ADVERTISEMENT

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವೇಗದ ದ್ವಿಶತಕ ಸಿಡಿಸಿ ದಾಖಲೆ ಬರೆದ ಇಶಾನ್‌ ಕಿಶನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2022, 13:27 IST
Last Updated 10 ಡಿಸೆಂಬರ್ 2022, 13:27 IST
ದ್ವಿಶತಕ ಗಳಿಸಿದ ಇಶಾನ್‌ ಕಿಶನ್‌ ಸಂಭ್ರಮ
ದ್ವಿಶತಕ ಗಳಿಸಿದ ಇಶಾನ್‌ ಕಿಶನ್‌ ಸಂಭ್ರಮ    

ಚಿತ್ತಗಾಂಗ್: ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಏಕದಿನ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ವೇಗದ ದ್ವಿಶತಕ ಸಿಡಿಸಿ ಇಂದು ದಾಖಲೆ ಬರೆದಿದ್ದಾರೆ.

24ರ ಹರೆಯದ ಇಶಾನ್‌ ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ 126 ಎಸೆತಗಳಲ್ಲಿ 200 ರನ್‌ ಗಳಿಸಿದರು.

ಈ ಹಿಂದೆ, 2015ರಲ್ಲಿ ವೆಸ್ಟ್‌ ಇಂಡೀಸ್‌ ಆಟಗಾರ ಕ್ರಿಸ್‌ ಗೇಲ್‌ ಅವರು, ಜಿಂಬಾಬ್ವೆ ವಿರುದ್ಧ 138 ಎಸೆತಗಳಲ್ಲಿ ದ್ವಿಶತಕ ಸಾಧನೆ ಮಾಡಿದ್ದರು. ಇಂದು ಇಶಾನ್‌ ಕಿಶನ್‌ ಆ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ADVERTISEMENT

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಏಳನೇ ಬ್ಯಾಟರ್ ಇಶಾನ್ ಎನಿಸಿಕೊಂಡಿದ್ದಾರೆ.

ಬಾಂಗ್ಲಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಇಶಾನ್‌ 131 ಬಾಲ್‌ಗಳಲ್ಲಿ ಒಟ್ಟು 210 ರನ್‌ ಗಳಿಸಿದರು. ಇಶಾನ್‌ ದ್ವಿಶತಕದ ನೆರವಿನೊಂದಿಗೆ ಭಾರತ 50 ಓವರ್‌ಗಳಲ್ಲಿ 409ರನ್‌ ಗಳಿಸಿದೆ. ಇದೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರು ಔಟಾಗದೇ 113 (91) ರನ್‌ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.