ಬೆಂಗಳೂರು: ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮೊದಲ ದಿನದ ಹರಾಜಿನಲ್ಲಿ ರಾಯಲ್ ಚಾಲೆಂರ್ಸ್ ಬೆಂಗಳೂರು ಫ್ರಾಂಚೈಸಿಯು ಮಿಶ್ರಫಲವನ್ನು ಕಂಡಿದೆ.
ಕೆಲವು ಪ್ರಮುಖ ಆಟಗಾರರನ್ನು ಖರೀದಿಸಲು ಆರ್ಸಿಬಿ ಆಸಕ್ತಿ ತೋರದಿರುವುದು ಅಭಿಮಾನಿಗಳಲ್ಲಿ ನಿರಾಸೆಗೆ ಕಾರಣವಾಗಿದೆ.
ಇದರ ನಡುವೆಯೂ ಕೆಲವೊಂದು ಗಮನಾರ್ಹ ಖರೀದಿಗಳನ್ನು ಮಾಡುವಲ್ಲಿ ಯಶಸ್ವಿಯಾಗಿದೆ.
ಆರ್ಸಿಬಿ ಇಂದು ಅತಿ ಹೆಚ್ಚು ₹12.50 ನೀಡಿ ಜೋಶ್ ಹ್ಯಾಜಲ್ವುಡ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಹ್ಯಾಜಲ್ವುಡ್ ತವರು ತಂಡಕ್ಕೆ ಮರಳಲಿದ್ದಾರೆ.
ಎರಡು ದಿನಗಳ ಕಾಲ ನಡೆಯುತ್ತಿರುವ ಮೆಗಾ ಹರಾಜಿನ ಮೊದಲ ದಿನದ ಆರ್ಸಿಬಿ ಫ್ರಾಂಚೈಸಿ ಖರೀದಿಸಿದ ಆಟಗಾರರ ಪಟ್ಟಿ ಇಲ್ಲಿದೆ.
ಜೋಶ್ ಹ್ಯಾಜಲ್ವುಡ್
ಖರೀದಿ ಮೊತ್ತ: ₹12.50 ಕೋಟಿ
ಫಿಲ್ ಸಾಲ್ಟ್
ಖರೀದಿ ಮೊತ್ತ: ₹11.50 ಕೋಟಿ
ಜಿತೇಶ್ ಶರ್ಮಾ
ಖರೀದಿ ಮೊತ್ತ: ₹11 ಕೋಟಿ
ಲಿಯಾಮ್ ಲಿವಿಂಗ್ಸ್ಟೋನ್
ಖರೀದಿ ಮೊತ್ತ: ₹8.75 ಕೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.