಂಟ್ಸ್‌ ₹ 59 ಕೋಟಿ ₹ 2.20 ಕೋಟಿ
ಮುಂಬೈ ಇಂಡಿಯನ್ಸ್‌ ₹ 48 ಕೋಟಿ ₹ 2.15 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್‌ ₹ 47.5 ಕೋಟಿ ₹ 1.30 ಕೋಟಿ

ಬಿಡ್ಡಿಂಗ್ ಪ್ರಕ್ರಿಯೆ ಮುಕ್ತಾಯ

ಅರುಣೈ ಸಿಂಗ್‌ ಅವರು ಐಪಿಎಲ್‌ ಮೆಗಾ ಹರಾಜು ಪ್ರಕ್ರಿಯೆಯ ಕೊನೆಯ ಆಟಗಾರನಾಗಿ ಮಾರಾಟಗೊಂಡರು. ರಾಜಸ್ಥಾನ ರಾಯಲ್ಸ್  ಫ್ರಾಂಚೈಸ್‌, ಸಿಂಗ್ ಅವರನ್ನು ₹ 20 ಲಕ್ಷ ನೀಡಿ ತನ್ನ ಬಳಗಕ್ಕೆ ಸೇರಿಸಿಕೊಂಡಿದೆ.

ಇದರೊಂದಿಗೆ ಬಿಡ್ಡಿಂಗ್ ಪ್ರಕ್ರಿಯೆ ಮುಕ್ತಾಯವಾಗಿದೆ.

ಕೆಕೆಆರ್ ಪಾಲಾದ ರವಿಕುಮಾರ್ ಸಮರ್ಥ್, ಅಭಿಜಿತ್, ಅಶೋಕ್ ಶರ್ಮಾ

ರವಿಕುಮಾರ್ ಸಮರ್ಥ್‌ಗೆ ₹20 ಲಕ್ಷ, ಅಭಿಜಿತ್ ತೋಮರ್‌ಗೆ ₹40 ಲಕ್ಷ, ಹಾಗೂ ಅಶೋಕ್ ಶರ್ಮಾಗೆ ₹55 ಲಕ್ಷ ನೀಡಿ ಕೆಕೆಆರ್‌ ತಂಡ ಖರೀದಿಸಿದೆ. 

ಕೆಕೆಆರ್‌ ಪಾಲಾದ ಚಾಮಿಕಾ ಕರುಣಾರತ್ನೆ, ಬಾಬಾ ಇಂದ್ರಜಿತ್‌

ಶ್ರೀಲಂಕಾ ಕ್ರಿಕೆಟಿಗ ಚಾಮಿಕಾ ಕರುಣಾರತ್ನೆಗೆ ₹50 ಲಕ್ಷ ಮತ್ತು ಭಾರತದ ಬಾಬಾ ಇಂದ್ರಜಿತ್‌ಗೆ ₹20 ಲಕ್ಷ ನೀಡಿ ಕೆಕೆಆರ್ ತಂಡ ಖರೀದಿ ಮಾಡಿದೆ. 

ಬಿಕರಿಯಾಗದ ಮಾರ್ಟಿನ್ ಗಪ್ಟಿಲ್

ನ್ಯೂಜಿಲೆಂಡ್‌ನ ಸ್ಫೋಟಕ ಆರಂಭಿಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಅವರು ಐಪಿಎಲ್‌ ಹರಾಜು ಪ್ರಕ್ರಿಯೆಯಲ್ಲಿ ಬಿಕರಿಯಾಗದೆ ಉಳಿದಿದ್ದಾರೆ. ಅವರು ಕೆಲ ದಿನಗಳಿಂದ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. 

ರಿಲೆ ಮೆರೆಡಿತ್‌ಗಾಗಿ ₹1 ಕೋಟಿ ಹೂಡಿದ ಮುಂಬೈ

ಆಸ್ಟ್ರೇಲಿಯಾ ಆಟಗಾರ ರಿಲೆ ಮೆರೆಡಿತ್‌ ಅವರಿಗೆ ₹1 ಕೋಟಿ ನೀಡಿ ಮುಂಬೈ ಇಂಡಿಯನ್ಸ್ ಖರೀದಿಸಿದೆ. 

ಗುಜರಾತ್ ಟೈಟಾನ್ಸ್ ಪಾಲಾದ ಅಲ್ಜಾರಿ ಜೋಸೆಫ್

ವೆಸ್ಟ್ ಇಂಡೀಸ್ ಆಟಗಾರ ಅಲ್ಜಾರಿ ಜೋಸೆಫ್‌ಗೆ ₹2.4 ಕೋಟಿ ನೀಡಿ ಗುಜರಾತ್ ಟೈಟಾನ್ಸ್ ಖರೀದಿಸಿದೆ. 

ಹೈದರಾಬಾದ್ ತೆಕ್ಕೆಗೆ ಸೀನ್ ಅಬಾಟ್‌

ಆಸ್ಟ್ರೇಲಿಯಾದ ಆಲೌರೌಂಡರ್‌ ಸೀನ್ ಅಬಾಟ್‌ಗೆ ₹2.4 ಕೋಟಿ ನೀಡಿ ಸನ್‌ರೈಸರ್ಸ್‌ ಹೈದರಾಬಾದ್‌ ಖರೀದಿ ಮಾಡಿದೆ.

ವೈಭವ್ ಅರೋರಾಗೆ ಪಂಜಾಬ್ ಕಿಂಗ್ಸ್‌ ₹2 ಕೋಟಿ ನೀಡಿ ಖರೀದಿಸಿದೆ.

ಸಿಎಸ್‌ಕೆ ಪಾಲಾದ ಪ್ರಶಾಂತ್ ಸೋಲಂಕಿ

ಪ್ರಶಾಂತ್ ಸೋಲಂಕಿಗೆ ಚೆನ್ನೈ ಸೂಪರ್ ಕಿಂಗ್ಸ್‌ ₹1.20 ಕೋಟಿ ನೀಡಿದೆ. 

