ನವದೆಹಲಿ: ಕರ್ನಾಟಕದ ಮಯಂಕ್ ಅಗರವಾಲ್ ಅವರು ಇರಾನಿ ಕಪ್ ಕ್ರಿಕೆಟ್ ಪಂದ್ಯದಲ್ಲಿ ‘ರೆಸ್ಟ್ ಆಫ್ ಇಂಡಿಯಾ‘ ತಂಡದ ನಾಯಕತ್ವ ವಹಿಸಲಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಾರ್ಚ್ 1ರಿಂದ ಇರಾನಿ ಕಪ್ ಪಂದ್ಯ ನಡೆಯಲಿದೆ. ರೆಸ್ಟ್ ಆಫ್ ಇಂಡಿಯಾ ಮತ್ತು ಹೋದ ಬಾರಿಯ ರಣಜಿ ಚಾಂಪಿಯನ್ ಮಧ್ಯಪ್ರದೇಶ ತಂಡಗಳು ಸೆಣಸಲಿವೆ.
ಇತ್ತೀಚೆಗೆ ಮುಗಿದ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಮಯಂಕ್ ಗರಿಷ್ಠ ರನ್ ಗಳಿಸಿದ ಆಟಗಾರನಾಗಿದ್ದಾರೆ. ಭಾರತ ಟೆಸ್ಟ್ ತಂಡದಲ್ಲಿ ಮರಳಿ ಸ್ಥಾನ ಪಡೆಯುವ ಕಾತರದಲ್ಲಿರುವ ಅವರು, ಇರಾನಿ ಕಪ್ ಪಂದ್ಯದಲ್ಲಿ ಬಂಗಾಳದ ಅಭಿಮನ್ಯು ಈಶ್ವರನ್ ಜೊತೆಗೂಡಿ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
ಸರ್ಫರಾಜ್ ಅಲಭ್ಯ: ಮುಂಬೈ ಬ್ಯಾಟರ್ ಸರ್ಫರಾಜ್ ಖಾನ್ ಅವರು ಇರಾನಿ ಕಪ್ ಪಂದ್ಯದಿಂದ ಹೊರಗುಳಿದಿದ್ದಾರೆ.
ಐಪಿಎಲ್ ಫ್ರಾಂಚೈಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಬಿರದಲ್ಲಿ ಪಾಲ್ಗೊಂಡಿದ್ದ ಸರ್ಫರಾಜ್ ಅವರ ಎಡಗೈ ತೋರುಬೆರಳಿಗೆ ಗಾಯವಾಗಿದೆ. ಇರಾನಿ ಕಪ್ ಪಂದ್ಯದಲ್ಲಿ ‘ರೆಸ್ಟ್ ಆಫ್ ಇಂಡಿಯಾ’ ತಂಡವನ್ನು ಅವರು ಪ್ರತಿನಿಧಿಸಬೇಕಿತ್ತು.
ತಂಡಗಳು: ರೆಸ್ಟ್ ಆಫ್ ಇಂಡಿಯಾ: ಮಯಂಕ್ ಅಗರವಾಲ್ (ನಾಯಕ), ಸುದೀಪ್ ಕುಮಾರ್ ಘರಾಮಿ, ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಹರ್ವಿಕ್ ದೇಸಾಯಿ, ಮುಕೇಶ್ ಕುಮಾರ್, ಅತಿತ್ ಶೇಠ್, ಚೇತನ್ ಸಕಾರಿಯಾ, ನವದೀಪ್ ಸೈನಿ, ಉಪೇಂದ್ರ ಯಾದವ್, ಮಯಂಕ್ ಮಾರ್ಕಂಡೆ, ಸೌರಭ್ ಕುಮಾರ್, ಆಕಾಶ್ ದೀಪ್, ಬಿ. ಇಂದ್ರಜಿತ್, ಪುಲಕೀತ್ ನಾರಂಗ್, ಯಶ್ ಧುಲ್.
ಮಧ್ಯಪ್ರದೇಶ: ಹಿಮಾಂಶು ಮಂತ್ರಿ (ನಾಯಕ), ರಜತ್ ಪಾಟಿದಾರ್, ಯಶ್ ದುಬೆ, ಹರ್ಷ್ ಗಾವ್ಳಿ, ಶುಭಂ ಶರ್ಮಾ, ವೆಂಕಟೇಶ್ ಅಯ್ಯರ್, ಅಕ್ಷತ್ ರಘು ವಂಶಿ, ಅಮನ್ ಸೋಲಂಕಿ, ಕುಮಾರ್ ಕಾರ್ತಿಕೇಯ, ಸಾರಾಂಶ್ ಜೈನ್, ಅವೇಶ್ ಖಾನ್, ಅಂಕಿತ್ ಕುಶ್ವಾಹ್, ಗೌರವ್ ಯಾದವ್, ಅನುಭವ್ ಅಗರವಾಲ್, ಮಿಹಿರ್ ಹಿರ್ವಾನಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.