ಆರ್‌ಸಿಬಿ ತೆಕ್ಕೆಗೆ ಚಾಮ ಮಿಲಿಂದ್

ಚಾಮ ಮಿಲಿಂದ್‌ಗೆ ₹25 ಲಕ್ಷ ನೀಡಿ ಆರ್‌ಸಿಬಿ ಖರೀದಿಸಿದೆ. 

ಗೋವಾದ ಸುಯಾಶ್ ಆರ್‌ಸಿಬಿ ತೆಕ್ಕೆಗೆ

ಗೋವಾ ಪರ ಆಡುವ ಸುಯಾಶ್ ಪ್ರಭುದೇಸಾಯಿ ಅವರನ್ನು ₹ 30 ಲಕ್ಷ ನೀಡಿ ಆರ್‌ಸಿಬಿ ಖರೀದಿ ಮಾಡಿದೆ.

ಪ್ರವೀಣ್ ದುಬೇ ಡೆಲ್ಲಿಗೆ; ಪ್ರೇರಕ್ ಮಂಕಡ್ ಪಂಜಾಬ್‌ಗೆ

ಕರ್ನಾಟಕದ ಪ್ರವೀಣ್‌ ದುಬೇ ಹಾಗೂ ಸೌರಾಷ್ಟ್ರದ ಪ್ರೇರಕ್ ಮಂಕಡ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪ್ರಾಂಚೈಸ್‌ಗಳು ಕ್ರಮವಾಗಿ ₹ 50 ಲಕ್ಷ ಮತ್ತು ₹ 20 ಲಕ್ಷ ನೀಡಿ ಖರೀದಿ ಮಾಡಿವೆ.

ಸಿಂಗಾಪುರ ಪ್ರತಿಭೆ ಟಿಮ್ ಡೇವಿಡ್‌ಗಾಗಿ ₹ 8.25 ಕೋಟಿ ಹೂಡಿದ ಮುಂಬೈ

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ವರೆಗೆ ಒಂದೂ ಪಂದ್ಯವಾಡದ ಸಿಂಗಾಪುರ ಪ್ರತಿಭೆ ಟಿಮ್ ಡೇವಿಡ್ ಅವರಿಗಾಗಿ ಮುಂಬೈ ಇಂಡಿಯನ್ಸ್ ತಂಡ ಬರೋಬ್ಬರಿ ₹ 8.25 ಕೊಟಿ ವ್ಯಯಿಸಿದೆ.

ಡೇವಿಡ್‌ಗೆ ₹ 40 ಲಕ್ಷ ಮೂಲ ಬೆಲೆ ಇತ್ತು.

ಒಡಿಶಾ ಪ್ರತಿಭೆ ಸುಭ್ರಾಂಶು ಸೇತುಪತಿ ಅವರನ್ನು ಚೆನ್ನೈ ತಂಡ ₹ 20 ಲಕ್ಷ ನೀಡಿ ಖರೀದಿಸಿದೆ.

ಇಂಗ್ಲೆಂಡ್‌ ಕ್ರಿಕೆಟಿಗ ಟೈಮಲ್ ಮಿಲ್ಸ್ ಅವರನ್ನು ಮುಂಬೈ ಇಂಡಿಯನ್ಸ್ ಪ್ರಾಂಚೈಸ್ ಒಂದೂವರೆ ಕೋಟಿ ನೀಡಿ ಖರೀದಿಸಿದೆ.

ಆ್ಯಡಂ ಮಿಲ್ನೆ ಅವರನ್ನು ಚೆನ್ನೈ ತಂಡ ₹ 1.90 ಕೋಟಿ ನೀಡಿ ಖರೀದಿಸಿದೆ.

ಆಸ್ಟ್ರೇಲಿಯಾದ ಎಡಗೈ ವೇಗಿ ಜೇಸನ್ ಬೆಹರೆನ್‌ಡ್ರಾಫ್ ಅವರನ್ನು ಆರ್‌ಸಿಬಿ ₹ 75 ಲಕ್ಷಕ್ಕೆ ಖರೀದಿಸಿದೆ.

ವೆಸ್ಟ್‌ಇಂಡೀಸ್‌ನ ಬಲಗೈ ವೇಗಿ ರೊಮಾರಿಯೊ ಶೇಫರ್ಡ್ ಅವರನ್ನು ಸನ್‌ರೈಸರ್ಸ್ ಪ್ರಾಂಚೈಸ್ ₹ 7.75 ಕೋಟಿಗೆ ಖರೀದಿಸಿದೆ.

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸ್ಪಿನ್ನರ್‌ ಮಿಚೇಲ್ ಸ್ಯಾಂಟ್ನರ್ ಅವರು ₹ 1.9 ಕೋಟಿಗೆ ಚೆನ್ನೈ ತಂಡಕ್ಕೆ ಬಿಕರಿಯಾಗಿದ್ದಾರೆ.

ಆರ್ಚರ್‌ ಅನ್ನು ತೆಕ್ಕೆಗೆ ಹಾಕಿಕೊಂಡ ಮುಂಬೈ

ಇಂಗ್ಲೆಂಡ್‌ನ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಬರೋಬ್ಬರಿ 8 ಕೋಟಿ ನೀಡಿ ಖರೀದಿಸಿದೆ.

ಈಗಾಗಲೇ ಜಸ್‌ಪ್ರೀತ್ ಅವರನ್ನೊಳಗೊಂಡಿರುವ ಮುಂಬೈ ಬೌಲಿಂಗ್ ಈಗ ಇನ್ನಷ್ಟು ಬಲಿಷ್ಠವಾಗಲಿದೆ.

ಡ್ಯಾನಿಯಲ್ ಸ್ಯಾಮ್ಸ್ ಮುಂಬೈಗೆ

ಆಸ್ಟ್ರೇಲಿಯಾದ ಆಲ್ರೌಂಡರ್ ಡ್ಯಾನಿಯಲ್ ಸ್ಯಾಮ್ಸ್ ಅವರನ್ನು ಈ ಬಾರಿ ಮುಂಬೈ ಇಂಡಿಯನ್ಸ್ ಖರೀದಿಸಿದೆ. ಕಳೆದ ಸಲ ಆರ್‌ಸಿಬಿ ಪರ ಆಡಿದ್ದ ಅವರಿಗಾಗಿ, ಮುಂಬೈ ₹ 2.6 ಕೋಟಿ ವ್ಯಯಿಸಿದೆ.

ಗಯಾನ ಪ್ರತಿಭೆಗಾಗಿ ₹ 1 ಕೋಟಿ ಹೂಡಿದ ಆರ್‌ಸಿಬಿ

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ಪರ ಆಡುವ ಗಯಾನದ ಪ್ರತಿಭೆ ಶೆರ್ಫಾನ್ ರುದರ್ಫೋರ್ಡ್ ಅವರನ್ನು ಆರ್‌ಸಿಬಿ ತಂಡ ₹ 1 ಕೋಟಿ ನೀಡಿ ಖರೀದಿಸಿದೆ.

ರಿಶಿ ಧವನ್ ಖರೀದಿಸಿದ ಪಂಜಾಬ್ ಕಿಂಗ್ಸ್

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಹಿಮಾಚಲ ಪ್ರದೇಶ ತಂಡವನ್ನು ಮುನ್ನಡೆಸಿದ್ದ ರಿಶಿ ಧವನ್, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅಮೋಘ ಪ್ರದರ್ಶನ ತೋರಿದ್ದರು. ಅವರನ್ನು ಪಂಜಾಬ್ ಕಿಂಗ್ಸ್ ತಂಡ ₹ 55 ಲಕ್ಷ ಕೊಟ್ಟು ಕೊಂಡುಕೊಂಡಿದೆ.

ವೆಸ್ಟ್‌ಇಂಡೀಸ್ ಕ್ರಿಕೆಟಿಗ ರಾವ್‌ಮೊನ್ ಪೋವೆಲ್ ಅವರನ್ನು ₹ 2.8 ಕೊಟಿ ನೀಡಿ ಡೆಲ್ಲಿ ಖರೀದಿಸಿದೆ.

ಬಿಕರಿಯಾಗದ ಕರುಣ್

ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಕರ್ನಾಟಕದ ಕರುಣ್ ನಾಯರ್ ಅವರನ್ನು ಖರೀದಿಸಲು ಯಾವುದೇ ಪ್ರಾಂಚೈಸ್ ಆಸಕ್ತಿ ತೋರಿಲ್ಲ.

ರಾಜ್ಯಕ್ಕೆ ರಣಜಿ ಗೆದ್ದುಕೊಟ್ಟ ನಾಯಕರಾಗಿರುವ ಕರುಣ್, ದೇಶೀ ಕ್ರಿಕೆಟ್‌ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ.

ಇಂಗ್ಲೆಂಡ್‌ ಕ್ರಿಕೆಟಿಗ ಅಲೆಕ್ಸ್ ಹೇಲ್ಸ್ ಅವರನ್ನು ಖರೀದಿಸಲು ಯಾವುದೇ ತಂಡ ಮುಂದೆಬಂದಿಲ್ಲ.

ನ್ಯೂಜಿಲೆಂಡ್ ಕ್ರಿಕೆಟಿಗ ಡಿವೋನ್ ಕಾನ್ವೆ ಅವರನ್ನು ಚೆನ್ನೈ ತಂಡ ₹ 1 ಕೋಟಿಗೆ ಖರೀದಿಸಿದೆ.

ನ್ಯೂಜಿಲೆಂಡ್ ಕ್ರಿಕೆಟಿಗ ಡಿವೋನ್ ಕಾನ್ವೆ ಅವರನ್ನು ಚೆನ್ನೈ ತಂಡ ₹ 1 ಕೋಟಿಗೆ ಖರೀದಿಸಿದೆ.

ನ್ಯೂಜಿಲೆಂಡ್‌ನ ಫಿನ್ ಅಲೆನ್ ಆರ್‌ಸಿಬಿಗೆ

ನ್ಯೂಜಿಲೆಂಡ್ ಕ್ರಿಕೆಟಿಗ ಫಿನ್ ಅಲೆನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸ್, ₹ 80 ಲಕ್ಷ ವ್ಯಯಿಸಿ ಖರೀದಿಸಿದೆ.

ಉತ್ತರ ಪ್ರದೇಶದ ಯುವ ಆಟಗಾರ ಯಶ್ ದಯಾಳ್ ಅವರನ್ನು ಗುಜರಾತ್ ಟೈಟಾನ್ಸ್ ಖರೀದಿಸಿದೆ. ಅವರಿಗೆ ₹ 3.20 ಕೋಟಿ ನೀಡಿದೆ.

ರಾಜವರ್ಧನ್ ಹಂಗಾರ್ಗೇಕರ್‌ಗೆ ಒಂದೂವರೆ ಕೋಟಿ

19 ವರ್ಷದೊಳಿಗಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಕಣಕ್ಕಿಳಿದಿದ್ದ ರಾಜವರ್ಧನ್ ಹಂಗಾರ್ಗೇಕರ್‌ ಅವರನ್ನು ಚೆನ್ನೈ ಸೂಪರ್ ಸಿಂಗ್ಸ್ ಪ್ರಾಂಚೈಸ್ ₹ 1.50 ಕೋಟಿ ನೀಡಿ ಖರೀದಿಸಿದೆ.

ವಿಶ್ವಕಪ್ ಹೀರೋ ರಾಜ್ ಬಾವಾ ಪಂಜಾಬ್‌ಗೆ

ಈ ಬಾರಿಯ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡದ ಹೀರೋ ಆಗಿ ಮೆರೆದ ರಾಜ್ ಬಾವಾ ಅವರನ್ನು ಪಂಜಾಬ್ ಕಿಂಗ್ಸ್ ಪಡೆ ಬರೋಬ್ಬರಿ ₹ 2 ಕೋಟಿ ನೀಡಿ ಖರೀದಿಸಿದೆ.

ಉಗಾಂಡ ವಿರುದ್ಧ ನಡೆದ ಪಂದ್ಯದಲ್ಲಿ ಬರೋಬ್ಬರಿ 162 ರನ್ ಚಚ್ಚಿದ್ದ ಬಾವಾ, ಭಾರತ 326 ರನ್ ಗಳ ಭಾರೀ ಜಯ ಸಾಧಿಸಲು ನೆರವಾಗಿದ್ದರು.

ಆರ್‌ಸಿಬಿ ಪ್ರಾಂಚೈಸ್ ₹ 95 ಲಕ್ಷ ನೀಡಿ ಮಹಿಪಾಲ್ ಲಾಮ್‌ರೋರ್ ಅವರನ್ನು ಖರೀದಿಸಿದೆ.

ವಿಶ್ವ ಚಾಂಪಿಯನ್ ಧುಳ್ ಡೆಲ್ಲಿಗೆ

2022ರ19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಯಶ್ ಧುಳ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ₹ 50 ಲಕ್ಷ ನೀಡಿ ಖರೀದಿಸಿದೆ.

ಡೆಲ್ಲಿ ತಮ್ಮ ನೆಚ್ಚಿನ ತಂಡ ಎಂದು ಈ ಮೊದಲು ಹೇಳಿಕೊಂಡಿದ್ದರು.

ವಿರಾಮದ ಬಳಿಕ ಬಿಡಿಂಗ್ ಮುಂದುವರಿಕೆ; ₹ 65 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಲಲಿತ್ ಯಾದವ್

ಆರೋಗ್ಯವಾಗಿದ್ದಾರೆ ಹಗ್ ಎಡ್ಮೀಡ್ಸ್

ಹರಾಜು ಪ್ರಕ್ರಿಯೆ ವೇಳೆ ಕುಸಿದು ಬಿದ್ದಿದ್ದ ಹರಾಜುದಾರ ಹಗ್ ಎಡ್ಮೀಡ್ಸ್ ಅವರು ಸದ್ಯ ಚೆನ್ನಾಗಿದ್ದಾರೆ ಎಂದು ಐಪಿಎಲ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದೆ.

ಹಗ್ ಎಡ್ಮೀಡ್ಸ್ ಅವರು ಮಾತನಾಡಿರುವ ವಿಡಿಯೊವನ್ನೂ ಹಂಚಿಕೊಳ್ಳಲಾಗಿದೆ.

ಊಟದ ವಿರಾಮ; ಬಳಿಕ ಮುಂದುವರಿಯಲಿದೆ ಹರಾಜು ಪ್ರಕ್ರಿಯೆ.

ಹೊಸ ಪ್ರಾಂಚೈಸ್ ಲಖನೌ ಸೂಪರ್ ಜೈಂಟ್ಸ್‌ ಮನನ್ ವೋಹ್ರಾ ಅವರಿಗೆ ₹ 20 ಲಕ್ಷ ನೀಡಿದೆ.

ಕೆಕೆಆರ್ ಪ್ರಾಂಚೈಸ್, ₹ 55 ಲಕ್ಷ ನೀಡಿ ರಿಂಕು ಸಿಂಗ್ ಅವರನ್ನು ಕೊಂಡುಕೊಂಡಿದೆ.

ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರನ್ನು ಖರೀದಿಸಲು ಯಾವುದೇ ಪ್ರಾಂಚೈಸ್ ಆಸಕ್ತಿ ತೋರಿಲ್ಲ.

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ರಾಂಚೈಸ್ ₹ 1.30 ಕೋಟಿ ನೀಡಿ ಜಯದೇವ್ ಉನದ್ಕತ್ ಅವರನ್ನು ಕೊಂಡುಕೊಂಡಿದೆ.

ವೆಸ್ಟ್ ಇಂಡೀಸ್ ತಂಡದ ಪ್ರಮುಖ ವೇಗಿ ಶೇಲ್ಡನ್ ಕಾರ್ಟ್ರೇಲ್ ಮತ್ತು ಆಸ್ಟ್ರೇಲಿಯಾದ ಬೌಲರ್ ನಾಥನ್ ಕಲ್ಟರ್‌ನೇಲ್ ಅವರನ್ನು ಖರೀದಿಸಲು ಯಾವುದೇ ತಂಡ ಆಸಕ್ತಿ ತೋರಿಲ್ಲ.

ಸೈನಿಗೆ ₹ 2.60 ಕೋಟಿ, ಸಂದೀಪ್‌ಗೆ ₹ 50 ಲಕ್ಷ

ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ನವದೀಪ್ ಸೈನಿ ಅವರನ್ನು ರಾಜಸ್ಥಾನ ರಾಯಲ್ಸ್ ತಂಡವು ₹ 2.60ಕೋಟಿ ನೀಡಿ ಖರೀದಿಸಿದೆ.

ಕಳೆದ ಆವೃತ್ತಿಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಬೌಲರ್ ಎನಿಸಿದ್ದ ಸಂದೀಪ್ ಶರ್ಮಾ ಈ ಬಾರಿ ಪಂಜಾಬ್ ಕಿಂಗ್ಸ್‌ ಪಾಲಾಗಿದ್ದಾರೆ. ಅವರಿಗೆ ₹ 50 ಲಕ್ಷ ನೀಡಲಾಗಿದೆ.

ದೆಹಲಿ ಕ್ಯಾಪಿಟಲ್ಸ್‌ ತಂಡವು ಬೌಲರ್‌ ಚೇತನ್ ಸಕಾರಿಯಾಗೆ ₹4.2 ಕೋಟಿ ಮೊತ್ತ ನೀಡಿ ಖರೀದಿಸಿದೆ

ದೆಹಲಿ ಕ್ಯಾಪಿಟಲ್ಸ್‌ ತಂಡವು ಮಧ್ಯಮ ವೇಗಿ ಖಲೀಲ್ ಅಹಮ್ಮದ್‌ಗೆ ₹5.25 ಕೋಟಿ ಮೊತ್ತ ನೀಡಿ ಖರೀದಿ ಮಾಡಿದೆ

ಮಾರ್ಕೊ ಜೆನ್ಸನ್ ಅವರನ್ನು ₹4.2 ಕೋಟಿ ಮೊತ್ತಕ್ಕೆ ಸನ್‌ ರೈಸರ್ಸ್‌ ತಂಡವು ಖರೀದಿಸಿದೆ

ಇಂಗ್ಲೆಂಡ್‌ನ ಬ್ಯಾಟರ್‌ ಲಿಯಾಮ್‌ ಲಿವಿಂಗ್‌ ಸ್ಟೋನ್‌ ಅವರನ್ನು ಪಂಜಾಬ್‌ ಕಿಂಗ್ಸ್‌ ತಂಡವು ₹11.50 ಕೋಟಿ ಮೊತ್ತಕ್ಕೆ ಖರೀದಿಸಿದೆ.

ಅಜಿಂಕ್ಯ ರಹಾನೆ ಅವರನ್ನು ಖರೀದಿಸಿದ ಕೆಕೆಆರ್‌

ಬ್ಯಾಟರ್‌ ಅಂಜಿಕ್ಯ ರಹಾನೆ ಅವರನ್ನು ₹1 ಕೋಟಿ ಮೊತ್ತಕ್ಕೆ ಕೆಕೆಆರ್‌ ತಂಡವು ಖರೀದಿಸಿದೆ.

ಶಾಬಾಜ್ ಅಹಮದ್ ಅವರನ್ನು ಆರ್‌ಸಿಬಿ ತಂಡವು ₹2.4 ಕೋಟಿಗೆ ಖರೀದಿಸಿದೆ

ಹರ್‌ಪ್ರೀತ್ ಬ್ರಾರ್‌ರನ್ನು ₹3.8 ಕೋಟಿಗೆ ಖರೀದಿಸಿದ ಪಂಜಾಬ್ ಕಿಂಗ್ಸ್

ಕಮಲೇಶ್ ನಾಗರ್‌ಕೋಟಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ₹1.1 ಕೋಟಿಗೆ ಖರೀದಿಸಿದೆ

ರಾಹುಲ್ ತೇವಾಟಿಯ ಅವರನ್ನು ಗುಜರಾತ್ ಟೈಟನ್ಸ್ ₹9 ಕೋಟಿಗೆ ಖರೀದಿಸಿದೆ

ಶಿವಂ ಮಾವಿ ಅವರನ್ನು ಕೆಕೆಆರ್ ₹7.25 ಕೋಟಿಗೆ ಖರೀದಿಸಿದೆ

ಶಾರೂಖ್ ಖಾನ್ ಅವರನ್ನು ಪಂಜಾಬ್ ಕಿಂಗ್ಸ್ ತಂಡವು ₹9 ಕೋಟಿಗೆ ಖರೀದಿಸಿದೆ

ಸರ್ಫರಾಜ್ ಖಾನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ₹20 ಲಕ್ಷಕ್ಕೆ ಖರೀದಿ ಮಾಡಿದೆ

ಅಭಿಷೇಕ್ ಶರ್ಮಾ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು ₹6.5 ಕೋಟಿಗೆ ಖರೀದಿಸಿದೆ

₹3.8 ಕೋಟಿಗೆ ರಾಜಸ್ಥಾನ್ ರಾಯಲ್ಸ್‌ಗೆ ರಿಯಾನ್ ಪರಾಗ್

ರಾಹುಲ್ ತ್ರಿಪಾಠಿ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು ₹8.5 ಕೋಟಿಗೆ ಖರೀದಿಸಿದೆ

₹20 ಲಕ್ಷಕ್ಕೆ ಅಶ್ವಿನ್ ಹೆಬ್ಬಾರ್ ಅವರನ್ನು ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್

₹3 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲಾದ ಡೆವಾಲ್ಡ್ ಬ್ರೆವಿಸ್

ಅಭಿನವ್ ಸದಾರನ್‌ಗನಿ ಅವರನ್ನು ₹2.6 ಕೋಟಿಗೆ ಖರೀದಿಸಿದ ಗುಜರಾತ್ ಟೈಟನ್ಸ್

ಪ್ರಿಯಂ ಗಾರ್ಗ್ ಅವರನ್ನು ₹20 ಲಕ್ಷಕ್ಕೆ ಖರೀದಿಸಿದ ಸನ್‌ರೈಸರ್ಸ್ ಹೈದರಾಬಾದ್

ಯಜುವೇಂದ್ರ ಚಾಹಲ್ ಅವರು ₹6.5 ಕೋಟಿಗೆ ರಾಜಸ್ಥಾನ್ ರಾಯಲ್ಸ್‌ಗೆ ಬಿಕರಿಯಾಗಿದ್ದಾರೆ

ರಾಹುಲ್ ಚಾಹರ್ ₹5.25 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ

ಕುಲದೀಪ್ ಯಾದವ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ₹2 ಕೋಟಿಗೆ ಖರೀದಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಶಾರ್ದೂಲ್ ಠಾಕೂರ್

ಭಾರತದ ವೇಗಿ ಶಾರ್ದೂಲ್ ಠಾಕೂರ್ ಅವರಿಗೆ ₹10.75 ಕೋಟಿ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದೆ. 
 

₹10 ಕೋಟಿಗೆ ರಾಯಲ್ಸ್‌ ಪಾಲಾದ ಕನ್ನಡಿಗ ಪ್ರಸಿದ್ಧ ಕೃಷ್ಣ

ಕನ್ನಡಿಗ ವೇಗಿ ಪ್ರಸಿದ್ಧ ಕೃಷ್ಣ ಅವರಿಗೆ ₹10 ಕೋಟಿ ನೀಡಿ ರಾಜಸ್ಥಾನ್ ರಾಯಲ್ಸ್ ಖರೀದಿಸಿದೆ. 

ಪಂಜಾಬ್‌ಗೆ ಬಿಕರಿಯಾದ ಜಾನಿ ಬೆಸ್ಟೊ

ಇಂಗ್ಲೆಂಡ್ ಆಟಗಾರ ಜಾನಿ ಬೆಸ್ಟೊಗೆ ₹6.75 ಕೋಟಿ ನೀಡಿ ಪಂಜಾಬ್ ಕಿಂಗ್ಸ್ ಖರೀದಿಸಿದೆ. ಬೆಸ್ಟೊ ಕಳೆದ ಆವೃತ್ತಿಯಲ್ಲಿ ಹೈದರಾಬಾದ್ ತಂಡದ ಪರ ಆಡಿದ್ದರು.

ಆರ್‌ಸಿಬಿಗೆ ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್ ಅವರಿಗೆ ₹5.50 ಕೋಟಿ ನೀಡಿ ಆರ್‌ಸಿಬಿ ತಂಡ ಖರೀದಿಸಿದೆ. 

ಹೈದರಾಬಾದ್ ಪಾಲಾದ ನಟರಾಜನ್‌

ವೇಗಿ ಟಿ.ನಟರಾಜನ್ ಅವರನ್ನು ₹4 ಕೋಟಿಗೆ ಸನ್‌ರೈಸರ್ಸ್‌ ಹೈದರಾಬಾದ್‌ ಖರೀದಿಸಿದೆ. 

ಸಿಎಸ್‌ಕೆ ಪಾಲಾದ ದೀಪಕ್ ಚಾಹರ್

ಟೀಮ್ ಇಂಡಿಯಾದ ವೇಗಿ ದೀಪಕ್ ಚಾಹರ್ ಅವರಗೆ ₹14 ಕೋಟಿ ನೀಡಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಖರೀದಿಸಿದೆ.

ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ ₹15.25 ಕೋಟಿಗೆ ಖರೀದಿಸಿದೆ

ಇಂದು (ಶನಿವಾರ) ಈವರೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅತಿಹೆಚ್ಚು ಮೊತ್ತಕ್ಕೆ ಖರೀದಿಯಾದ ಆಟಗಾರನಾಗಿ ಇಶಾನ್ ಕಿಶನ್ ಹೊರಹೊಮ್ಮಿದ್ದಾರೆ.

ಅಂಬಟಿ ರಾಯುಡು ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ₹6.75 ಕೋಟಿಗೆ ಖರೀದಿಸಿದೆ

ಅಫ್ಗಾನಿಸ್ತಾನದ ಆಲ್‌ರೌಂಡರ್, ₹1 ಕೋಟಿ ಮೂಲ ಬೆಲೆ ಹೊಂದಿದ್ದ ಮೊಹಮ್ಮದ್ ನಬಿಯನ್ನು ಯಾವುದೇ ತಂಡವು ಖರೀದಿಸಿಲ್ಲ

ಮಿಚೆಲ್ ಮಾರ್ಷ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ₹6.5 ಕೋಟಿಗೆ ಖರೀದಿಸಿದೆ

ಕೃಣಾಲ್ ಪಾಂಡ್ಯ ಅವರನ್ನು ಲಖನೌ ಸೂಪರ್ ಜೈಂಟ್ಸ್ ತಂಡವು ₹8.25 ಕೋಟಿ ಮೊತ್ತಕ್ಕೆ ಖರೀದಿಸಿದೆ

ವಾಷಿಂಗ್ಟನ್ ಸುಂದರ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು ₹8.75 ಕೋಟಿಗೆ ಖರೀದಿಸಿದೆ

ಶ್ರೀಲಂಕಾದ ವಾಣಿಂದು ಹಸರಂಗ ಅವರನ್ನು ₹10.75 ಕೋಟಿ ನೀಡಿ ಆರ್‌ಸಿಬಿ ಖರೀದಿಸಿದೆ.

ಕುಸಿದು ಬಿದ್ದು ಚೇತರಿಸುತ್ತಿರುವ ಹರಾಜುದಾರ ಹಗ್ ಎಡ್ಮೀಡ್ಸ್ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಹೀಗಾಗಿ ಚಾರು ಶರ್ಮಾ ಅವರು ಹರಾಜು ಪ್ರಕ್ರಿಯೆ ನಡೆಸಿಕೊಡಲಿದ್ದಾರೆ ಎಂದು ಐಪಿಎಲ್ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಹರಾಜುದಾರ ಹಗ್ ಎಡ್ಮೀಡ್ಸ್ ಚೇತರಿಸಿಕೊಂಡಿದ್ದಾರೆ. ಊಟದ ವಿರಾಮದ ಬಳಿಕ 3.30ಕ್ಕೆ ಹರಾಜು ಪ್ರಕ್ರಿಯೆ ಪುನರಾರಂಭಗೊಳ್ಳಲಿದೆ.

ಬಿಡ್ಡಿಂಗ್ ತಾತ್ಕಾಲಿತ ಸ್ಥಗಿತ

ಹರಾಜುದಾರರಲ್ಲೊಬ್ಬರಾದ ಹಗ್ ಎಡ್ಮೀಡ್ಸ್ ಕುಸಿದು ಬಿದ್ದಿದ್ದು, ಬಿಡ್ಡಿಂಗ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ದೀಪಕ್ ಹೂಡಾಗೆ ₹ 5.75 ಕೋಟಿ

ಹೊಸ ಪ್ರಾಂಚೈಸ್ ಲಖನೌ ಸೂಪರ್ ಜೈಂಟ್ಸ್ ತಂಡ ದೀಪಕ್ ಹೂಡಾ ಅವರನ್ನು ಖರೀದಿಸಿದೆ.

ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಬಲ ತುಂಬಿದ್ದ ಮತ್ತು ಬೌಲಿಂಗ್‌ನಲ್ಲಿಯೂ ಕೊಡುಗೆ ನೀಡಿದ್ದ ಹೂಡಾ, ₹  5.75 ಗಿಟ್ಟಿಸಿದ್ದಾರೆ.

ಆರ್‌ಸಿಬಿ ತೆಕ್ಕೆಗೆ ಹರ್ಷಲ್

ಕಳೆದ ಆವೃತ್ತಿಯಲ್ಲಿ ಅತಿಹೆಚ್ಚು ವಿಕೆಟ್ ಉರುಳಿಸಿದ್ದ ಹರ್ಷಲ್ ಪಟೇಲ್ ಅವರನ್ನು ಕೊಂಡುಕೊಳ್ಳುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ. ಅವರಿಗಾಗಿ ₹ 10.75 ಕೋಟಿ ನೀಡಿದೆ.

ರಾಣಾ ಉಳಿಸಿಕೊಂಡ ಕೆಕೆಆರ್

ಆರಂಭಿಕ ಬ್ಯಾಟರ್ ನಿತೀಶ್ ರಾಣಾ ಅವರನ್ನು ತನ್ನಲ್ಲೇ ಉಳಿಸಿಕೊಳ್ಳಲು ಕೆಕೆಆರ್ ಯಶಸ್ವಿಯಾಗಿದೆ. ಅವರಿಗೆ ₹ 8 ಕೋಟಿ ನೀಡಲಾಗಿದೆ.

ಬಿಕರಿಯಾಗದ ಶಕೀಬ್

ಬಾಂಗ್ಲಾದೇಶ ಕ್ರಿಕೆಟ್ ತಂಡದ ಪ್ರಮುಖ ಆಲ್‌ರೌಂಡರ್ ಹಾಗೂ ಕೆಕೆಆರ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಶಕೀಬ್ ಅಲ್‌ಹಸನ್ ಅವರನ್ನು ಯಾವುದೇ ತಂಡ ಖರೀದಿಸಿಲ್ಲ.

ಜೇಸನ್ ಹೋಲ್ಡರ್‌ಗೆ ₹ 8.75 ಕೋಟಿ

ಕಳೆದ ಆವೃತ್ತಿಗಳಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿ ಆಡಿದ್ದ ಜೇಸನ್ ಹೋಲ್ಡರ್ ಅವರಿಗೆ ₹ 8.75 ಕೋಟಿ ನೀಡಿ, ಲಖನೌ ಸೂಪರ್‌ ಜೈಂಟ್ಸ್ ತಂಡ ಖರೀದಿಸಿದೆ.

ವೆಸ್ಟ್ ಇಂಡೀಸ್‌ನ ಈ ಆಲ್‌ರೌಂಡರ್‌ಗಾಗಿ ಚೆನ್ನೈ, ಮುಂಬೈ ಮತ್ತು ರಾಜಸ್ಥಾನ ಪ್ರಾಂಚೈಸ್‌ಗಳು ಪೈಪೋಟಿ ನಡೆಸಿದ್ದವು.

ಚೆನ್ನೈ ತಂಡದಲ್ಲೇ ಉಳಿದ ಬ್ರಾವೊ

ವೆಸ್ಟ್‌ ಇಂಡೀಸ್ ಕ್ರಿಕೆಟ್ ತಂಡದ ಆಲ್‌ರೌಂಡರ್ ಡ್ವೇನ್ ಬ್ರಾವೊ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ₹ 4.40 ಕೋಟಿ ನೀಡಿ ತನ್ನಲ್ಲೇ ಉಳಿಸಿಕೊಂಡಿದೆ.

ರಾಜಸ್ಥಾನ್ ಪರ ಆಡಲಿರುವ ಕನ್ನಡಿಗ ದೇವದತ್ತ ಪಡಿಕ್ಕಲ್

ಸ್ಟೀವನ್ ಸ್ಮಿತ್ ಅವರಿಗೂ ಅದೃಷ್ಟ ಸಾಥ್ ಕೊಡಲಿಲ್ಲ - ಮೊದಲ ಸುತ್ತಿನ ಬಿಡ್‌ನಲ್ಲಿ ಮಾರಾಟವಾಗಿಲ್ಲ...

ಅಚ್ಚರಿ - ಮೊದಲ ಸುತ್ತಿನ ಬಿಡ್‌ನಲ್ಲಿ ಸುರೇಶ್ ರೈನ್ ಅನ್ ಸೋಲ್ಡ್

ದೇವದತ್ತ ಪಡಿಕ್ಕಲ್

ಮಾರಾಟವಾದ ಬೆಲೆ: ₹7.75 ಕೋಟಿ
ಖರೀದಿಸಿದ ತಂಡ: ರಾಜಸ್ಥಾನ್ ರಾಯಲ್ಸ್

ಹೊಸ ತಂಡದ ಪಾಲಾದ ಮನೀಶ್ ಪಾಂಡೆ

ಡೇವಿಡ್ ಮಿಲ್ಲರ್ ಅವರನ್ನು ಖರೀದಿಸಲು ಯಾವ ಫ್ರಾಂಚೈಸಿಯೂ ಆಸಕ್ತಿ ತೋರಲಿಲ್ಲ...

ಜೇಸನ್ ರಾಯ್

ಮಾರಾಟವಾದ ಬೆಲೆ: ₹2 ಕೋಟಿ
ಖರೀದಿಸಿದ ತಂಡ: ಗುಜರಾತ್ ಟೈಟನ್ಸ್

ಈ ಬಾರಿಯೂ ಚೆನ್ನೈ ಪರ ಆಡಲಿರುವ ರಾಬಿನ್ ಉತ್ತಪ್ಪ

ಮೂಲ ಬೆಲೆ: ₹2 ಕೋಟಿ
ಮಾರಾಟವಾದ ಬೆಲೆ: ₹2 ಕೋಟಿ
ಖರೀದಿಸಿದ ತಂಡ: ಚೆನ್ನೈ ಸೂಪರ್ ಕಿಂಗ್ಸ್

ಶಿಮ್ರಾನ್ ಹೆಟ್ಮೆಯರ್

ಮಾರಾಟವಾದ ಬೆಲೆ: ₹8.5 ಕೋಟಿ
ಖರೀದಿಸಿದ ತಂಡ: ರಾಜಸ್ಥಾನ್ ರಾಯಲ್ಸ್ 

ಸರಿಯಾದ ದಿಕ್ಕಿನತ್ತ ಸಾಗುತ್ತಿದ್ದೇವೆ: ಆರ್‌ಸಿಬಿ ಕೋಚ್ ಮೈಕ್ ಹೆಸನ್

ಲಖನೌ ತಂಡ ಸೇರಿದ ಮನೀಶ್ ಪಾಂಡೆ

ಮನೀಶ್ ಪಾಂಡೆ

ಮೂಲ ಬೆಲೆ: ₹1 ಕೋಟಿ
ಮಾರಾಟವಾದ ಬೆಲೆ: ₹4.6 ಕೋಟಿ
ಖರೀದಿಸಿದ ತಂಡ: ಲಖನೌ ಸೂಪರ್ ಜೈಂಟ್ಸ್

ಬಲ್ಲೆ ಬಲ್ಲೆ ಹೇಳಲಿರುವ ಕಗಿಸೊ ರಬಾಡ...

ಪ್ಯಾಟ್ ಕಮಿನ್ಸ್ ಅವರನ್ನು ಸ್ವಾಗತಿಸಿದ ಕೆಕೆಆರ್

ಆರ್‌ಸಿಬಿಯಲ್ಲಿ ಬಾಕಿ ಉಳಿದಿರುವ ಪರ್ಸ್ ಮೊತ್ತ: ₹50 ಕೋಟಿ

ಆರ್‌ಸಿಬಿಗೆ ಎಂಟ್ರಿ ಕೊಟ್ಟ ಡುಪ್ಲೆಸಿ

ಮೊದಲ ಬಿಡ್ ಧವನ್, ಕೆಕೆಆರ್ ಪಾಲಾದ ಅಯ್ಯರ್

ಹೊಸ ತಂಡ ಲಖನೌ ಸೇರಿದ ಡಿಕಾಕ್

ಐಪಿಎಲ್ ಮೆಗಾ ಹರಾಜು ಮುಖ್ಯಾಂಶಗಳು

ಕ್ವಿಂಟನ್ ಡಿಕಾಕ್

ಮಾರಾಟವಾದ ಬೆಲೆ: ₹6.75 ಕೋಟಿ
ಖರೀದಿಸಿದ ತಂಡ: ಲಖನೌ ಸೂಪರ್ ಜೈಂಟ್ಸ್

ಗುಜರಾತ್ ಟೈಟನ್ಸ್ ಪರ ದಾಳಿ ಮಾಡಲಿರುವ ಶಮಿ

ಫಫ್ ಡುಪ್ಲೆಸಿ

ಮಾರಾಟವಾದ ಬೆಲೆ: ₹7 ಕೋಟಿ
ಖರೀದಿಸಿದ ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮೊಹಮ್ಮದ್ ಶಮಿ

ಮಾರಾಟವಾದ ಬೆಲೆ: ₹6.25 ಕೋಟಿ
ಖರೀದಿಸಿದ ತಂಡ: ಗುಜರಾತ್ ಟೈಟನ್ಸ್

ಶ್ರೇಯಸ್ ಅಯ್ಯರ್

ಮೂಲ ಬೆಲೆ: ₹12.25 ಕೋಟಿ
ಖರೀದಿಸಿದ ತಂಡ: ಕೋಲ್ಕತ್ತ ನೈಟ್ ರೈಡರ್ಸ್

ಟ್ರೆಂಟ್ ಬೌಲ್ಟ್

ಮಾರಾಟವಾದ ಬೆಲೆ: ₹8 ಕೋಟಿ
ಖರೀದಿಸಿದ ತಂಡ: ರಾಜಸ್ಥಾನ್ ರಾಯಲ್ಸ್

ಕಗಿಸೊ ರಬಾಡ

ಮಾರಾಟವಾದ ಬೆಲೆ: ₹9.25 ಕೋಟಿ
ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್ 

ಪ್ಯಾಟ್ ಕಮಿನ್ಸ್

ಮಾರಾಟವಾದ ಬೆಲೆ: ₹7.25 ಕೋಟಿ
ಖರೀದಿಸಿದ ತಂಡ: ಕೋಲ್ಕತ್ತ ನೈಟ್ ರೈಡರ್ಸ್

ರಾಜಸ್ಥಾನ್ ತಂಡಕ್ಕೆ ಅಶ್ವಿನ್

ರವಿಚಂದ್ರನ್ ಅಶ್ವಿನ್

ಮೂಲ ಬೆಲೆ: ₹2 ಕೋಟಿ
ಮಾರಾಟವಾದ ಬೆಲೆ: ₹5 ಕೋಟಿ
ಖರೀದಿಸಿದ ತಂಡ: ರಾಜಸ್ಥಾನ್ ರಾಯಲ್ಸ್
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.